ನಮಸ್ತೆ ವಿಮಲೆ ಕೋಮಲೆ ರಮಾದೇವಿನಮಸ್ತೆ ನಮಸ್ತೆ ಪ.
ತರುಣಿ ಶಿರೋಮಣಿ ನಿನ್ನ ಶೀಲ ಸೌಂದರ್ಯವನುಧರೆಯೊಳು ವರ್ಣಿಸುವ ಕವಿಯು ದಾವಸ್ವರಮಣನೆನಿಪ ರಮಣನುರದೊಳೆಂದೆಂದು ನೀ-ನರಮನೆಯ ಮಾಡಿ ಭಾಪುರೆ ಮೆರೆದೆಲೆಲೆ1
ತನ್ನ ಮೈಯಿಂದ ಮಕ್ಕಳ ಸೃಜಿಸಿ ಯುಗಯುಗದಿನಿನ್ನ ತಾರುಣ್ಯ ಲಾವಣ್ಯಗಳನುಮನ್ನಿಸಿ ಪೊರೆವ ಹರಿಯ ಪಟ್ಟದ ರಮಣಿ ಜಗ-ನ್ಮಾನ್ಯೆ ಚೈತನ್ಯೆ ಲಾವಣ್ಯೆ ಗುಣಗಣಸದನೆ2
ಕರ ವಕ್ತ್ರನೇತ್ರಗಳು ಪೂರ್ಣ ಹಯವದನ ಕೈಕೊಂಡ ನಿನ್ನ ಗಂಡಸ್ವರ್ಣಸಮವರ್ಣೆ ಕರ್ಣಾಯತಾಕ್ಷಿ 3