ಆರುತೀಯ ಬೆಳಗಿರೀಗ ನಾರಿಯೇರು ಶ್ರೀನಿವಾಸಗಾರುತೀಯ ಪ.
ಆರುತೀಯ ಬೆಳಗಿರೀಗ ಸಾರಸಾಕ್ಷ ಪದ್ಮಿನೀಯ
ಸೇರಿ ಲಕುನಿಯಿಂದ ಮೆರೆವೊ
ಮೂರುಲೋಕದೊಡೆಯ ಕೃಷ್ಣಾ ಅ.ಪ.
ಮೀನನಾಗಿ ವೇದ ತಂದು ದಾನವರ ವಂಚಿಸುತ್ತ
ಯಾನದಲ್ಲಿ ಭೂಮಿ ತಂದ ದೀನರಕ್ಷಕ ನಾರಸಿಂಹಗೆ 1
ಚಲುವ ಬ್ರಹ್ಮಚಾರಿಯಾಗಿ ಛಲದಿ ಕ್ಷತ್ರಿಯೇರ ಕೊಂದು
ಒಲಿವ ಶಿವನ ಬಿಲ್ಲ ಮುರಿದು ನಲಿದು ಬಂದ ಗೋಪಿಕಂದಗಾ 2
ನಾರಿಯೇರ ವ್ರತವನಳಿದು ತೆÉೀಜಿಯೇರಿ ಮೆರೆವ ಧೀರ
ವಾರವಾರ ಪೂಜೆಗೆಂದು ಶೂರ ಶ್ರೀ ಶ್ರೀನಿವಾಸಗಾರುತೀಯ 3