ಒಟ್ಟು 9 ಕಡೆಗಳಲ್ಲಿ , 5 ದಾಸರು , 9 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

2. ನಮ್ಮಾಳ್ವಾರ್ ವಕುಳಾಭರಣನೆ ಶರಣೆಂಬೆ ಸಕಲ ಬಂಧು ನೀ ಸಲಹೆಂಬ ಪ ನಿಖಿಲ ಲೋಕಿಗರ ಶಿಶುನಡೆನೂಕಿದೆ ಅಕಳಂಕನೆ ಶಠಗೋಪ ನೀನಾದೆ ಅ.ಪ ನಾಥನಾಯಕಿಯೆ ಕಾರಿಕುಮಾರ ಪೂತನೆ ಸೇನಾಪತಿಯವತಾರ ಪಾತಕಹರ ತಾಮ್ರಪರ್ಣಿತೀರ ಕೀರ್ತಿ ಪಡೆದ ಸುರಪೂಜ್ಯನುದಾರ 1 ಪದುಮ ಪವಿತ್ರನಂದದ ಪ್ರಭೆನೋಡಿ ಮಧುರಕವಿಯು ಬರೆ ಮುದಗೂಡಿ ಅದುಭುತ ಮಂತ್ರವನೊರೆದೆ ಹರಿಯಪಾಡಿ ಸದಮಲ ಸೇವಕನಲಿ ಮನೆಮಾಡಿ2 ಹದಿನಾರು ವರುಷಾಹಾರವಿಲ್ಲದೆ ಬದಿರಾಂಧ ಮೂಕನಾದ ಮುನಿ ವಿಧಿ ಪಿತನದುಭುತಧ್ಯಾನ ಮೈಗೂಡಿ ಸುಧೀಂದ್ರ ಶುಭದ ಅಮೃತಪದ 3 ನಾಥಗೊಲಿದು ತಿರುವಾಯ್ಮೊಳಿಯನು ಪ್ರೀತಿಯೊಳುಪದೇಶವ ಗೈದು ಪಾತಕ ಹರಿಸುತ ಪರಿಸರ ಪೊರೆಯುತ ದಾತಾರಂ ಸುಖದಾತಾರಂ 4 ಮಧುರಾಪೀಠವು ನೀರೊಳು ಮುಳುಗಲು ವಿಧಿಯಿಲ್ಲದೆ ಪಂಡಿತರೊರಲಿ ಅಧಿಕರಿಸುತ ತವ ಪದಗಳಿಗೆರಗೆ ಮಧುರವಾಣಿಯಿಂ ಹಾಡಿದ 5 ಹತ್ತಾಳ್ವಾರರ ಶರೀರವಾಗಿ ಪೆತ್ತಿಹ ಪರಮೌದಾರ ಮುನಿ ಎತ್ತಲು ಹರಿಗುರು ಸರ್ವೋತ್ತಮರೆನು ತುತ್ತುಮಪದವಿಯ ಮಾರ್ಗವತೋರಿದ6 ಆದಿವೈಷ್ಣವ ದೀಕ್ಷಾಚಾರ್ಯ ವೇದವ ದ್ರಾವಿಡದೊಳು ಪೇಳ್ದೆ ಶ್ರೀಧರಸನ್ನಿಧಿಯೊಳಗಿದ ಪಠಿಸಲು ಸಾದರದೊಲಿವಂ ಜಾಜೀಶಂ 7
--------------
ಶಾಮಶರ್ಮರು
ಕೋಲ ಕೋಲೆನ್ನ ಕೋಲ ಕೃಷ್ಣ ನೀಮದನಗೋಪಾಲನಾಗಿಮೆರೆದಿಯಲೊ ಕೃಷ್ಣ ಪ. ಅಂಬರ ತಕ್ಕ ಸುರುಳಿಯ ಮುಂಡಾಸಮುರಿಗಿಯವಂಕಿ ನಡುವಿಟ್ಟುಮುರಿಗಿಯವಂಕಿ ನಡುವಿಟ್ಟು ರುಕ್ಮಿಣಿಯವರಪುತ್ರ ಪ್ರದ್ಯುಮ್ನಗೆ ಉಡುಗೊರೆ1 