ಒಟ್ಟು 32 ಕಡೆಗಳಲ್ಲಿ , 4 ದಾಸರು , 32 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಕೊಕ್ರಾಡಿ ಸುಬ್ರಹ್ಮಣ್ಯ) ಕಾಯೊ ಸುಬ್ರಹ್ಮಣ್ಯ ಸಜ್ಜನ- ಪ್ರೀಯ ಸುರವೇಣ್ಯ ಪ. ತೋಯಜಾಕ್ಷ ನಿಖಿಲಾಮರಸೇವಿತ ಶ್ರೇಯಸ್ಕರಫಲದಾಯಕ ಶಂಕರ ಅ.ಪ. ನಿತ್ಯಾನಂದಕರ ನಿಜಾಶ್ರಿತ- ವತ್ಸಲ ರಣಶೂರ ಕೃತ್ತಿವಾಸಸುತ ದೈತ್ಯಾಂತಕ ರಿಪು- ಮತ್ತಗಜೇಂದ್ರಮೃಗೋತ್ತಮ ಸಂತತ 1 ನಿಗಮಾಗಮವಿನುತ ನೀರಜ- ದೃಗಯುಗ ಸಚ್ಚರಿತ ಅಗಜಾಲಿಂಗನ ಅಘಕುಲನಾಶನ ಸುಗುಣಾಂಬುಧಿ ತ್ರೈಜಗದೋದ್ಧಾರಕ 2 ಅಂಬುಧಿಗಂಭೀರ ಧೀರ ತ್ರೀ- ಯಂಬಕ ಸುಕುಮಾರ ತುಂಬುರು ನಾರದಯೋಗಿಸಭಾಂಗಣ- ಸಂಭಾವಿತ ಚರಣಾಂಬುಜಯುಗಳ 3 ಅಂಗಜ ಶತರೂಪ ಸಮರೋ- ತ್ತುಂಗಸುಪ್ರತಾಪ ಗಂಗಾಸುತ ವೇದಾಂಗಪಾರಜ್ಞ ಮಂಗಲಚರಿತ ವಿಹಂಗಾರೂಢಾ 4 ಶಕ್ರಾರಾತಿಹರ ತ್ರಿಜಗ- ಚ್ಚಕ್ರಾನಂದಕರ ಚಕ್ರಾಂಕಿತ ಶ್ರೀಲಕ್ಷ್ಮೀನಾರಾಯಣ- ವಿಕ್ರಮಸಿಂಹ ಕೊಕ್ರಾಡಿ ಪುರೇಶ್ವರ5 ಪಾವಂಜೆಯ ಸುಬ್ರಹ್ಮಣ್ಯ
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಇಂಥಾ ಬಾಲನೆಲ್ಲು ಕಾಣೆನೊ ಪ ಉದಿಸಿದೇಳನೆ ದಿನದಿ ತ್ರಿದಶರೊಡನೆ ಕೂಡಿ ಮದಮುಖತಾರಕ | ಸದನವನೇರಿ ಕದನವಗೈಯುತ | ಹದವಿಹ ಶಸ್ತ್ರದಿ ಅಧಮ ದೈತ್ಯನ ಯಮ | ಸದನಕಟ್ಟಿರುವಂಥ 1 ಅಸಿತನ ಶಾಪದಿ | ಅಸುರೆಯಾದದಿತಿಯು ನಿಶಿಚರ ತಮನ ವರಿಸಿಕೊಂಡು ಇರಲು | ಅಸುರ ಹರನು ಖಳ | ನನು ಸೆಳೆಯಲಿಕೆನು-ತಿಸುವದಿತಿಗೆ ಪೂರ್ವ | ದೆಸೆಯನಿತ್ತಿರುವಂತಾ 2 ದುರುಳ ರಕ್ಕಸನಾಶಿ | ಧರಣಿಯೊಳ್ತೊಳಲುವ ದೊರೆ ಸುಧರ್ಮನ ಶಾಪ | ಪರಿಹರಿಸುತಲೇ | ನಿರತ ತನ್ನಯನಾಮ | ಸ್ಮರಿಪ ದಾಸರ ಸದಾ ಪೊರೆಯೆ ಪಾವಂಜೆಯೊಳು | ಸ್ಥಿರವಾಗಿನಿಂತ ತಾ 3
