ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿನ್ನ ಸೊಬಗಿದೇನೊ ಶ್ರೀಹರಿ ವಿಭವ ಚನ್ನಕೇಶವಾ ಪ ಸತಿ ಸಿರಿದೇವಿಯು ಅತಿ ಚಂಚಲೆಯು ಸುತಮದನ ತಾನನಂಗನೂ ಸುತೆ ಬಾಗೀರಥಿ ವಕ್ರಮಾರ್ಗಳೋ ಅತಿಶಯ ಮೈದುನ ಕ್ಷಯರೋಗಿ 1 ಇರುವ ಮಂದಿರವು ಸಾಗರ ಮಧ್ಯವು ಉರಗನ ಮೇಲೆ ಪವಡಿಸಿಹೆ ಗರುಡನೇರಿ ಗಗನದಿ ತಿರುಗಾಡುವೆ ನೆರೆ ತುಲಸಿಯ ಮಾಲೆಯ ಹಾಕಿರುವೆ 2 ದಾನಕೊಟ್ಟವನ ಭೂಮಿಗೆ ತುಳಿದೆ ಧ್ಯಾನ ಗೈದವನ ಶಿರವರಿದೆ ಮಾನಿನಿ ಕೊಟ್ಟ ಸವಿಫಲಭಂಜಿಸಿ ಕೂರ್ಮ ವರಹನು ನೀನಾದೆ 3 ಹೀಗಿದ್ದರೂ ಸತ್ಸತಿಸುತ ಬಾಂಧವ ಭೋಗ ಭವನ ಭಾಗ್ಯಗಳಿತ್ತು ರಾಗದಿ ರಕ್ಷಿಪೆ ಶರಣರ ನಿರುತವು ಭಾಗವತಪ್ರಿಯ ಜಾಜಿಕೇಶವಾ 4
--------------
ಶಾಮಶರ್ಮರು