ಒಟ್ಟು 8 ಕಡೆಗಳಲ್ಲಿ , 8 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನೆಂದ್ಹೇಳಲಿ ತಂಗಿ _ ಏನೆಂದ್ಹೇಳಲಿ ತಂಗಿ _ ಏನೆಂದ್ಹೇಳಲಿ ರಂಗನ ಮಹಿಮೆಯ ಏನೆಂದ್ಹೇಳಲಿ ಪ ಘನ್ನಸಿರಿವಿಧಿ ಧ್ಯಾನಕೆ ನಿಲುಕದ ಅಗಣಿತ ಮಹಿಮೆಯ ಅ ಎಲ್ಲವ ಬಲ್ಲನು ಎಲ್ಲವ ಮಾಡುವ ಎಲ್ಲರ ಒಡೆಯನು ಇಲ್ಲದ ಸ್ಥಳವಿಲ್ಲ ಬಲ್ಲವರಿಲ್ಲವೆ ಫುಲ್ಲನಾಭನ ನಲ್ಲನು ಲಕ್ಷ್ಮಿಗೆ ಗೊಲ್ಲನು ಆದನೆ 1 ಅಂಗನೆ ಲಕ್ಷ್ಮಿಯ ಸೊಗಸಿಗೆ ನಿಲುಕದ ಅಂಗನೆ ಇಲ್ಲದೆ ಮಗನನು ಪಡೆದವ ಹಿಂಗದ ತಾನೆ ಅಂಗನೆ ಯಾದವ ರಂಗನ ಗೋಕುಲ ಹೆಂಗಳ ಕೂಡಿದನೆ2 ತಂದೆಯ ಕೊಂದನು ಕಂದನ ಸಲಹಿದ ಕಂದನ ಕೊಂದನು ತಂದೆಯ ಸಲಹಿದ ಬಂಧುಗಳೆನ್ನದೆ ಕೊಂದನು ವಂಶವ ತಂದೆಯು ಇಲ್ಲದೆ ಕಂದನು ಆಗುವನೇ 3 ದಾನವ ನೀಡಿದ ದಾನಿಯ ತುಳಿದನು ಮಾನವ ತೆಗೆದಾ ಹೀನನ ಸಲಹಿದ ದೀನರ ಸಲಹುವ ದಾನವರಳಿವನು ಜ್ಞಾನಿಗಮ್ಯನು ಮಾನಸ ಹಂಸನ 4 ಹಸಿವೆಯ ಅರಿಯದ ಅಸಮದೇವನು ಸೊಸಿಯು ನೀಡಿದ ಶಾಖವ ತಿಂದನೆ ಪಶುಪತಿ ಋಷಿಯನು ವಶವಾಗಿ ಮಾಡಿದ ಮಾಸದಮಹಿಮನು 5 ನಾಲ್ಮೊಗನಯ್ಯನು ಸುಳ್ಳನು ಹೇಳುತ ಕಳ್ಳನು ಆದನು ಗೊಲ್ಲರ ಭಕ್ತರಿಗೆ ಮೆಲ್ಲನೆ ಕುರುಕುಲ ಎಲ್ಲವ ಸವರಿದ ಬಲ್ಲಿದ ಕೃಷ್ಣಗÉ ಇಲ್ಲವೆ ಸಮರಧಿಕ 6 ಜಗವನು ಮಾಡುವ ಜಗವನು ಪಾಲಿಪ ಜಗವನು ಅಳಿಸುವ ಮಗುವಾಗಿ ಬಂದನೆ ಜಗಜೀವ ಭಿನ್ನನು ಜಗದೊಳು ವ್ಯಾಪ್ತನು ನಗುತಲಿ ಬಾಯಲಿ ಜಗವನು ತೋರಿದನೆ7 ಯಾಗವ ನಡೆಸಿದ ಯಾಗವ ಕೆಡಿಸಿದ ಯೋಗವ ಚರಿಸುತ ಯೋಗವ ಬೋಧಿಪನೆ ಬಾಗುವ ಭಕ್ತರ ನೀಗುವ ಕಲುಷವ ಆಗಮವಂದಿತ ಸಾಗರಶಯನನೆ8 ಹತ್ತವತಾರವ ನೆತ್ತಿದ ಮಹಿಮನು ಉತ್ತಮ ಭಕುತರ ತೆತ್ತಿಗನಾದನೆ ಬತ್ತಲೆ ಶಿಶುವಾಗಿ ಬಿತ್ತಿದ ಮೋಹವ ಬೆಸ್ತರಕುವರಿಗೆ ಆತ್ಮಜನಾದವನೆ9 ಚಕ್ರವಪಿಡಿದವ ನಕ್ರನ ತರಿದವ ಶಕ್ರನಕಾಯ್ದವ ವಕ್ರೆಯ ಕೂಡಿದನೆ ರಕ್ಕಸಯವನನ ಠಕ್ಕಿಲಿ ಅಳಿಸುತ ಭಕ್ತನಪೊರೆದಾ ಯುಕ್ತಗಳೊಡೆಯನೆ 10 ನಾರೆಂದೊದರಿದ ಉರುತರ ಪಾಪಿಯ ಭರದಿಂಪೊರೆಯೊ ಕರುಣಾಸಾಗರನೆ ನರಹರಿದೇವನು ಪರಿಪರಿರೂಪನು ಪರಿಪರಿಲೀಲೆಗೆ ಮೇರೆಯೆ ಇಲ್ಲಾವೇ 11 ವಾರಿಯಲಾಡುವ ಭಾರವ ಹೊರುವಾ ಕೋರೆಯ ತೀಡುವ ಘೋರವ ತೋರುವನೇ ವೀರರತರಿಯುವ ಕ್ರೂರರಸವರುವ ಜಾರನು ಆಗುವ ವೈರಿಗಳ್ವಂಚಿಪ ಏರುವ ತೇಜಿಯನೆ 12 ಅದ್ಬುತ ರೂಪವ ಕದನದಿ ತೋರಿದ ಬದರಿಯನಿಲಯಗೆ ತುದಿಮೊದಲಿಲ್ಲಾವೆ ಉದರದಿ ಮಗುವನು ಮುದದಿಂಸಲಹಿದ ಮುದಮುನಿ ಪ್ರಿಯನು ಹೃದಯದಿ ವಾಸಿಪನೆ 13 ವಿಷವನು ಕುಡಿದಾ ವೃಷಭವಾಹನ ಅಸುರನ ಭಯದಿಂ ಘಾಸಿಲಿ ಓಡುತಿರೇ ಮೋಸದಿ ಯುವತಿಯ ವೇಷವ ಧರಿಸುತ ಪಶುಪತಿ ಸಲಹಿದನೇ 14 ಭರದಿಂ ರಥವೆತ್ತಿ ನರನಂ ಕಾಯ್ದನು ಧರಣಿಯ ಒತ್ತುತ ಕುರುಪನ ಕೆಡಹಿದನೇ ಮರೆಸುತ ರವಿಯನು ಪೊರೆದನು ಚೇಲನ ಸುರವರಪೋಷಕ ಸಿರಿಪತಿ ಚದುರನ 15 ಗಂಗೆಯಪಡೆದ ಮಂಗಳ ಮಹಿಮನು ಹಿಂಗದೆ ಗೋಪರ ಸಂಗಡ ಆಡಿದನೇ ತಿಂಗಳ ಬೆಳಕಲಿ ಶೃಂಗರ ಸೊಬಗನು ಹೆಂಗಳ ಕೂಡುತ ಸಂಗೀತ ಪಾಡಿದನೆ 16 ಕಾಳಿಯ ಫಣೆಯಲಿ ಕಾಳಿಂದೀಶನು ತಾಳಕೆ ಕುಣಿಯುತ ಕೊಳಲನ್ನೂದಿದನೆ ಘೂಳಿಗಳಳಿಯುತ ನೀಲಳತಂದವ ಊಳಿಗ ಮಾಡಿದನೇ 17 ನಾರಿಯು ಮೊರೆಯಿಡೆ ಸೀರೆಯನೀಡಿದ ವಾರಿಜಾಕ್ಷನು ಸೀರೆಯ ಚೋರನೆ ನೀರೊಳು ಮುಳುಗಿದ ಪೋರರಿಗೆಲ್ಲ ತೋರಿದ ಜಗವನು ಸೂರಿಗಳೊಡೆಯನೆ 18 ಗರುಡನ ಏರುವ ಧರಣಿಯ ರಮಣನು ಏರುತಹುಡುಗರ ತುರುಗಳ ಕಾಯ್ದನೆ ಮಾರನಪಡೆದ ಮುರಹರಕೃಷ್ಣನು ಗಿರಿಯನು ಎತ್ತುತ ಹರುಷವ ಬೀರಿದನೇ 19 ಶೃತಿಗಳು ಪೊಗಳುವ ವ್ಯಾಪ್ತನ ನಿತ್ಯನ ಪಾತಕ ಹೋಗುವುದೇ ಅಂತಕ ಗತಿ ಮತಿ ಪ್ರೇರಕ ದಾತನು ಎಂತೆನೆ ಪ್ರೀತಿಲಿ ಸಲಹುವನೆ 20 ಮಜ್ಜಿಗೆ ಕಡೆಯುವ ರಜ್ಜುವಿನಿಂದಲಿ ಮೂರ್ಜಗನಯ್ಯನು ಕಟ್ಟಿಸಿಕೊಂಡಾನೆ ಲಜ್ಜೆಯ ಬಿಡುತಲಿ ಗೆಜ್ಜೆಯ ಕಟ್ಟುತ ಘರ್ಜಿಸಿ ಪಾಡಲು ಹೆಜ್ಜೆಯ ತೋರುವನೆ 21 ದಾಸರ ಪೋಷಿಪ ಶೇಷಗಿರೀಶನ ವಿಶೇಷವೆ ಬಣ್ಣಿಸೆ ಶೇಷಗೆ ಆಗದೆ ದೋಷವು ಇಲ್ಲದ ವಾಸುದೇವನೆ ತೋಷವ ನೀಡುವ ಸಾಸಿರ ನಾಮಕನೆ22 ಜಯಮುನಿ ಅಂತರ ವಾಯುವಿನಲ್ಲಿಹ ಜಯಕೃಷ್ಣವಿಠಲನು ಜೀಯನೆ ಜಗಕೆಲ್ಲ ನಯಭಯದಿಂದಲಿ ಹಯಮುಖನೊಲಿಸಲು ಭಯವನು ಹರಿಸುತ ನ್ಯಾಯದಿ ಪಾಲಿಪನೇ 23
--------------
ಕೃಷ್ಣವಿಠಲದಾಸರು
ನೀನೆ ಅನಾಥನಾಗಿರಲು ಅನ್ಯರಿಗೆ ಏನು ದಾನವ ನೀ ಮಾಡುವಿಯೊ ಪ ಜ್ಞಾನಪೂರ್ಣ ನೀನೆಂದು ಅರಿತು ನಿನ್ನ ಜ್ಞಾನಲೇಶವನು ಯಾಚಿಸುವೆ ಅ.ಪ ಯಾರು ನಿನ್ನ ತಂದೆ ಯಾರು ನಿನ್ನ ತಾಯಿ ತೋರೆಲೊ ಈರೇಳು ಭುವನದಲಿ ಊರೊಳು ವಾಸಕೆ ಗೃಹವನು ಕಾಣದೆ ವಾರಿಧಿಯೊಳು ನೀನಡಗಿದೆಯೊ ರಂಗ 1 ಎಡಬಿಡದಿಹ ನಿನ್ನ ಮಡದಿಯ ಬಯಸದೆ ಪಡೆದೆಯೊ ನಾಭಿಯೊಳ್ನಾಲ್ಮುಗನ ಅಡಿಯಾಕಾಶವ ಕಾಣದ ಇಂತಹ ದುಡುಕಿನ ಲೋಕೋತ್ತರ ಪುರುಷ 2 ಪೆತ್ತುದನೆಲ್ಲವ ತುತ್ತು ಮಾಡುವುದು ಎತ್ತರ ನಡತೆಯೊ ನಾ ಕಾಣೆ ಪುತ್ಥಲಿ ಗೊಂಬೆಗಳಂದದಿ ಎಲ್ಲರ ಸುತ್ತಿಸುತಿಹೆ ಪುರುಷೋತ್ತಮನೆ 3 ಚಂಚಲಳಾದÀ ಮಡದಿಯು ನಿನ್ನನÀು ವಂಚಿಪಳೆನ್ನುವ ಭಯದಿಂದ ಹೊಂಚು ಕಾಯಲು ನಿನ್ನ ಹೃದಯದಲ್ಲಿ ಪೊತ್ತು ಸಂಚರಿಸುವೆ ವಿಲಕ್ಷಣ ಪುರುಷ 4 ಅಣುವಿನೊಳಗೆ ಅಣು ಮಹತಿನೊಳಗೆ ಮಹ ತೆನಿಪ ವಿರೋಧ ಧರ್ಮಕೆ ಧರ್ಮಿ ಎನ್ನಿಪ ನಿನ್ನಯ ಗುಣವರಿಯಲು ಸಂತತ ಸುಜನ ಪ್ರಸನ್ನ 5
--------------
ವಿದ್ಯಾಪ್ರಸನ್ನತೀರ್ಥರು
ಭಕ್ತಿಯಲಿ ನಡೆವರಿವರೇ ಸುಗುಣರೊ ಮುಕ್ತಿಯನು ಬಯಸಿ ಮುರಾರಾತಿಯ ಚರಣದಲ್ಲಿ ಪ ಉದಯದಲೆದ್ದು ಉನ್ನತ ಸ್ವರದಿಂದ ಹರಿ ಪದವೇ ಗತಿ ಎನುತಾ ಎಲ್ಲ ಕಾಲಕೆ ಉದರ ಚಿಂತಿಯ ಮರೆದು ಮನ ಉಬ್ಬಿ ಉತ್ಸವದಿ ಪದೋಪದಿಗೆ ಮಂಗಳಾವಾರ್ತಿ ಪೇಳುತ ನಿತ್ಯಾ 1 ಭಾಗವತ ಮಿಕ್ಕ ಪುರಾಣಾದಿ ನುಡಿಗೆ ಕಿವಿಗೊಟ್ಟು ಹಾಹಾ ಎನತಲಿ ಒಡನೊಡನೆ ಹರಿ ಮಹಿಮೆಯಲಿ ಇದ್ದು ಮಾರಿಗಳ ಅಡಿಮಾಡಿ ಆದ್ಯಂತಕಾಲ ಸುಖಿಸುವ ನಿತ್ಯಾ 2 ಈ ದೇಹ ತ್ಯಾಗ ಮಾಡದೆ ಆಗಲಿ ಪಂಚ ಭೇದ ಪೇಳುವದು ಬಿಡೆನೆಂಬೊ ಸೊಲ್ಲು ಆದಿತ್ಯ ಲೋಕಕ್ಕೆ ಮುಟ್ಟುವಂತೆ ಕೂಗಿ ಸಾಧನ ಮಾಡುತಲಿಪ್ಪ ಶುಭಮಾರ್ಗದಲಿ ನಿತ್ಯಾ 3 ಅವಾವ ಮೋಹಕವು ಶಾಸ್ತ್ರದಲ್ಲಿದ್ದರೂ ಭಾವದಲಿ ಗುಣಿಸದೆ ನಿಕ್ಕರಿಸೀ ದೇವದೇವೇಶನೆ ಬ್ರಹ್ಮಾದಿಗಳು ವಂಚಿಪ ಕಾವ ಕೊಲ್ಲುವನೀತನೆಂದು ತಿಳಿದು ನಿತ್ಯಾ 4 ಅನ್ಯಶಬ್ದವು