ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿತ್ಯ ಶುಭಮಂಗಳಂ ಪ. ಮಂಗಳಂ ಶ್ರೀ ಭೂಮಿದೇವಿಯ ರಮಣಗೆ ಮಂಗಳಂ ಸದ್ಗುಣಗಣಪೂರ್ಣಗೆ ಮಂಗಳಂ ನಿರ್ದೋಷ ನಿಗಮತತಿ ವೇದ್ಯನಿಗೆ ಮಂಗಳಂ ಶ್ರೀ ವೇಂಕಟಾಧೀಶಗೆ 1 ವಂದಾರು ಸುರವೃಂದ ರುಚಿರಮಣಿಮಯ ಮಕುಟ ಸಂದೋಹ ಸಂಘಟಿತಪದಪೀಠಗೆ ಇಂದಿರಾಕರಕಮಲರಂಜಿತ ಧ್ವಜವಜ್ರ ಸಂದಿಪ್ಪ ಪಾದಾದಿ ಶುಭರೇಖಗೆ 2 ದಿವ್ಯನಖಮಣಿರಾಗರಂಜಿತಾಂಗುಲಿ ರಮ್ಯ ಭವ್ಯ ಮಂಗಳದಾಯಿ ಭಯಹಾರಿಗೆ ನವ್ಯ ಜಲರುಹಭಾಸ ಮುನಿಜನಾರ್ಚಿತ ಪುಣ್ಯ ಸೇವ್ಯ ಗಂಗಾಜನಕ ಶ್ರೀಚರಣಗೆ 3 ವರಕನಕವನಯುತ ಉರುನಿತಂಬದ್ವಯಗೆ ಸರಸಕೇಳೀವಾಸಸಜ್ಜಘನಕೆ ಸ್ಥಿರರತ್ನ ಮೇಖಲಾ ಸುಕಲಾಪ ಭೃತ್ಕಟಿಗೆ ಹೃ- ತ್ಸರಸಿಜಾಸನಜನಿತ ಶುಭನಾಭಿಗೆ 4 ಭುವನ ಪೂರಿತ ವಳಿತ್ರಯರಾಜದುದರಗೆ ವಿವಿಧ ಕುಸುಮಾಕಲಿತ ಸುಮಮಾಲಿಗೆ ಕೌಸ್ತುಭ ಶ್ರೀವತ್ಸ ನವಹಾರಕೃತ ರಮಾಶ್ರಿತ ವಕ್ಷಕೆ 5 ದೈತ್ಯಜನತಿಮಿರಹರ ವರದೀಪ್ತಿ ಚಕ್ರಕೆ ಶತ್ರುಭೀಷಣ ಘನಧ್ವನಿ ಶಂಖಕೆ ಗೋತ್ರÀಪತಿ(ತಿಯ?) ಸಮಬಲ ಪ್ರೋದ್ಭಾಸಿ ಸದ್ಗದೆಗೆ ಶ್ರಿತಜನ ಭಯಹಾರಿ ವರಪದ್ಮಕ್ಕೆ 6 ಕಂದರ ವದನಕೆ ನಾಸಿಕ ಕಾಲ ಸನ್ಮುಖಕಮಲಕೆ ಅರುವಾರಿಜನೇತ್ರ ಶೋಭನ ಭ್ರೂಯುಗಳ ವರ ಫಾಲತಿಲಕ ಕುಂತಳರಾಯಗೆ 7 ಕಮನೀಯ ಕರ್ಣಯುಗ ರಕ್ತಕುಂಡಲ ಲಲಿತ ವಿಮಲದರ್ಪಣ ಭಾಸ ಗಂಡಯುಗಕೆ ಸುಮಮಾಲಿಕಾಸ್ಥಿತಿತ ವೃತ್ತಕೇಶ ಸಂತತಿಗೆ ರಮಣೀಯ ಗುಣರಚಿತ ವರ ಮಕುಟಕೆ 8 ಉದಯಗಿರಿನಿಕರ ವಿಸ್ಫುರಿತ ಶುಭಗಾತ್ರಕೆ ಮದನಮದಗಜಶೀಲ ಲಾವಣ್ಯಕೆ ಸದಭೀಷ್ಟÀದಯ ಪೂರ್ಣಪ್ರಜ್ಞಮುನಿಸೇವ್ಯ ಪದ ಹಯವದನ ವೆಂಕಟರಮಣಗೆ 9
