ಹರಿಯೆ | ಕರುಣ ವಾರಿಧಿಯೆ | ಧೊರೆಯೇ |ವರ ಚರಣ ಸೇವೆಯನು ಕೊಡು ಹರಿಯೇ ಪ
ಗಾಂಗೇಯ | ಶರದಿ ಸೆಣೆಸಲು ಅಂದುಸರಸದಲಿ ನೀ ಅವನ | ಪೊರೆಯಲಿಲ್ಲವೆ ಎಂದು 1
ದುರುಳ ದುಶ್ಯಾಸನ | ಸೀರೆ ಸಭೆಯಲಿ ಸೆಳೆಯೇತರಳೆ ಪಾಂಚಾಲೆ | ಓಲೆ ಕಳುಹಿದಳೆ ಹರಿಯೆತರುಳೆ ಕೈಗಾಯ ಬೇಕೆಂದು | ನಿನ್ನ ಧೊರೆಯೇಎರಳಾಕ್ಷಿಗಕ್ಷಯ್ಯ | ವಸನಿತ್ತೆ ಹರಿಯೇ 2
ಅಂದು ಬಲತಾಯಿ ಬಾಲಕನ | ತೊಡೆಯಿಂದ ನೂಕೇ |ಬಂದು ಕಾನನಕೆ ತಪಗೈದ | ತರಳನನು ಕಾಯ್ದೇ |ಇಂದು ನಾ ಮಾಡಿದಪರಾಧ | ವೇನಯ್ಯ ಹರಿಯೇ |ಕಂದನಪರಾಧ ಎಣಿಸುವಳೆ | ತಾಯಿ ಧೊರೆಯೇ3
ಗೌತಮರ ಮಡದಿಯನು | ಕಾಯಲಿಲ್ಲವೆ ಹರಿಯೆಔತಣವ ಕೊಟ್ಟು ಬರ | ಹೇಳಿದಳೆ ಧೊರೆಯೇ ||ವೀತಶೋಕನೆ ಎನ್ನ | ಮೊರೆ ಕೇಳಿಸದೆ ಹರಿಯೇಔತಪ್ರೋತ ನೀನೆಲ್ಲವನು | ತಿಳಿದಿರುವೆ ಧೊರೆಯೇ 4
ಬಲಿಯ ಯಾಚಿಸುತ | ನೀ ಅವನ ವಂಚಿಸಿದಿ ಹರಿಯೆತಲೆ ಬಾಗಲಲಿ ನಿಂದು | ನೀ ಅವನ ಪೊರೆದೆ ಧೊರೆಯೆಸಲೆ ಬೀದಿ ಬೀದಿಯಲಿ | ನಾ ಕೀರ್ತಿಸುವೆ ಹರಿಯೇಬಲು ದಯಾಪರ ಗುರು | ಗೋವಿಂದ ವಿಠಲೆಂದು ಧೊರೆಯೆ 5