--------------
ಬೆಳ್ಳೆ ದಾಸಪ್ಪಯ್ಯ
ಕರ ಮುಗಿವೆ ಶರಜನೇ ಪ ಕರಗಳ ಮುಗಿವೆನು ಕರುಣಿಗಳರಸನೇ ಕರಮುಗಿವೆ ಅ.ಪ ಕಾಲಕಾಲನ ಪ್ರಿಯ ಬಾಲ ಕುಮಾರ | ಶೀಲ ಸುಗುಣ ರತ್ನಾಮಾಲ ಗಂಭೀರ | ಕರಮುಗಿವೆ 1 ಬೆನಕನನುಜ ಗುಹ ದಿನಪನ ತೇಜಾ ರಣದÀಲಿ ಸೇನಾನಿ ಸನಕಾದಿ ಪೂಜಾ | ಕರಮುಗಿವೆ2 ಚರಣ ದಾಸರಿಗಿಷ್ಟ ಕರುಣಿಸಿ ಕೊಡುವಾ ಸುರವರ ಪಾವಂಜೆ ಪುರದ ಶ್ರೀ ದೇವಾ | ಕರಮುಗಿವೇ 3
--------------
ಬೆಳ್ಳೆ ದಾಸಪ್ಪಯ್ಯ
ಕರುಣಾನಿಧಿ ಸುರವರ ಗುಹ ಶರಜಾ ಪರಮಪುರುಷ ಅಘಹರ ನೀನೆ ಶರಜಾ ಪ ನಿಗಮ ವಜ್ರ ಶರಜಾ | ಅಗಜೆಯ ಮೋಹದ ಮಗ ನೀನೆ ಶರಜಾ 1 ಇಂದುವದನ ಅರವಿಂದೇಕ್ಷಣ ಶರಜಾ |ವೃಂದಾರಕ ಕುಲ ಮಂದಾರ ಶರಜಾ |ಕಂದರ್ಪ ಶತರೂಪ ಸುಂದರ ಶರಜಾ | ನಂದಿಧ್ವಜ ಜನಪ್ರಿಯ ಕಂದನೆ ಶರಜಾ 2 ವಾಸವ ವಂದ್ಯ ಸರ್ವೇಶನೆ ಶರಜಾ ಆಶಾದಿ ರಹಿತ ವಲ್ಲೀಶನೆ ಶರಜಾ ದಾಸ ಜನರ ಸದಾ ಪೋಷಕ ಶರಜಾ ವಾಸ ಪಾವಂಜೆ ಸೇನೇಶನೆ ಶರಜಾ 3
--------------
ಬೆಳ್ಳೆ ದಾಸಪ್ಪಯ್ಯ
ಕಾಪಾಡಬೇಕು ಮಹಾಲಿಂಗ ಸುರೋತ್ತುಂಗ ಶ್ರೀಪತಿಚರಣಾರವಿಂದಸದ್ಭಂಗ ಪ. ತಾಪತ್ರಯಾಗ್ನಿಯೊಳ್ಬೆಂದೆ ಬಲು ನೊಂದೆ ಆಪತ್ತುಗಳ ಪರಿಹರಿಸೆನ್ನ ತಂದೆ 1 ಅಜ್ಞಾನವನು ದೂರಮಾಡು ದಯದಿ ನೋಡು ಸುಜ್ಞಾನ ಹರಿಭಕ್ತಿ ಶ್ರದ್ಧೆಯ ನೀಡು 2 ಪಾವಂಜೆ ಕ್ಷೇತ್ರಾಭರಣ ದೀನೋದ್ಧರಣ ದೇವ ಲಕ್ಷ್ಮೀನಾರಾಯಣಪದಶರಣ3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಕಾಪಾಡಬೇಕು ಮಹಾಲಿಂಗ ಸುರೋತ್ತುಂಗ ಶ್ರೀಪತಿಚರಣಾರವಿಂದಸದ್ಭಂಗ ಪ. ತಾಪತ್ರಯಾಗ್ನಿಯೊಳ್ಬೆಂದೆ ಬಲು ನೊಂದೆ ಆಪತ್ತುಗಳ ಪರಿಹರಿಸೆನ್ನ ತಂದೆ 1 ಅಜ್ಞಾನವನು ದೂರಮಾಡು ದಯದಿ ನೋಡು ಸುಜ್ಞಾನ ಹರಿಭಕ್ತಿ ಶ್ರದ್ಧೆಯ ನೀಡು 2 ಪಾವಂಜೆ ಕ್ಷೇತ್ರಾಭರಣ ದೀನೋದ್ಧರಣ ದೇವ ಲಕ್ಷ್ಮೀನಾರಾಯಣಪದಶರಣ 3
