ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯತಿಕಕ್ಷೆ - ದಾಸಕಕ್ಷೆ ಮುನಿಜನರ ನೆನೆಸಿ ಜನರೂ | ಮುನಿ ಜನರ ನೆನೆಸಿ ಬಿಡ | ದನುದಿನದಲಿ ನಿಮ್ಮ | ಮನ ಮಲಿನ ಪೋಗಿ ಸ | ವನಧಿ ಹರಿವೊಲಿದು | ಘನವಾಗಿ ಪಾಲಿಸುವನು ಪ ವಿಶ್ವ | ಮಿತ್ರ ಮೈತ್ರಾವಾರುಣಿ ಭೃಗು | ವೀತಿ ಹೋತ್ರ ಕಪಿ ಗಾಗ್ರ್ಯ ಗಾಲವ | ಗರ್ಗಗಾರ್ಚಮಾ || ಪತ್ರ ಫಾಲಾಶವಟು | ಶಾಂಡಿಲ್ಯ ಶಕಟ ಸು | ಕೃತಿ ಗೋತ್ರ ಗೌರೀವೀತಹವ್ಯ | ಕಪಿ ಶಂಖಕಟ ಮೈತ್ರಾವರುಣವಾಧುಳಾ || 1 ಉಪಮನ್ಯು ಶಂಕು ಉದ್ದಾಲಕ ಕೌಂಡಿಣ್ಯ | ಅಪುನವಾನ ಅತಿಥಿ ಪಾಂತುಚಾವನ ಚವನ | ಕ | ಶ್ಯಪ ಪೂತಿಮಾಷರೈಭ || ವಿಪುಳ ಜಮದಗ್ನಿ ವಾಲ್ಮಿಕಿ ರೇಭ ಜಾಬಾಲಿ | ಸ್ವಪನ ಸಾತ್ಯಕಿಯು ಸಾಮ್ಯಾಳ ದೇವರತತಿ | ಕಪಿಕುತ್ಸ್ನ ಪೌರಕುತ್ಸಾ 2 ಮುನಿಮಾದ್ರಮ ಶಣಶರ್ಮ ಬಾದರಾಯಣ | ಕನಕ ಕಾತ್ಯಾಯನ ಮಾರ್ಕಾಂಡ್ಯ ಮಾಂಡವ್ಯ | ತೃಣಬಿಂದು ಭಾಷ್ಕಾಳಾಖ್ಯ || ಪನಸ ಅಘಮರ್ಷಣ ಪ್ರಮಧ ಪ್ರಾಗಾಧ ಜೀ | ವನಯಾಜ್ಞವಲ್ಕ್ಯ ಜಿವಂತಿ ಮಾತಂಗ ಶೋ | ದನ ಧೌಮ್ಯ ಆರ್ಯ ರುಚಿರಾ || 3 ವಾಸಿಷ್ಟ ಶ್ರೀವತ್ಸ ಲೋಹಿತಾಷ್ಯಕಶರ್ವ | ಕರ್ದಮ ಮರೀಚಿ ಪಾ | ಬೇಷಿ ಜಾವಾಯುಲಿಕೆಯೂ || ಭೂಷಣೌ ಬಾರ್ಹಸ್ಪತ್ಯದಾಲ್ಭ್ಯ ಸುಯಜ್ಞಾಜ್ಞಿ | ವೇಶ್ಯ ಮುಖ ಸಪರಿಧಿಸಾಲಂಕಾಯನಾ ಧರ್ಮ | ನಾಶಯ ದೇವಶ್ರವತಾ ||4 ಶ್ರವ ಪೂರ್ಣವಾಹಕ ಕೃತು ಅಂಗಿರಸಾಂಗಿರಾ || ಲವ ಶಮನ ಋಷಿಶೃಂಗ || ಕವಿ ವೇದಶಾಲ ವಿಶಾಲ ಕೌಶಿಕ ಶುಚಿ | ಭುವನ ಉರ್ಜಯನ ಮಾಹಋಷಿಭಹುದ ಸಂ | ಭವಸ್ತಂಭ ಕಿರಾಠಿ ಕಪಿಸೇನ ಶಾಂಡಿಲ್ಯ | ಪವನದಮ ಬೀಜವಾಪಿ || 5 ಉಲಿಖಲು ಧನಂಜಯ ವಾಲಿಖ್ಯಮಾಯ | ಕಲಿಕಿ ಸೃಂಗಿ ಮಧು ಚಂದವಿತನು ಬಹು | ಶರಭ || ಪುಲಸ್ತ್ಯ ದಧೀಚಿ ಕಥಾಸೂನು ಸೇವಾಸ್ಯ ಮಾ | ದ್ಗಲ ವಿಷ್ಣು ತ್ರಿಧಕುಕ್ಷಿ ಶುಕ್ಷ ಮನತಂತು | ಬಲವೀರ್ಯ ಬಬ್ರಾಮೇನೂ6 ಅಪವರ್ಗ ಹಿರಣ್ಯನಾಭ ಅ | ದ್ಭುತ ಅಜಾಮೀಡ ಪರ್ವತ ಶ್ವೇತಕೇತಮಾಹ || ಸತ್ಯವ್ರತ ಶ್ರ್ರುತಿದೃತಿ ಆಯತಾ || ಶ್ರುತಿಕೀರ್ತಿ ಸುಪ್ರಭಾವತ್ಸ ಮೃತಾಂಡ ಸೂ | ಕ್ರೋಢ ಕೋಲ ಗೋಬಲ ಮಾತೃಕಾನಂದ || ಕಥನ ಸರ್ವಸ್ಥಂಬವಾ 7 ನೈಧ್ರುವಾ ದೀರ್ಘತಮ ಜಮದಗ್ನಿ ಕಾರುಣಿ | ಸದ್ಮುನಿಕಾಂಡಮಣಿ ಮಾಂಡವ್ಯವಾಚÀಸಕ | ಶಿದ್ಧಿಸನಕಸ ನಂದನಾ || ವಿದ್ಯಾಂಗ ಹವ್ಯರೋಹಿತಶರ್ಮ ಸೂಕರ್ಮ | ಮೇಧ ಮೇಧ ಪ್ರ | ಶುಕ ಬುದ್ಧಿ ಸಮೇಧ ಪೇರ್ಮಿ 8 ಪಂಚ ಪಂಚಾಸಪ್ತ ಅಪ್ಟ ಕಾಲದಲಿ ಪ್ರಾ | ಪಂಚದೊಳು ತೊಡಕದಲೆ ಬುದ್ಧಿ ಚಿತ್ತದೊಳಿಟ್ಟು | ಗಿದ್ದವರ ಕೊಂಚ ಮುನಿಗಳ ಪೇಳಿದೆ || ವಂಚನೆಯಿಲ್ಲದೆ ಸ್ಮರಿಸಿ ಮಧ್ವಮತಪೊಂದಿ | ಸಂಚಿತಾಗಮ ಕಳೆವ ಸರ್ವಸುಖವೀವ ವಿ | ಮಿಂಚಿನಂದದಿ ಪೊಳೆವನು 9
--------------
ವಿಜಯದಾಸ
ಹೇಳುವುದು ಬೇಡ | ಜನರ ನುಡಿ ಕೇಳದಿರಲೋ ಮೂಢ ಪ ಶ್ರೀಲೋಲನ ಕಿಂಕರರ ಬಾಗಿಲಲಿ ಬೀಳುನಾಯಿಯಂದದಲಿ ಕೆಲಕಾಲ ಅ.ಪ ದ್ರವ್ಯದಾಸೆಗಾಗಿ | ನಾರಕೀ ಭವಿತವ್ಯರಲ್ಲಿಗೆ ಹೋಗಿ ಕಾವ್ಯನಾಟಕ ಸ್ತುತಿ ಪದ್ಯಗಳನು 1 ನಾನು ಯೋಗ್ಯನೆನ್ನುತ | ತೋರಿಸಿ ಮಾನವಾಗಿದಿರದಲ್ಲಿ ನಿನಗೆ ದುರಭಿ- ಮಾನಿಯಾಗಿ ನೀ ಕೆಡುವೆಯೊ ನಿಜ ನಿಜ 2 ಕೊಂಚ ಬೇಡಬೇಕು ವಂಚನೆಯಿಲ್ಲದೆ ಭಜಿಸು ರಹಸ್ಯವ 3
--------------
ಗುರುರಾಮವಿಠಲ
ಕೊಂಬು ಕೊಳಲ ತುತ್ತೂರಿ ಊದುತಲಿಕ್ಕುಇಂಬುಕಸ್ತುರಿ ಪರಿಮಳ ಸೂಸುತ ||ಪೊಂಬಟ್ಟೆ ಚೆಲ್ಲಣ ಸೋಸಿದ ಮೊಸರಿನ |ಕುಂಭಒಡೆದು ಕೆಸರಾಗಿದೆಯಮ್ಮ2ಮಿಂಚಿನಂದದಿ ಹೊಳೆಯುತ ಬದಿಯಲಿದ್ದ |ಸಂಚಿತಾರ್ಥಗಳೆಲ್ಲ ಸೂರಾಡಿದ ||ವಂಚನೆಯಿಲ್ಲದೆ ಭಕ್ತರ ಸಲುಹಿದ |ಸಂಚುಕಾರ ಪುರಂದರವಿಠಲನಲ್ಲದೆ 3
--------------
ಪುರಂದರದಾಸರು
ಗುಮ್ಮನೆಲ್ಲಿಹ ತೋರಮ್ಮ-ನಮ್ಮಮ್ಮ-|ಸುಮ್ಮನಂಜಿಸಬೇಡಮ್ಮ ಪಪಂಚಾಶತ್ಕೋಟಿ ವಿಸ್ತೀರ್ಣದ ಭೂಮಿಯ |ವಂಚನೆಯಿಲ್ಲದೆ ತಿರುಗಿ ಬಂದೆನೆ ನಾನು ||ಹಂಚಿಸಿಕೊಟ್ಟೆನೆ ಅವರವರಿಗೆ ನಾ |ಅಂತು ನೋಡಿದರೂ ಕಾಣೆನೆ ಗುಮ್ಮನ 1ಈರೇಳು ಲೋಕವನುದರದೊಳಗೆ ಇಟ್ಟು |ತೋರಿದೆ ಬ್ರಹ್ಮಾಂಡ ಬಾಯೊಳಗೆ ||ಘೋರರೂಪದಿ ಬಂದ ಗಾಳಿಯ ಸುರನ ಕೊಂದೆ |ಅಲ್ಲಿ ನೋಡಿದರೂ ಕಾಣೆನೆ ಗುಮ್ಮನ 2ಕಾಳಿಯ ಮಡು ಧುಮುಕಿ ಕಾಳಿಂಗನ ಹೆಡೆ ತುಳಿದು |ಮೇಲೆ ನಾಟ್ಯಂಗಳ ನಾನಾಡುತಲಿದ್ದೆ ||ಓಲೆಯ ಭಾಗ್ಯವನಿತ್ತೆ ನಾಗಪತ್ನಿಯರಿಗೆ |ಅಲ್ಲಿ ನೋಡಿದರೂ ಕಾಣೆನೆ ಗುಮ್ಮನ 3ಅಕ್ರೂರನಿಗೆ ವಿಶ್ವರೂಪವ ತೋರಿದೆ |ಘಕ್ಕನೆ ರಥವೇರಿ ಮಥುರೆಗೆ ಪೋದೆ ||ಸೊಕ್ಕಿದ ರಜಕನ ಕೊಂದು ಮಡಿಯನುಟ್ಟೆ |ಹೊಕ್ಕು ನೋಡಿದರೂ ಕಾಣೆನೆ ಗುಮ್ಮನ 4ಬಿಲ್ಲು ಹಬ್ಬಕೆ ಹೋಗಿ ಮಲ್ಲರ ಮಡುಹಿದೆ |ಅಲ್ಲಿ ಮಾವನ ಕೊಂದು ಮುತ್ತಯ್ಯಗೊಲಿದೆ ||ಚೆಲ್ವಗೋಪಾಲ ಶ್ರೀ ಪುರಂದರವಿಠಲನ |ಸೊಲ್ಲು-ಸೊಲ್ಲಿಗೆ ನೀ ಬೆದರಿಸಬೇಡಮ್ಮ 5
--------------