ಅನ್ಯಸ್ಪರಿಶ ರೂಪಕ ರಸಾ ಅನ್ಯಗಂಧಗಳಿಗೆ ಇಂಬುಗೊಡದೇ ಧನ್ಯರಾಗಿದ್ದವರ ಕರುಣ ಸಂಪಾದಿಸಿ ಪುಣ್ಯಭೂಮಿಯನು ಹಾರೈಸುವ ನಿತ್ಯಾ 5 ಅವೈಷ್ಣವನು ಹರಿ ಎಂದು ನುಡಿವಡೆ ತಾನು ಅವನಂತೆ ಸ್ಮರಿಸದೇ ಸುಮ್ಮನಿದ್ದೂ ಭವವದ್ದು ಭಾಗ್ಯವನು ಅಪೇಕ್ಷಿಸದೇ ಮುಂದೆ ನಿತ್ಯ 6 ಭೂಸುರರ ಪಾದದಲಿ ವಿಶ್ವಾಸ ಇಟ್ಟು ದು ರಾಶೆಯನು ಮಾಡಿ ನರರಾಶ್ರೈಸದೆ ಏಸೇಸು ವಿಪತ್ತು ಗುಣ ಮೇಲಟ್ಟಿದರು ನಿತ್ಯ 7 ಕಾಲ ಮೃತ್ಯು ಬಂದು ಹುಂಕರಿಸಿ ನಿಂದು ಮಹ ಜ್ವಾಲೆಯನು ತೋರಿ ಕಠಿಣೋಕ್ತಿಯಲ್ಲೀ ಏಳೇಳು ಎನುತ ಎಬ್ಬಿಸಿದ ಕಾಲಕೆ ತನ್ನ ನಾಲಿಗೆಲಿ ಹರಿ ಕೃಷ್ಣ ಕೇಶವನೆನುತ ನಿತ್ಯಾ 8 ಸಕಲ ಚೇಷ್ಟಾದಿಗಳು ಹರಿಮಾಡಿಸಲು ಉಂಟು ಮುಕುತಿ ನರಕವೆಂಬ ಯೋಚನ್ಯಾಕೆ ಸಿರಿ ವಿಠ್ಠಲನಲ್ಲಿ ಸುಖ ದು:ಖವಿತ್ತದು ಸಮ್ಮತವೆನುತ ನಿತ್ಯಾ 9
--------------
ವಿಜಯದಾಸ
ಮಾಯಾ ಭ್ರಮಿತನಾದ ಮೂಢನಪರಾಧ ಶತವನು ಪಗುಣ ಮೂರರೊಳು ಬದ್ಧನಾಗಿ ಮತ್ತೆಗುಣಕಾರ್ಯ ವಿಷಯಂಗಳೊಳು ಸಕ್ತನಾಗಿಗುಣ ಹತ್ತರಭಿಮಾನಿಯಾಗಿ ುಪ್ಪಗುಣಹೀನನಿಗೆ ಜ್ಞಾನ ದೊರಕೊಳ್ಳದಾಗಿ 1ಪುಣ್ಯ ಪಾಪ ಮಿಶ್ರವೆಂಬ ಕರ್ಮಜನ್ಯವಾದ ಸ್ಥೂಲದೇಹ ತಾನೆಂಬಭಿನ್ನಮತಿಗೆ ದೊರಕೊಂಬ ಜ್ಞಾನವಿನ್ನುಂಟೆ ನಿರ್ಣೈಸೆ ಸುಗುಣ ಕದಂಬ 2ಚಂಚಲವಾಗಿಪ್ಪ ಮನವು ಅಲ್ಲಿವಂಚನೆುಂ ಮಾಳ್ಪ ಸ್ತುತಿ ಪೂಜೆ ಜಪವುಸಂಚಿತವಾುತಘ ವ್ರಜವು ಹೀಗೆವಂಚಿಪ ಮಾಯೆಯ ಗೆಲಲಾರಿಗಳವು 3ಕರ್ಮಕಲಾಪವ ಕಳಿದು ಚಿತ್ತನಿರ್ಮಲನಾಗಿ ಬ್ರಹ್ಮವ ನೆರೆ ತಿಳಿದುಹಂಮಳಿದುಳಿವದೆಲ್ಲಿಯದು ನೀನುಸುಮ್ಮನಿರದೆ ಕಾಯೆ ಸುಲಭವಾಗಿಹುದು 4ಬಂಧನವಿದ ಪರಿಹರಿಸು ಕೃಪೆುಂದಲಿ ಭವದಿಂದಲೆನ್ನನುದ್ಧರಿಸು ತಂದೆ ನೀ ತಿರುಪತಿಯರಸು ಲೋಕಬಂಧು ಶ್ರೀ ವೆಂಕಟರಮಣ ನಿರೀಕ್ಷಿಸು 5ಓಂ ವಿಶ್ವರೂಪ ಪ್ರದರ್ಶಕಾಯ ನಮಃ
--------------
ತಿಮ್ಮಪ್ಪದಾಸರು
ಶ್ರೀ ರುಧಿರೋದ್ಗಾರಿ ಸಂವತ್ಸರ ಸ್ವಾಮಿ ಧನ್ವಂತರಿ ಸ್ತೋತ್ರ 155 ಆನಂದ ಚಿನ್ಮಾತ್ರ ವಪುಷ ಸರ್ವಾಧಾರ ಅನಘ ಕೂರ್ಮಹÀಯ ಶೀಷ್ರ್ಯ ಸ್ತ್ರೀರೂಪ ಅಜಿತ ಆನಮೋ ರುಧಿರೋದ್ಗ್ಗ್ಗಾರಿ ಸಂವತ್ಸರ ಸ್ವಾಮಿ ಅನುತ್ತಮ ಸರ್ವೋತ್ತಮ ಧನ್ವಂತರಿ ರಮೇಶ ಪ ರಾಜಗುರು ಮಂತ್ರಿಗುರು ಸÉೀನಾಧಿಪತಿ ಬುಧನು ರಾಜಿಸುವರು ಸೂರ್ಯೇಂದು ಕವಿ ಭೂಮ ರವಿಜ ಪ್ರಜ್ವಲಿಸಿ ನೀ ಇವರೊಳ್ ಕೃತಿಯ ನಡೆಸಿ ಲೋಕ ಪ್ರಜೆಗಳಿಗೆ ಮಳೆ ಬೆಳೆ ಸೌಖ್ಯವಿತ್ತು ಪÉೂೀಷಿಸುವಿ 1 ದೇಶದೇಶ ರಾಜ್ಯಾಧಿಪರ್ಗಳ ಪರಸ್ಪರ ಸಂಶಯ ದುರ್ಮನವ ಆಗಾಗ ಶಾಂತ ಮಾಡುವುದು ಮೋಸಗಾರ ಕುಜನರು ಚೋರ ಕ್ರೂರರು ಮಾಳ್ಪ ಹೊಸ ಹೊಸ ಚಟುವಟಿಕೆ ಪರಿಹರಿಸಿ ಕಾಯೋ ಲೋಕವನು 2 ವೇದವ್ಯಾಸವಿರಚಿತ ಸಾತ್ವಿಕ ಪುರಾಣಗಳ ಯಥಾರ್ಥ ಪೇಳಿದೆ ದುಷ್ಟಾರ್ಥ ಪೇಳಿ ಜನರ ಮೋಹಿಸಿ ಸಾಧು ಸ್ತ್ರೀಪುರುಷರ ಪ್ರೌಢಕನ್ಯೆ ಬಾಲರ ವಂಚಿಪ ಧೂರ್ತರನು ಅಡಗಿಸಿ ಸತ್ಯಧರ್ಮ ಸಂತಾನ ಬೆಳೆಸೋ 3 ರಾಜ ಸಚಿವನು ಬೃಹಸ್ಪತಿಯಂತರ್ಗತನಾದ ರಾಜರಾಜೇಶ್ವರನೆ ನೀ ಅಂದು ಮಾನವಿಗೆ ಮದುವೆ ಉಜ್ವಲ ತಪಸ್ವಿಗೆ ಪುತ್ರರ ಒದಗಿಸಿದಿ ಇಂದು ನಿಜ ಭಕ್ತಸುತ ಕಾಮ ಪರಕಾಮ ಜನರಿಗೆ ಒಲಿಯೋ 4 ಹಿಂದಿನ ಇಂದಿನ ಸ್ವಕರ್ಮ ಪರಕರ್ಮ ಲಬ್ಧ ಮಾಂದ್ಯ ನರತ್ವಕೆ ಚರ್ಮ ಸೂತಕ ಗರ್ಭಿ ವ್ಯಾಧಿಪೀಡಿತ ಸಜ್ಜನರಿಗೆ ಸುಖವೀಯೋ ವೇಧಪ ಪ್ರಸನ್ನ ಶ್ರೀನಿವಾಸ ರುಧಿರೋಧ್ಗಾರಿ ಸ್ವಾಮಿ 5
--------------
ಪ್ರಸನ್ನ ಶ್ರೀನಿವಾಸದಾಸರು
ಸಂಕರುಷಣ ಮೂರ್ತಿಯೇ ಪ ನಿಷ್ಕಳಂಕ ಬಿರುದಾಂಕ | ಶಶಾಂಕ ಶೇಖರ ಶ್ರೀ ಅ.ಪ ನಿರವದ್ಯ ಶೃತಿವಂದ್ಯ 1 ಪಂಚಾತ್ಮನಾಗಿ ಪ್ರಪಂಚ ವ್ಯಾಪಿಸಿ ನಿ- ರ್ವಂಚನೆಯಿಂದ ನೀ ವಂಚಿಪೆ ವಂಚಕರ 2 ಶಿವರಾತ್ರಿದಿನದಿ ನಿನ್ನವರು ತವಪೂಜೆಯಿಂ ಭವ ನೀಗುವರು ಓ ಗುರುರಾಮ ವಿಠಲ ಸಖ 3
--------------
ಗುರುರಾಮವಿಠಲ
ಎಂದಿಗೆ ಬಿಡಿಸುವೆದಂದುಗಗೋವಿಂದ ದಣಿಸುತಿದೆದಂದುಗಪ.ಸುಳ್ಳನಾಡಿಸುತಿದೆದಂದುಗನೇಮಗಳ್ಳನ ಮಾಡಿತುದಂದುಗಎಲ್ಲೆಂಜಲುಣಿಸಿತುದಂದುಗಕೈವಲ್ಯವ ಮರೆಸಿತುದಂದುಗ1ಹರಿಸೇವೆ ಬಿಡಿಸಿತುದಂದುಗಗುರುಹಿರಿಯರನ್ವಂಚಿಪದಂದುಗಸರಕುಮಾಡಿತು ಎನ್ನದಂದುಗಯಮಪುರದಾರಿವಿಡಿಸ್ಯದೆದಂದುಗ2ನೀಚಗಂಚಿಸುತಿದೆದಂದುಗಕ್ಷುದ್ರಯಾಚನೆವಿಡಿಸ್ಯ್ಕದೆದಂದುಗಆಚಾರ ಚರಿಸಿತುದಂದುಗದುಷ್ಟ್ಯೋಚನೆ ತ್ಯಜಿಸದುದಂದುಗ3ಕಾಂಚನದಾಸೇಲಿದಂದುಗಕೆಟ್ಟಹಂಚಿಗ್ಹಲ್ದೆರೆಸಿತುದಂದುಗಪಂಚಗಂಗೆಯ ಬಿಟ್ಟುದಂದುಗಜೊಂಡುಬೆಂಬಿಲಿ ಮೀಯಿಸಿತುದಂದುಗ4ನಿನ್ನೊಲುಮ್ಯೊದರಿದಂದುಗಕಾಡಿಎನ್ನಾಳೋದುಂಟೇನೊದಂದುಗಪ್ರಸನ್ವೆಂಕಟೇಶ ನಾಮಜಿಹ್ವೆಪೂರ್ಣಗಲ್ಲಾದ್ಯಂತದಂದುಗ5
--------------
ಪ್ರಸನ್ನವೆಂಕಟದಾಸರು