--------------
ತುಪಾಕಿ ವೆಂಕಟರಮಣಾಚಾರ್ಯ
ಕುಮಾರ ಗುಹಗೆ ಎಸಗೀ ಪ ವಾಹನನಿಗೆ ಧೀರಗೆ ಜಯವೆಂದು ಆರತಿ ಅ.ಪ ವೇದೋಕ್ತ ಮಂತ್ರದಿಂದ ಶರ್ಕರ ಮೊದ-ಲಾದ ದ್ರವ್ಯದಿಂದ ಸಾಧು ವಂದಿತನಿಗೆ ಭೂದೇವರಭಿಷೇಕ ಸಾದರದಲಿ ಮಾಡಿ ಮೋದದಿ ಜಯವೆಂದು ||ಆರತಿ|| 1 ಕಲಶೋದಕ ಮಂತ್ರಿಸಿ ಭೂಸುರರೆಲ್ಲ ನಲವಿಂದಲಭಿಷೇಕಿಸಿ ತಲೆಗೆ ಗಂಧಾಕ್ಷತೆ ತುಲಸಿ ಪತ್ರವು ವುಷ್ಪಗಳ ಮಾಲೆ ಇರಿಸುತ್ತ ನಲವಿಂದೆ ಜಯವೆಂದು ||ಆರತಿ|| 2 ಓಗರ ಜಂ- ಬೂಫಲ ಭಕ್ಷ್ಯವ ಶ್ರೀಪತಿ ಸಖಗೆ ಸ-ಮಾರ್ಪಿಸಿ ಜಯವೆಂದು ||ಆರತಿ|| 3 ಮೂರು ಪ್ರದಕ್ಷಿಣೆಯ ಭಕ್ತಿಯೊಳ್ ನಮ-ಸ್ಕಾರವ ಪ್ರಾರ್ಥನೆಯ ಮಾರಾರಿಸುತಗೆ ಅ-ಪಾರ ಮಹಿಮನಿಗೆ ಹಾರುವರೆಸೆಗುತೊ-ಯ್ಯಾರದಿ ಜಯವೆಂದು ||ಆರತಿ|| 4 ಮಂಗಳ ಶರಜನಿಗೇ ಗುಹಗೆ ಜಯ ಮಂಗಲ ಸ್ಕಂಧನಿಗೇ ಮಂಗಲ ಪಾವಂಜೆ ವಾಸ ಷಡ್ಶಿರನಿಗೆ ಮಂಗಲದಾಸರ ಕಾವಗೆ ಜಯವೆಂದು ||ಆರತಿ|| 5
--------------
ಬೆಳ್ಳೆ ದಾಸಪ್ಪಯ್ಯ
ಕೈಯ ಮುಗಿವೆನು ಮಹಾಲಿಂಗ ಜಗ- ದೈಯನೆ ವೃಷಭತುರಂಗ ಪ. ಧೈರ್ಯಸಾಹಸ ಸಮುದ್ರ ರುದ್ರ ಸುರ- ವರ್ಯನೆ ಸದಯಾಪಾಂಗ ಅ.ಪ. ಕೆಂಡಗಣ್ಣಿನ ಪರಶಿವನೆ ಸುಪ್ರ- ಚಂಡ ಚಂಡಿಕಾಧವನೆ ಮಂಡೆಯೊಳಗೆ ಭಾಗೀರಥಿಯ ತಾಳ್ದ ಕಂಡಪರಶು ಪಾವನನೆ 1 ಚಂದ್ರಕಲಾಧರ ಹರನೆ ಗೋ- ವಿಂದನ ವರ ಕಿಂಕರನೆ ಸುಂದರ ಶುದ್ಧಸ್ಫಟಿಕಶರೀರನೆ ವೃಂದಾರಕ ಮುನಿವೃಂದವಂದಿತನೆ2 ಪಾವಂಜೆ ಕ್ಷೇತ್ರವಾಸ ಪರಿ- ಪಾಲಿಸು ಫಣಿಪತಿಭೂಷ ದೇವ ಲಕ್ಷ್ಮೀನಾರಾಯಣದಾಸನ ಕಾವ ಕಲ್ಮಷವಿನಾಶ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಕೈಯ ಮುಗಿವೆನು ಮಹಾಲಿಂಗ ಜಗ- ದೈಯನೆ ವೃಷಭತುರಂಗ ಪ. ಧೈರ್ಯಸಾಹಸ ಸಮುದ್ರ ರುದ್ರ ಸುರ- ವರ್ಯನೆ ಸದಯಾಪಾಂಗಅ.