ಮುತ್ತಿನಾಭರಣ ಹೆಚ್ಚಿನ್ಹೆಚ್ಚಿನ ಜವಳಿಮತ್ತೆ ಕೃಷ್ಣಯ್ಯನ ಸಭೆಯೊಳು ಮತ್ತೆ ಕೃಷ್ಣಯ್ಯನ ಸಭೆಯೊಳು ಇಟ್ಟೆವಪಾರ್ಥನು ಕೊಟ್ಟ ಉಡುಗೊರೆ 2 ಬೆಳಕಿನಂತೊಪ್ಪುವ ಥಳಥಳಿಸುವ ಜವಳಿ ನಳಿನಾಕ್ಷಿಯರು ಕುಳಿತ ಸಭೆಯಾಳು ನಳಿನಾಕ್ಷಿಯರು ಕುಳಿತ ಸಭೆಯಾಳಗೆ ಇಟ್ಟೆವಕುಳಿತ ಜನಕೆಲ್ಲ ಉಡುಗೊರೆ 3 ಅಂದವಾದ ಬಲು ಚಂದ ಚಂದದ ಜವಳಿ ತಂದೆ ಕೃಷ್ಣಯ್ಯನ ಸಭೆಯೊಳು ತಂದೆ ಕೃಷ್ಣಯ್ಯನ ಸಭೆಯೊಳಗೆ ಇಟ್ಟೆವಬಂದ ಜನಕೆಲ್ಲ ಉಡುಗೊರೆ 4 ಸಾಸಿವೆ ಬಣ್ಣದ ಸೀರೆ ಕುಸುಬೆ ಬಣ್ಣದ ಕುಪ್ಪುಸ ಲೇಸಾದ ಅಡಿಕೆ ನಡುವಿಟ್ಟುಲೇಸಾದ ಅಡಿಕೆ ನಡುವಿಟ್ಟು ರುಕ್ಮಿಣಿಯದಾಸಿಯರಿಗೆಲ್ಲ ಉಡುಗೊರೆ 5 ಹತ್ತೆಂಟು ಸಾವಿರ ಸುತ್ತುವ ಮುಂಡಾಸ ಮತ್ತ ಬೆಟ್ಟಡಕಿ ನಡುವಿಟ್ಟುಮತ್ತ ಬೆಟ್ಟಡಕಿ ನಡುವಿಟ್ಟು ರಂಗಯ್ಯನ ಭೃತ್ಯರಿಗೆಲ್ಲ ಉಡುಗೊರೆ6 ಸುಳಿಬಳ್ಳಿಯಂತೊಪ್ಪುವ ಬಿಳಿ ಚೀಟಿನ ಜೂಲು ಎಳೆ ಮಾವುಗಳ ನಡುವಿಟ್ಟುಎಳೆ ಮಾವುಗಳ ನಡುವಿಟ್ಟು ರಂಗಯ್ಯನ ಗಿಳಿಗಳಿಗೆಲ್ಲ ಉಡುಗೊರೆ 7 ಅಕ್ಕರದಿಂದ ಹೊಸ ಚಿಕ್ಕ ಚೀಟಿನ ಜೂಲುತಕ್ಕ ಕುಲಾಯಿ ಮುರುವಿಟ್ಟುತಕ್ಕ ಕುಲಾಯಿ ಮುರುವಿಟ್ಟು ರುಕ್ಮಿಣಿಯ ಬೆಕ್ಕಿಗೆ ಕೊಟ್ಟ ಉಡುಗೊರೆ 8 ಅಷ್ಟೂರಿಗೆ ಉಡುಗೊರೆ ತಕ್ಕಷ್ಟು ಕೊಟ್ಟೆವಕೃಷ್ಣಯ್ಯನ ಮನಕೆ ಬರಲಿಲ್ಲಕೃಷ್ಣಯ್ಯನ ಮನಕೆ ಬರಲಿಲ್ಲ ಕುಬ್ಚಿಎಂಬೊ ಸೊಟ್ಟ ಸ್ತ್ರೀಯಳ ಕರೆಸಿಲ್ಲ9 ಎಲ್ಲರಿಗುಡಗೊರೆ ಬಲ್ಲಷ್ಟು ಕೊಟ್ಟೆವಚಲುವನ ಮನಕೆ ಬರಲಿಲ್ಲಚಲುವನ ಮನಕೆ ಬರಲಿಲ್ಲ ಗೋಕುಲದಗೊಲ್ಲ ನಾರಿಯರ ಕರೆಸಿಲ್ಲ10 ತರಹ ತರಹದ ಜವಳಿ ದುಂಡು ಮುತ್ತಿನ ಪದಕಪೆಂಡಿ ಸರಗಳ ನಡುವಿಟ್ಟುಪೆಂಡಿ ಸರಗಳ ನಡುವಿಟ್ಟು ರಾಮೇಶನಿನ್ನ ಪಂಡಿತರಿಗೆಲ್ಲ ಉಡುಗೊರೆ 11