ಮಹಾದೇವ ಶಿತಿಕಂಠ ದಾಸ ಕಲ್ಪಮಹೀಜ ಬಿನ್ನವಿಪೆ ನಿರ್ದೋಷ ||ಆಹಾ ||ಕುಹಕಾರಿ ಹರಿಪಾದ ಮಹಿಮೆ ಕೊಂಡಾಡಿಸೊ |ಗಹನವಿಕ್ರಮಭೀಮ ಮಹೀಧರಪ ಜಾಧವ ಪಸ್ಫಟಿಕಾಭ ಶ್ರೀಕಂಠ ದಕ್ಷ ಧ್ವಂಸಿ |ನಿಟಿಲಲೋಚನ ಸುರಪಕ್ಷ ಹೇ || ಧೂ |ರ್ಜಟ ಹೀನ ವಿಷಯಾಖ್ಯ ಕಕ್ಷವಹ್ನಿ|ಕುಟಿಲತ್ವ ಬಿಡಿಸತಿ ದಕ್ಷ ||ಆಹಾ||ಕಠಿಣ ಸಂಸಾರದಿತ್ರುಟಿಮಾತ್ರ ಸುಖ ಕಾಣೆ |ವಟುರೂಪಿ ಭಕುತರ ಕಟಕದೊಳಿರಿಸೆನ್ನ1ಇಳಿರಥ ನಗಶರಸೋಮಮೌಳಿ|ನಳನಂದಿನಿಪ ಸುತ ರಾಮ ನಾಮಾ |ನಲಿದು ಪಾಡುವ ಗುಣಧಾಮ ರೌಪ್ಯಾ |ಬಲಾವಾಸಾನಂಗ ವಿರಾಮಾ ||ಆಹಾ||ಹಲವರಾಶ್ರಯಿಸಿ ನಾ ಬಲು ನೊಂದೆನೋರ್ವರು ಕಾಯ್ವ |ಸುಳಿವು ಕಾಣೆನೋ ಹೇ ಗರಳಕಂಠ ಪೊರೆಯೆನ್ನ 2ಪಂಚ ಸುಸ್ಮಿತ ಯುಕ್ತ ವದನಾ ನಿಷ್ಪ್ರ |ಪಂಚ ಗಜಾಸುರ ಹನನಾ ಏಕಪಂಚಾಸ್ಯ ಜನಕ ಕೇಶವನಾ ಪ್ರೀತಿ |ಮಂಚ ನೀನಾಹೆ ಖಳರನಾ ||ಆಹಾ||ಹಿಂಚಾಗಿ ಅಳಿವಂಥ ಹಂಚಿಕೆಯಲಿವರ|ಮುಂಚೆ ಕರೆದು ಕೊಟ್ಟು ವಂಚಿಪೆ ಅತ್ರಿಜ 3ಅಹಂಕಾರಾಧೀಶ ನಭೇಶತಾತ|ಮಹಾ ಮುನಿ ವಂದ್ಯಾಮರಾಸ್ಯ ಚಂದ್ರ |ದಿನಪತೇಕ್ಷಣನೆ ಅಶೇಷಾಮೋದ|ಬಹುಮೋದಸಕ್ತಾಯನ್ನಾಶಾ ||ಆಹಾ||ದಹಿಸೊಜಠರಪೋಷ ವಹಿಸಿ ಬೆಂಡಾದೆನೊ |ಅಹಿಮಲಾಂಧಕಾಸುರ ಗುಹಹ ಅಶ್ವತ್ಥಾಮ 4ಶಕ್ರಾವರಜ ಶ್ರೀ ಪ್ರಾಣೇಶ ವಿಠ್ಠಲ |ನಕ್ರಾಹನಂಘ್ರಿಯನಿಶದಲ್ಲಿ |ವಕ್ರವಿಲ್ಲದೆ ಸೇವಿಪೀಶ ಹೇ ತ್ರಿ- |ವಿಕ್ರಮಕರವ್ಯೋಮಕೇಶ||ಆಹಾ||ಶುಕ್ರಪೂಜಿತಪಾದಅಕ್ರೂರಯನ್ನೊಳಿ |ದ್ದ ಕ್ರಮವೆಣಿಸದೆ ಸುಕೃತವೊದಗಿಸೊ5
--------------
ಪ್ರಾಣೇಶದಾಸರು