ಪ. ಕೆಂಡಗಣ್ಣಿನ ಪರಶಿವನೆ ಸುಪ್ರ- ಚಂಡ ಚಂಡಿಕಾಧವನೆ ಮಂಡೆಯೊಳಗೆ ಭಾಗೀರಥಿಯ ತಾಳ್ದ ಕಂಡಪರಶು ಪಾವನನೆ1 ಚಂದ್ರಕಲಾಧರ ಹರನೆ ಗೋ- ವಿಂದನ ವರ ಕಿಂಕರನೆ ಸುಂದರ ಶುದ್ಧಸ್ಫಟಿಕಶರೀರನೆ ವೃಂದಾರಕ ಮುನಿವೃಂದವಂದಿತನೆ2 ಪಾವಂಜೆ ಕ್ಷೇತ್ರವಾಸ ಪರಿ- ಪಾಲಿಸು ಫಣಿಪತಿಭೂಷ ದೇವ ಲಕ್ಷ್ಮೀನಾರಾಯಣದಾಸನ ಕಾವ ಕಲ್ಮಷವಿನಾಶ3
--------------
ತುಪಾಕಿ ವೆಂಕಟರಮಣಾಚಾರ್ಯ
ಗಿರಿಜಾತೆಯ ಸುತ ಸುರನರ ಪೂಜಿತ ಪರಮಪುರುಷ ಗುಹ ದಯದೋರೋ ಪ ದುರಿತ ವಿನಾಶ ಗುಹ ದಯದೋರೋ ಅ.ಪ ಸರ್ವೋತ್ತಮೋತ್ತಮ ಗುಹ ದಯದೋರೋ 1 ಇಂದಿರೆಯರಸನ ಕಂದನ ಗತರೂಪಾ- ಕುಂದಿಸಿದಾ ಗುಹ ದಯದೋರೋ 2 ಬಾಲೆ ವಲ್ಲಿಯವರ ಶೀಲ ಸುಗುಣ- ಲೋಲ ಪಾವಂಜೆ ಗುಹ ದಯದೋರೋ 3
--------------
ಬೆಳ್ಳೆ ದಾಸಪ್ಪಯ್ಯ
ಗಿರಿಜೆಯ ಪ್ರೀತಿಯ ಕುವರ ಪ ಧುರ ಧೀರ ಭವದೂರ ಉದಾರ ಗಂಭೀರ ತವ ಚರಣವ ತೋರೋ ಕುಮಾರ ಅ ತಾರಕ ದೈತ್ಯನ ವಿನಾಶ ಗುಹೇಶ ಸರ್ವೇಶಾ ಜಗ-ದೀಶಾಸೇನೇಶಾ ಗುಣವಾರಿಧಿ ಚಂಪಕನಾಸಾ 1 ಶುಭ ಚರಣ - ಕಡುಕರುಣಾಕರ ಪಲ್ಲವ ರತ್ನಾಭರಣ2 ಪಾವನ ಮೂರುತಿ ಈಶ ರವಿಭಾಶಾ ಅಘನಾಶಾ ಸದ್ ದಾಸಾ ಜನಪೋಷ ವರ ಪಾವಂಜೆ ಕ್ಷೇತ್ರ ನಿವಾಸ 3
--------------
ಬೆಳ್ಳೆ ದಾಸಪ್ಪಯ್ಯ
ಗುಹ ಕಂದರ್ಪಾನ್ವಿತ ಮುನಿವಂದ್ಯ ಪ ಸದಾನತ ಬಂಧು ಶರಜ ನಿತ್ಯಾನಂದ ಅ ಮುಕ್ಕಿ ತಾರಕನನು ಕೊಂದ 1 ಸತಿ ದುರುಳ ಪದ್ಮನು ಪಡೆವೆರಸಿ ಯುದ್ಧಕೆ ಬರೆ | ಶಿರವ ಕತ್ತರಿಸಿದ ಸ್ಕಂದ 2 ನಾಸ ಪಾವಂಜೆಯೊಳ್ನಿಂದ 3