--------------
ಗಲಗಲಿಅವ್ವನವರು
ಜಾನಕೀ ರಾಮಚಂದ್ರಾಂiÀi ನಮಸ್ತೇ ಶ್ರೀ ಭಾನುಕೋಟಿ ಸುಪ್ರಕಾಶ ವಾರಿಧಿಸಮ ಗಂಭೀರ ಪ ದಾನವೇಂದ್ರ ಭೀಷಣಾಯ ದೀನಪಾಲನ ಚಿಂತನಾಯ ಮಾನವೇಂದ್ರ ಗುಣಸಾಂದ್ರ ವೇದವೇದ್ಯ ರಾಘವಾಯಅ.ಪ ಸಕಲಲೋಕ ಸನ್ನುತಾಯ ವಿಕಸಿತಾಂಬುಜ ಲೋಚನಾಯ ಮಕರಕುಂಡಲ ಭೂಷಿತಾಯ ಶೋಕನಾಶಚಾರಿತ್ರಾಯ ಶುಕ ವಶಿಷ್ಟ ವಂದಿತಾಯ ಸಕಲಧರ್ಮಪಾಲನಾಯ ವಕುಳಮಾಲಾಭರಣ ಮಾಂಗಿರಿನಿಲಯಾಸೂರಿ ಪೂಜಿತಾಯ 1
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಪಾಂಡವಪಕ್ಷ ಪಾರ್ಥಸಾರಥಿಗೆ ಆಂಡಾಳ್ ಮಾಲೆಯ ಧರಿಸಿದಳು ಪ ಸೃಷ್ಟಿಜಾತೆಯು ಶೃಂಗಾರವಾಗಿ ಬಂದು ಕೃಷ್ಣಮೂರುತಿಯೆದುರಲ್ಲಿ ನಿಂದು ಅಷ್ಟವಿಧದ ಪುಷ್ಟಮಾಲೆಗಳನ್ನು ತೆಗೆದು ತಟ್ಟೆಯೊಳಗೆ ಇಟ್ಟು ಕಳುಹಿದಳು 1 ಆದಿಮೂರುತಿ ಮಂಟಪದಲ್ಲಿ ಕುಳಿತಿರೆ ಶ್ರೀದೇವಿ ಭೂದೇವಿ ಸಹಿತವಾಗಿ ವೇದಮೂರುತಿಯನು ನೋಡಿ ಸಂತೋಷದಿ ಗೋದಾದೇವಿಯು ಮಾಲೆ ಧರಿಸಿದಳು 2 ಮರುಗ ಮಲ್ಲಿಗೆ ಜಾಜಿ ಸುರಗಿ ಶಾವಂತಿಗೆ ಇರುವಂತಿಗೆ ಪಚ್ಚೆ ಮುಡಿದಾಳ ಪರಿಪರಿ ಪುಪ್ಪದ ಸರಗಳ ಪಿಡಿದು ಧರಣಿದೇವಿಗೆ ಸ್ವಾಮಿ ಧರಿಸಿದಳು 3 ತಾಳೆ ಚಂಪಕ ವಕುಳಮಾಲೆ ಮಂದಾರಪುಷ್ಪ ಕಮಲ ಸುಗಂಧರಾಜ ನೀಲವರ್ಣನ ಮುಖ ನೋಡಿ ಸಂತೋಷದಿ ನೀಳಾದೇವಿಯು ಮಾಲೆ ಧರಿಸಿದಳು 4 ಕಮಲವ ಕರದಲ್ಲಿ ಪಿಡಿದಿಹ ಕಾಂತೆಗೆ ಕಮಲವದನೆಯೆಂದೆನಿಸಿದವಳಿಗೆ ಕಮಲಾಕ್ಷಿಗೆ ಶ್ರೀವೆಂಕಟಕೃಷ್ಣನು ಕಮಲನಾಭನು ಮಾಲೆ ಧರಿಸಿದನು 5
--------------
ಯದುಗಿರಿಯಮ್ಮ
