ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿಂದಾಸ್ತುತಿಗಳು ಎನ್ನ ಕೈಬಿಡುವೆಯೇನೋ ಪ ನಿನ್ನ ನಂಬಿದೆನಯ್ಯ ಭಕ್ತವತ್ಸಲನೆಂದು ಭಾರ ನಿನಗಿರೆ ಅ.ಪ ತಾಪಸಿಯಂತೆ ನಿನ್ನ ವಕ್ಷವನೊದ್ದು ತಾಪವನು ತೋರ್ಪಿದೆನೇನೋ ಗೋಪಿಯಂದದೆ ನಿನ್ನ ಒರಳಿಗೆ ಬಿಗಿದೆನೇ ಭೂಪ ಶಿಶುಪಾಲನಂದದೆ ಬೈದೆನೇ [ಚಾಪವಿಟ್ಟು] ಭೀಷ್ಮನಂದದೆ ಕಾದಿಪೆನೇನೋ ಶ್ರೀಪತಿ ನೀನೆನ್ನ ದೂರ ಮಾಡುವೆಯಲ್ಲ 1 ಜಾರಚೋರನು ನೀನೆಂದು ಯಶೋದಗೆ ದೂರು ಹೇಳದೆನೇ ಕೌರವನಂತೆ ಕಂಬಕೆ ಕಟ್ಟಿರೆಂದೆನೆ ಸಾರಿದೆನೇನೋ ಸತ್ರಾಜಿತನಂತೆ ಚಾರುರತ್ನವ ಕದ್ದ ಅಪರಾಧಿ ನೀನೆಂದು ಆ ರುಕ್ಮನಂತೆ ನಾರಿಚೋರನೆಂದೆನೆ 2 ಪುರುಹೂತನಂತೆ ನಾನು ಮಳೆಯಕರೆದು ಗಿರಿಯನ್ನು ಹೊರಿಸಿದೆನೇ ಧರಣಿಯ ಬಲಿ[ಯಿಂದ ಬೇಡುತಲಿರುವಾಗ ವರಮುನಿಯಂತೆ ಕಿಂಡಿಯ ಮುಚ್ಚಿದೆನೆ] ನರನಂತೆ ರಥವ ನಡಸೆಂದು ಹೇಳಿದೆನೇನೋ ಉರಗನಂತೆ ಕಟ್ಟಿದೆನೇ ಮಾಂಗಿರಿರಂಗ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್