ಸಿಕ್ಕಲು ನೋಡೇ ಸತ್ಸಂಗ | ಯನ |
ಗಕ್ಕಿತು ಸ್ವಾನುಭವದಂಗ |
ಮಿಕ್ಕಿನವಿಷಯದಿ ಹಂಗಿಲ್ಲಾ | ಒಳ |
ವಕ್ಕಲವಾದನು ಶ್ರೀನಲ್ಲಾ ಪ
ಜ್ಞಾನಾಂಜನವನು ತಂದಿಡಲಿ | ಅ |
ಪರಿ ಬಿಡಲಿ |
ಪರಿ ಭಾಸುವ ಕೋಶದಲೀ |
ತಾನೇ ದೋರುವ ಜಗದೀಶಾ 1
ಭವ ಬಂಧವ ತಿಳಿಯಲು ನೆಲೆಯಾ | ತಾ |
ಅವನಿಲಿ ಶುಕನಳಿ ಕನ್ಯಾಯಾ |
ವಿವರಿಸಿಯನ್ನೊಳಗೆಚ್ಚರಿಸಿತೆ | ನಾ |
ತವಕದಿ ಚಿದ್ಘನದೊಳು ಬೆರೆತೇ 2
ಏನೆಂದ್ಹೇಳಲಿ ಅಮ್ಮಮ್ಮಾ |
ಯನ್ನಾನಂದದ ಸುಖ | ಸಂಭ್ರಮಾ |
ಶ್ರೀನಿಧಿಗುರು ಮಹಿಪತಿ ಬೋಧಾ | ಸಲೆ |
ತಾ ನಳಿಯಿತು ಕಲ್ಪನೆ ಬಾಧಾ 3