ಪುಷ್ಪಧರಿಸುವ ಉತ್ಸವಗೀತೆ ಪುಷ್ಪವನ್ನುಧರಿಸುವ ಉತ್ಸವ ನೋಡುವ ಬನ್ನಿ ಭಕ್ತವತ್ಸಲನರಾಣಿ ರಂಗನಾಯಕಿಗಿಂದು ಪ. ವೈಶಾಖಮಾಸದಲಿ ಕೃಷ್ಣಪಕ್ಷದಲಿ ಲಕ್ಷ್ಮೀಗೆ ಪುಷ್ಪವನ್ನು ಧರಿಸುವ ಅರ್ತಿಯ ನೋಡುವ ಬನ್ನಿ 1 ವಿಧವಿಧದ ಪುಷ್ಪವ ಮುಡಿಸಿ[ದರು] ಮದನನಮಾತೆಯ ಶಿರಸಿಗೆ 2 ಪಂಕಜನಾಭನರಾಣಿ ಪರಮಕಲ್ಯಾಣಿ ನೀಲವೇಣಿ ಪಂಕಜಪಾಣಿ ಕೀರವಾಣಿ ಸುಶೋಣೀ 3 ಸುರರು ಅಸುರರು ಕೂಡಿ ಶರಧಿಮಥನವ ಮಾಡೆ ಭರದಿಂದ ಉದಿಸಿಬಂದ ವರಲಕ್ಷ್ಮೀದೇವಿಗಿಂದು 4 ಜಯವಿಜಯರಿಗಾಗಿ ಜನಿಸಿ ತಾ ಭೂಮಿಯಲಿ [ಗೆದ್ದ] ಇಂದು 5 ಸೃಷ್ಟಿಭಾರವನಿಳುಹಲೆಂದು ಕೃಷ್ಣಮೂರುತಿ ಜನಿಸಿ [ಒಲಿದ] ಭೀಷ್ಮಕನುದರದಿ ಬಂದ ರುಕ್ಮಿಣೀದೇವಿಗೆ ಇಂದು6 ಮಲ್ಲೆ ಮಲ್ಲಿಗೆ ವಕುಳ ಮಂದಾರ ಪಾರಿಜಾತ[ವ] ಫುಲ್ಲನಾಭನರಾಣಿಗೆ ಲೋಲಾಕ್ಷಿಯರು ಮುಡಿಸಿದರು 7 ತಾಳೆ ಚಂಪಕ ಕಮಲಮಾಲೆ ಸುರಗಿ ಜಾಜಿಯ ನೀಲವರ್ಣನರಾಣಿಗೆ ಲೋಲಾಕ್ಷಿಯರು ಮುಡಿಸಿದರು 8 ಮರುಗ ದವನ ಪಚ್ಚೆತೆನೆಯು ಸುಗಂಧರಾಜವ ಪರಮ ಸುರರು ತಂದು ಮುಡಿಸುವರು 9 ವಸಂತೋತ್ಸವಕೆಂದು ವಸುಧೀಶನರಸಿ ತಾನು ಕುಶಲದಿಂದಲೆ ಬಂ[ದಳಾವ]ಸಂತಮಂಟಪಕಿಂದು 10 ರತ್ನದ ಕೆಂಪಿನ ಕಿರೀಟವಿಟ್ಟು ತಿದ್ದಿದ ಕಸ್ತೂರಿಬಟ್ಟು ಮುತ್ತುಸುತ್ತಿದ ಮೂಗಿನಬಟ್ಟು ಹರಿದ್ರಾವಸ್ತ್ರವನುಟ್ಟು 11 ಕರ್ಪೂರದ ಚೂರ್ಣದಿ ಮಿಂದು ಭಕ್ತರಿಟ್ಟ ನೈವೇದ್ಯವನುಂಡು [ತಾ]ಪೊರಟಳು ಮಿತ್ರೆಯರ ಕೋಲಾಟವ ನೋಡುತ್ತ ತನ್ನರಮನೆಗೆ 12 ಹುಟ್ಟಿದಮನೆ ಕ್ಷೀರಾಬ್ಧಿ ಹೊಕ್ಕಮನೆ ಶ್ರೀವೈಕುಂಠವ ಬಿಟ್ಟು ಭಕ್ತರ ಸಲಹುವೆನೆಂದು ಬಂದ ವೆಂಕಟರಂಗನರಸಿಗೆ 13
--------------
ಯದುಗಿರಿಯಮ್ಮ
ಪುಷ್ಪಸೇವೆಯ ಗೀತೆ ಪುಷ್ಪಸೇವೆಯ ನೋಡುವಾ ಬನ್ನಿರೆ ನ ಮ್ಮಪ್ರಮೇಯ ರಂಗನಾ ಪ. ಕ್ಷಿಪ್ರದಿಂದಲೆ ಬಂದು ಚಪ್ಪರದಲಿ ನಿಂದು ವಿಪ್ರರೆಲ್ಲರು ತಂದು ಪುಷ್ಪ ಸಮರ್ಪಿಸುವ ಅ.ಪ. ಮೇಷರಾಶಿಗೆ ರವಿಯು ಬರಲು ವಾಸುದೇವ ಹರಿಯು ಆಗ ಬೇಸಿಗೆ ತಾಪವ ಪರಿಹರಿಸುವೆನೆಂದು ವಾಸನೆಗಂಧವ ಮೈಯೊಳು ಪೂಸಿದ 1 ಕರ್ಪೂರದ ಕಸ್ತೂರಿ ಗಂಧವ ತಂದು [ಒಪ್ಪದಿಂ] ವಕ್ಷಸ್ಥಳದಿ ಧರಿಸಿ ವಕುಳ ಪುಷ್ಪಗಳಿಂದ ಮೌಳಿಯ [ಲಂಕ]ರಿಸಿದ ರು ಪನ್ನೀರವಲ್ಲಿಯ ಚೆನ್ನಾಗಿ ಪ್ರೋಕ್ಷಿಸಿದರು2 ಮರುಗ ಮಲ್ಲಿಗೆ ಜಾಜಿ ಮುಡಿವಾಳ ಇರವಂತಿಗೆ ಪಚ್ಚೆ ದವನ ಕೇದಿಗೆ ಪಾ ಕಮಲ ಸಂಪಿಗೆ ಪುಷ್ಪಮಾಲೆಯ ಧರಿಸಿ ಪನ್ನೀರ ತಳಿದರಾಗ 3 ಪುಷ್ಪದ ದುಬಟಿಯನು ತಂದು ನಮ್ಮ ಸರ್ಪಶಯನನಿಗ್ಹೊದ್ದಿಸೆ ಕ್ಷಿಪ್ರದಿಂದಲೇ ತೀರ್ಥಪ್ರಸಾದವನಿತ್ತು ಎ ನ್ನಪ್ಪ ರಂಗನು ಬಂದ ಒಯ್ಯಾರ ನಡೆಯಿಂದ 4 ಪರಿಪರಿ, ವಾದ್ಯಂಗಳು ಭೋರಿಡುತಿರೆ ವರಾಂಗನೆಯರು ಪಾಡೆ ಸುರರು ಭೂಸುರ ನರರೆಲ್ಲರ ಕೂಡಿ ದೊರೆಯುಮಂಟಪಕ್ಕಾಗ ಪರಮಪುರಷ ಬಂದ 5 ಅಲ್ಲಿ ಪೂಜೆಯ ಗ್ರಹಿಸಿ ರಂಗಯ್ಯ ತಾ ಎಲ್ಲರೊಡನೆ ಪೊರಟಿರೆ ವಲ್ಲಭನನು ವೀಣೆಸೊಲ್ಲಿನಿಂ ಪಾಡುತಿರೆ ಲಕ್ಷ್ಮೀ ಮೆಲ್ಲಮೆಲ್ಲನೆ ಬಂದ ಏಕಾಂತದಿ ರಂಗ 6 ಚಿತ್ರಪೌರ್ಣಮಿಯಲ್ಲಿ ಶ್ರೀರಂಗ ವಿ ಚಿತ್ರದಿಂದಲೆ ಪೊರಟು ಉತ್ತರಕಾವೇರಿ ತೀರದ ಮಂಟಪದಲಿ ನಿಂದು ಭಕ್ತವತ್ಸಲನು ಮಜ್ಜನವ ಮಾಡಿದನಾಗ 7 ಮಕರಿ ಕಾಲ್ಪಿಡಿಯಲಾಗ ಮತಂಗ ವು ಕರೆಯೆ ನಿಮ್ಮನು ಅತಿ ವೇಗದಿಂದ ಚಕ್ರದಿ ನಕ್ರನ ಕೊಂದು ಕರಿಯ ರಕ್ಷಿಸಿ ಬಂದ ಕರುಣದಿಂದಲೇ ರಂಗ 8 ಕಲಿಯುಗದೊಳಗಿರುವ ಕರ್ಮಿಗಳನ್ನು ಸಲಹುವೆನೆಂದೆನುತಾ ಕರುಣದಿಂ ದಲೆ ಅರ್ಚಾವತಾರವ ಮಾಡಿ [ಸಲೆ] ಬಿರುದು ಧರಿಸಿ ಬಂದ ವರದವೆಂಕಟರಂಗ 9