--------------
ವಾದಿರಾಜ
ರಘುವೀರನ ಕಂಡನು ಕಪಿವೀರ ಕಲಿಕಲ್ಮಷದೂರ ಪ ಅಘವರ್ಜಿತ ಪನ್ನಗಶಯನನೆಂದು ಬಗೆದು ಮನದಿ ಕರಮುಗಿದನು ದೂರದಿ ಅ.ಪ. ಶಿರಭಾಗದಿ ಮೆರೆವ ಜಟಾಮಕುಟ | ಚಿಕುರಾಳಿಯಿಂದ ಪರಿಶೋಭಿಪ ಸುಂದರ ಲಲಾಟ | ಕಮಲಾಕ್ಷಗಳಲಿ ನಾಸಿಕ ಬಲು ಮಾಟ ಸ್ಮರಲಾವಣ್ಯ ಧಿಕ್ಕರಿಸುವ ಸುಂದÀರ ಶರಧಿ ಗಂಭೀರನ 1 ಆಜಾನುಬಾಹುಗಳತಿ ಪ್ರಶಸ್ತ | ಸುರಚಾಪದಂತೆ ರಾಜಿಪ ಧನುವ ಧರಿಸಿದ ಹಸ್ತ | ವಿಶಾಲ ವಕ್ಷಕೆ ಈ ಜಗದೊಳಗುಪಮೇಯದೆತ್ತ | ದೋಷನಿರಸ್ತ ಮೂಜಗದೊಳಗತಿ ಸೋಜಿಗನೆನಿಪ ಸು ತೇಜದಿ ರಾಜಿಪ ರಾಜಕುಮಾರನ 2 ಸುಂದರ ತ್ರಿವಳಿಗೊಪ್ಪುವ ಉದರ | ನೆರೆ ಗಂಭೀರ ಚಂದದಿ ಶೋಭಿಪ ನಾಭಿಕುಹರ | ಚೀರಾಂಬರಧರ ಬಂಧುರ ಕಟಿತಟ ಬಲು ರುಚಿರ | ನೋಳ್ಪರ ಚಿತ್ತಹರ ಕುಂದಿಲ್ಲದ ಪದದ್ವಂದ್ವ ಸುಶೋಭಿತ ಸುಂದರಾಂಗ ಶ್ರೀ ಕರಿಗಿರೀಶನ 3
--------------
ವರಾವಾಣಿರಾಮರಾಯದಾಸರು
ಮಂಗಳ ಮಾರಮಣಗೆ ಮಂಗಳ ಜಯಮಂಗಳ ಭೂರಮಣಗೆ ಮಂಗಳ ಪ.ಮುಕುಟಕೆ ಮಂಗಳ ಮತ್ಸ್ಯಾವಾತಾರಗೆಮುಖಕೆ ಮಂಗಳ ಮುದ್ದು ಕೂರ್ಮನಿಗೆ ||ಸುಕಂಠಕೆ ಮಂಗಳ ಸೂಕರರೂಪಗೆನಖಕೆ ಮಂಗಳ ಮುದ್ದು ನರಸಿಂಹಗೆ 1ವಕ್ಷಕೆ ಮಂಗಳ ವಟವಾಮನನಿಗೆಪಕ್ಷಕೆ ಮಂಗಳ ಭಾರ್ಗವಗೆ ||ಕಕ್ಷಕೆ ಮಂಗಳ ಕಾಕುತ್ಸ್ಥರಾಮನಿಗೆಕುಕ್ಷಿಗೆ ಮಂಗಳ ಶ್ರೀ ಕೃಷ್ಣಗೆ 2ಉರುಗಳಿಗೆ ಮಂಗಳ ಉತ್ತಮ ಬುದ್ಧಗೆಚರಣಕ್ಕೆ ಮಂಗಳ ಚೆಲ್ವ ಕಲ್ಕಿಗೆ ||ಪರಿಪರಿ ರೂಪಗೆಪರಮ ಮಂಗಳಪುರಂದರವಿಠಲಗೆ ಶುಭಮಂಗಳ 3
--------------
ಪುರಂದರದಾಸರು