ನಿನ್ನ ಸೇರಿದೆ ಮಹಾಲಿಂಗ ಎನ-
ಗಿನ್ಯಾರು ಗತಿ ಕಾಣೆ ಕರುಣಾಂತರಂಗ ಪಾರ್ವತಿ ಮೋಹನಾಂಗ ಪ.
ನಿನ್ನಂತೆ ಕೊಡುವ ಉದಾರ ತ್ರಿಭು-
ವನ್ನದೊಳಿಲ್ಲದಕ್ಯಾವ ವಿಚಾರ
ಮುನ್ನ ಮಾರ್ಕಾಂಡೇಯ ಮುನಿಯ ಭಯ
ವನ್ನು ಪರಿಹರಿಸಿದೆಯೊ ಸದುಪಾಯ ನಮೋ ಶಿವರಾಯ 1
ಸರ್ವಾಪರಾಧವ ಕ್ಷಮಿಸು ಮಹಾ-
ಗರ್ವಿತರಾಶ್ರಯಕ್ಕೊಲ್ಲದು ಮನಸು
ಶರ್ವರೀಶಭೂಷ ನಿನ್ನ ಹೊರ-
ತೋರ್ವರಿಲ್ಲ ರಣಮಲ್ಲ ಮುಕ್ಕಣ್ಣ ಕಾಯೊ ಸುಪ್ರಸನ್ನ 2
ಅಂತರಂಗದ ದಯದಿಂದ ಯುದ್ಧ-
ಮಂ ತೊಡಗಿದೆ ಪಾರ್ಥನೊಳತಿಚಂದ
ಪಂಥದ ನೆಲೆಯನ್ನು ತಿಳಿದು ಸರ್ವ-
ದೊಡ್ಡದು ನಿನ್ನ ಬಿರುದು 3
ಸಿದ್ಧಿಸು ಸರ್ವಸಂಕಲ್ಪ ಅಡ್ಡ-
ಬಿದ್ದು ಬೇಡುವೆ ನಿನಗ್ಯಾವದನಲ್ಪ
ಹೊದ್ದಿದವರಿಗಿಲ್ಲೆಂದಿಗು ಕೇಡು ದುಷ್ಟರದ್ಯಾವ ಪಾಡು4
ಅಂಜಿಕೆ ಬಿಡಿಸಯ್ಯ ಹರನೆ ಪಾ-
ವಂಜಾಖ್ಯವರಸುಕ್ಷೇತ್ರಮಂದಿರನೆ
ಸಂಜೀವನ ತ್ರಿಯಂಬಕನೆ ನವ-
ಸಲಹೊ ಪಂಚಮುಖನೆ 5