--------------
ಯದುಗಿರಿಯಮ್ಮ
ಯತಿರಾಜಂ ಭಜರೇ ಮಾನಸಪತಿತೋದ್ಧಾರಕ ಯದುಗಿರಿ ನಿಲಯ ಪಶ್ರೀಮದ ದಾಶರಥೀನುತ ಚರಣಂಯಾಮುನಾ ಮುನಿ ಸಂಭಾವಿತ ಕರುಣಂಶ್ರೀಮದನಂತಂ ಕರುಣಾಭರಣಂರಾಮಾಯಣ ಮೂಲತತ್ವ ವಿಸ್ತರಣಂ 1 ಸಕಲವೇದ ಶಾಸ್ತ್ರಾಗಮ ನಿಪುಣಂವಕುಳಾಭರಣ ಪಾದಾಂಬುಜ ಭರಣಂಮುಕುಳಿತ ವೈಷ್ಣವ ತತ್ವೋದ್ಧರಣಂ[ವಿಕಸಿತ ವಿಶಿಷ್ಟಾದ್ವೈತ ವಿಶೇಷಂ] 2 ವ್ಯಾಸ ತತ್ವಸಾರಾಬ್ಧಿ ವಿಸ್ತರಣಂವಾಸುದೇವಕೃತ ಗೀತೋದ್ಧರಣಂವಾಸವನುತ ಮಾಂಗಿರಿಹರಿ ಚರಣಂದಾಸದಾಸೀಜನ ಪಾತಕಹರಣಂ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ವಿನತಾನುತ ಮಣಿವರೂಥ ಜನಕಸುತಾ ನಾಥಪ್ರೀತ ಪ ಕನಕಾಂಬರ ಪಾರ್ಥಸೂತ ವನಮಾಲಾ ಮಣಿರಾಜಿತ ಅ.ಪ ಶುಕ ಶೌನಕ ಪರಿಪೂಜಿತ ಸಕಲಾಗಮ ವೇದವಿದಿತ ವಕುಳಸುಮಾಭರಣಾಯತ ಸುಕರಾರ್ಜಿತ ಮೋಕ್ಷದಾತ 1 ಪಾಹಿ ಪಾಹಿ ಪರಮನಾಮ ಪಾಹಿ ಪಾಹಿ ಪೂರ್ಣಕಾಮ ಪಾಹಿ ಪಾಹಿ ದನುಜಭೀಮ ಪಾಹಿ ಪಾಹಿ ಮಾಂಗಿರಿಧಾಮ2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
(ಈ) ಲೋಕನೀತಿ ಮತ್ತು ಕ್ಷೇತ್ರ ಸ್ತುತಿಗಳು108(1) ತಿರುಪತಿಶರಣು ವಕುಳಾಭರಣ ಪೋಷಿತಶರಣು ಯಾಮುನ ಪೂಜಿತ ಪಶರಣು ಯತಿಪತಿ ನಿತ್ಯವಂದಿತಶರಣು ಕ್ಷಮಾಭರಿತಾ ಅ.ಪಶರಣುದೇಶಿಕಹೃದಯ ಸದನಾಶರಣು ಪರಿಪೂರ್ಣೇಂದುವದನಶರಣು ಸುಂದರ ಕೋಟಿ ಮದನಾಶರಣು ಹಯವದನಾ 1ಶರಣು ಭಕ್ತಫಲಪ್ರದಾಯಕ ಶರಣು ತಿರುಮಲನಾಯಕಾಶರಣು ಅಸ್ಮತ್ಪರಮದೇಶಿಕ ಶರಣು ಅಸ್ಮಾದ್ದೇಶಿಕಾ 2
--------------
ತುಳಸೀರಾಮದಾಸರು