ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಕ್ಷಿಸೊ ಶ್ರೀಶ ಶ್ರೀನಿವಾಸ ಪ ರಕ್ಷಿಸೆನ್ನ ಪದ್ಮಾಕ್ಷ ತ್ರಿಜಗದ ಧ್ಯಕ್ಷ ಖಳ ಜನಶಿಕ್ಷ ಪಾಂಡವ ಪಕ್ಷ ಕರುಣ ಕಟಾಕ್ಷದಲಿ ನೀ ವಾಹನ ಅ.ಪ. ಕೊಂಚ ಮತಿಯಲಿ ಕುಜನರ ಸೇರಿ ಸಂಚರಿಸುತಲಿ ದೀನನಾದೆ ಪಂಚಶರಸ್ಮರ ವಂಚಿಸುತ ಬಿಡೆ ಚಂಚಲಾಕ್ಷೇರ ಸಂಚು ನೋಟದ ಮಿಂಚಿಗೆನ್ನ ಮನ ಚಂಚಲಾಗುತೆ ವಂಚಿಸೆ ಯಮನಂಚಿಗೆ ಸಿಲುಕಿದೆ 1 ಕಿಟ್ಟಗಟ್ಟಿದ ಕಬ್ಬಿಣದಂತೆ ಕೆಟ್ಟ ಕಿಲ್ಬಿಷದ ರೂಪದಿ ಬಿದ್ದು ದಿಟ್ಟ ನಿನ್ನಯ ಗುಟ್ಟು ತಿಳಿಯದೆ ಪೊಟ್ಟೆ ಗೋಸುಗ ಕೆಟ್ಟ ಕುಜನರ ಘಟ್ಟನಾ ಕಾಲ್ಗಟ್ಟೆ ಬಹುಶ್ರಮ ಪಟ್ಟು ಭವದಿ ಕಂಗೆಟ್ಟೆ ಪ್ರತಿದಿನ 2 ಶ್ರೀ ಕಮಲೇಶ ಹೃತ್ಪದ್ಮದಿನೇಶ ಪ್ರಕಾಶ ಬೇಗನೆ ಬಂದು ಯಾಕೇ ತಡೆವೆನ್ನ ವಾಕ್ಕುಲಾಲಿಸಿ ಕರವ ಪಿಡಿ ದಾ ಕುಚೇಲನ ಸಾಕಿದಾಪರಿ ಕರ ಜಗನ್ನಾಥ ವಿಠಲ 3
--------------
ಜಗನ್ನಾಥದಾಸರು