ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಘಟಿತ ಘಟನಾತ್ಮ ಶಕ್ತಿಯ ನಂಬಿದ ರಘುಕುಲವೇನಿರದು ಮಗುವನು ಮಾತೆ ಮಮತೆಯಿಂದ ಪೊರೆವಂತೆ ನಗುತ ರಕ್ಷಿಪ ಬಿರಿದು ಪ. ಶಕ್ರನ ಸಲಹ ಬೇಕೆಂದು ವಾಮನವಾಗಿ ಶುಕ್ರ ಶಿಷ್ಯನ ಯಜ್ಞದಿ ವಕ್ರಮತಿಯ ದಾನವರನೆಲ್ಲ ಸದೆದ ತ್ರಿವಿಕ್ರಮಾಹ್ವಯನೀವನು ಚಕ್ರ ಶಂಕ ಖಡ್ಗ ಗದೆಯ ಧರಿಸಿ ರಿಪು ಚಕ್ರ ಕತ್ತರಿಸುವನು 1 ಪಂಚಪಂಚದ ಮೇಲಿನ್ನೆರಡು ವರುಷ ವನ ಸಂಚರಿಸಿದ ಬಳಿಕ ಪಂಚ ಪಾಂಡವರಿಗೆ ಪಂಚಗ್ರಾಮವನೀವ ಹಂಚಿಕೆ ಸರಿಯೆನುತ ಪಂಚಪಾತಕಿ ಕೌರವೇಂದ್ರನ ಸಭೆಯಲಿ ಪಂಚಾಯಿತನಾಗುತ ವಂಚಿಸಿ ಭಾವಿ ವಿರಿಂಚಗೆ ಸಕಲ ಪ್ರಪಂಚಾಧಿಪತ್ಯವಿತ್ತ 2 ಅನುಗಾಲ ನಿಜಪಾದ ವನಜವೆ ಗತಿಯೆಂಬ ಜನರ ಮನೋರಥವ ಮನಸಿಜಪಿತ ತಾನೆ ನೆನೆಸಿಕೊಂಡಿವುದಕನುಮಾನಿಸನು ಸತತ ಸನಕಾದಿ ವಂದ್ಯ ಶೇಷಾದ್ರಿ ಶಿಖರವಾಸ ಮನೆಗಧಿಪತಿಯೆನುತ ಮನ ವಚನಗಳಿಂದ ಮಾಧವಗರ್ಪಿಸಲನುಕೂಲಿಸುವ ನಗುತ 3
--------------
ತುಪಾಕಿ ವೆಂಕಟರಮಣಾಚಾರ್ಯ
ಭಾರತೀದೇವಿ ಸ್ತೋತ್ರಗಳು120ಶರಣು ಶ್ರೀ ಮಾರುತನ ರಾಣಿಯೆ |ಶರಣು ಮಂಗಳ ಶ್ರೋಣಿಯೇ ||ಶರಣು ಸ್ಮಿತ ಮುಖ ಉರಗವೇಣಿಯೆ |ಶರಣುಸರಸಿಜಪಾಣಿಯೇ ಪಇಂದ್ರಸೇನೆ ಪುರಂದರಾರ್ಚಿತೆ |ಇಂದಿರಾಪತಿ ಕೃಷ್ಣನಾ ||ನಂದದಲಿ ಸೇವಿಸುವ ಭಕುತಿಯ |ಇಂದುಧರನಿಗೆ ಕೊಡುವಳೇ 1ಗರುಡನುತ ಪದ ಸರಸೀರುಹೆ ವೃಕೋ |ದರನ ಪ್ರೀತಿಗೆ ಯೋಗ್ಯಳೇ ||ತರುಣಿ ಶಿರೋಮಣಿ ದುರ್ಮತಿಯ ಕಳೆದು |ಕರುಣದಲಿಕರಪಿಡಿವುದು 2ವಿದ್ಯುನ್ನಾಮಕೆ ಧಾತಜಾತಳೆ |ಶ್ರದ್ಧೆ ದಾತೆ ನಿರಂತರ ||ತಿದ್ದಿ ಯನ್ನ ವಕ್ರಮತಿಯದ್ರುಹಿಣ|ವಿದ್ಯೆಪಾಲಿಸೆ ಭಾರತೀ 3ಕಾಳೀ ದ್ರೌಪದಿಸ್ಥಾಣುಕನ್ಯಾ |ಶೈಲಜಾದಿ ನಮಸ್ಕøತೇ ||ಕಾಲಿಗೆರಗುವೆ ಯನ್ನಬಿನ್ನಪ|ಕೇಳಿಜ್ಞಾನವ ಪ್ರೇರಿಸೇ 4ಗಜಗಮನೆ ನಳನಂದಿನಿ ಅನಘೆ |ಸುಜನಹೃದಯ ನಿಕೇತನೆ ||ತ್ರಿಜಗಪತಿಪ್ರಾಣೇಶ ವಿಠಲನ |ಭಜನೆಯೊಳು ಮನ ನಿಲ್ಲಿಸೇ 5
--------------
ಪ್ರಾಣೇಶದಾಸರು