--------------
ಬೆಳ್ಳೆ ದಾಸಪ್ಪಯ್ಯ
ಗೌರೀಕರಪಂಜರಕೀರ ಜೋ ಜೋ ಶೌರಿ ದಯಾರಸಪೂರನೆ ಜೋ ಜೋ ಧೀರ ಮುಕ್ಕಣ್ಣ ಕುಮಾರನೆ ಜೋ ಜೋ ದಾರಿದ್ರ್ಯ ದುಃಖ ಪ್ರಭಂಜನ ಜೋ ಜೋ 1 ಸಾವಿರನಯನ ತುರಂಗನೆ ಜೋ ಜೋ ದೇವರಾಜಸಂಭಾವಿತ ಜೋ ಜೋ ತಾವರೆನಯನ ಸನ್ಮೋಹನ ಜೋ ಜೋ ಸೇವಕವಿಬುಧಸಂಜೀವನ ಜೋ ಜೋ 2 ಪೃಥ್ವಿಯೊಳ್ವಾವಂಜೆ ಕ್ಷೇತ್ರಾಧಿವಾಸ ಕರ್ತ ಲಕ್ಷ್ಮೀನಾರಾಯಣಪಾದ ದಾಸ ಭೃತ್ಯವರ್ಗವ ಕಾವ ಭವಹರ ಜೋ ಜೋ ಕಾರ್ತಿಕೇಯ ಕೃತಕೃತ್ಯನೆ ಜೋ ಜೋ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಗೌರೀಕರಪಂಜರಕೀರ ಜೋ ಜೋ ಶೌರಿ ದಯಾರಸಪೂರನೆ ಜೋ ಜೋ ಧೀರ ಮುಕ್ಕಣ್ಣ ಕುಮಾರನೆ ಜೋ ಜೋ ದಾರಿದ್ರ್ಯ ದುಃಖ ಪ್ರಭಂಜನ ಜೋ ಜೋ 1 ಸಾವಿರನಯನ ತುರಂಗನೆ ಜೋ ಜೋ ದೇವರಾಜಸಂಭಾವಿತ ಜೋ ಜೋ ತಾವರೆನಯನ ಸನ್ಮೋಹನ ಜೋ ಜೋ ಸೇವಕವಿಬುಧಸಂಜೀವನ ಜೋ ಜೋ 2 ಪೃಥ್ವಿಯೊಳ್ವಾವಂಜೆ ಕ್ಷೇತ್ರಾಧಿವಾಸ ಕರ್ತ ಲಕ್ಷ್ಮೀನಾರಾಯಣಪಾದ ದಾಸ ಭೃತ್ಯವರ್ಗವ ಕಾವ ಭವಹರ ಜೋ ಜೋ ಕಾರ್ತಿಕೇಯ ಕೃತಕೃತ್ಯನೆ ಜೋ ಜೋ 3
--------------
ತುಪಾಕಿ ವೆಂಕಟರಮಣಾಚಾರ್ಯ
ಜಯ ಕಾರ್ತಿಕೇಯ | ದಾಮೋದರ ಪ್ರಿಯ ಪಾರ್ವತೀ ತನಯ ಪ ಮಯ ಸದಾನಂದಅ ನೀಲಕಂಠನ ಸುಧ್ವಜ ಚಂಪಕನಾಸ ಬಾಲಾರ್ಕ ಕೋಟಿ ತೇಜಾ ಕಾಲಾಂತಕ ದೇವ ಶಿವನ ಬಾಲ ಬಾಹುಲೇಯ ಜನಲೋಲ ಸಜ್ಜನ ಪಾಲ ರತ್ನಮಾಲ ಕುಮಾರ 1 ಖುಲ್ಲ ವಿಶ್ವ | ವಲ್ಲಭ ಗುಹಾ 2 ಪಾವಂಜೆ ಕ್ಷೇತ್ರವಾಸಾ | ರಕ್ಷಕ ದಾಸ ಕೋವಿದರೊಡೆಯ ಈಶಾ | ದೇವಸೇನೆಯಾ ರಮಣ ದೇವಾಧಿದೇವನುತ ಪಾವನ ಮೂರುತಿ | ಪಾವಕೋದ್ಭೂತಾ 3
--------------
ಬೆಳ್ಳೆ ದಾಸಪ್ಪಯ್ಯ