ಪುರಂದರದಾಸರು
ಬಣ್ಣಿಸಲಮ್ಮೆ ನಾನು ಪ.ಬಣ್ಣಿಸಲಮ್ಮೆ ನಾ ಬಹಳ ಮಹಿಮ್ಮನಚಿನ್ಮಯ ನಗಾಧಿಪ ಚೆಲುವ ತಿಮ್ಮಪ್ಪನ ಅ.ಪ.ಇಳೆಯ ಮಾನವರೊಳು ಈಕ್ಷಿಸಿ ಕೃಪಾಳುಒಲಿದು ಕರುಣದಿಂದ ವೈಕುಂಠಪುರದಿಂದಇಳಿದು ಮಂಗಳದೇವಿಯನು ಕೂಡಿಕೊಂಡು ವಿಮಲ ಸ್ವಾಮಿಪುಷ್ಕರ ಮಹಾತೀರ್ಥದ ತೀರದಲಿ ನಿಂತು ಬೇಕಾದ ಧನಧಾನ್ಯ ಸಂಪದಹಲವು ಕಾಮ್ಯವನೀವ ಹೊಗಳಿದವರಕಾವಸುಲಭರೊಡೆಯನ ಕಂಡು ಹಸಿದ ಕಂಗಳಹಬ್ಬ ದಣಿಯಲುಂಡು ಬಹುತೋಷತುಳುಕುವ ಸುಜನವಿಂಡು ವಾರಂವಾರ 1ಪೇಳಲೇನಯ್ಯನ ಪರಿಸೆಯ ಸೊಬಗು ನಾಆಲಯದಿಂ ಗಡಾ ಜನಿಜನ ಸಂಗಡಚೋಳ ಚಪ್ಪರಮೊತ್ತ ಛತ್ರ ಚಾಮರ ಪತಾಕಾಳಿ ಸೀಗುರಿ ಢಕ್ಕೆ ಕೊಂಬು ಕಹಳೆ ಡೆಂಕೆಮೇಳೈಸಿ ಮಹಿಮರು ಮಹದಾನಂದದವರುಗೋಳಿಡುವರು ಹರಿಗೋವಿಂದ ಎನುವರುಕಾಲಾಟದಲ್ಲವರು ಕೀರ್ತಿಪ ಗೀತತಾಳ ದಂಡಿಗೆಯವರು ಬೆಳಗುವಸಾಲು ಪಂಜಿನವರು ವಾರಂವಾರ 2ವಾಂಛಿತಫಲಗಳು ಒದಗಲು ಹರಿಯೊಳುವಂಚನೆಯಿಲ್ಲದೆ ಒಂದೊಂದು ಬಗೆಯದೆಕಾಂಚನ ಮುಡುಪಿಲಿ ಕರಬದ್ಧಾಂಜಲಿಯಲಿಮಿಂಚುವ ಭಕ್ತಿಲಿ ಮಧುಕರ ವೃತ್ತಿಲಿಪಂಚಾಬ್ದಾದ್ಹಸುಳರು ಪ್ರಾಯದ ಅಬಲೇರುಹಿಂಚಾದ ವಯಸಾದ ಹಿರಿಯರು ಹರುಷದಿಸಂಚಿತಹರಕೆಯವರು ತೊಟ್ಟಿಲು ಮನೆಮಂಚವ ಹೊತ್ತವರು ದೇಶಗಳಿಂದಾಕಾಂಕ್ಷೆವಿಡಿದು ಬಂದವರು ವಾರಂವಾರ 3ಸ್ವಾಮಿ ವರಾಹಪಾದ ಸರಸಿಜಾಂಬುಸ್ವಾದತಾಮಹತ್ಯಂಕದ ಶಾತಕುಂಭಾಂಕದವೈಮಾನವಾಸನವಿಧಿಭವೇಂದ್ರೇಶನಕಾಮನ ಪಿತನ ಕಲಿಭಯಛಿತ್ತನಸೋಮಸೂರ್ಯಾಕ್ಷನಸಾಮಜಪಕ್ಷನಜೀಮೂತಗಾತ್ರನ ಜಿತಶತ್ರು ಸೂತ್ರನನೇಮದಿ ಕಂಡೆರಗಿ ಮೈಯೊಳುರೋಮ ಪುಳಕಿತರಾಗಿ ಭಕ್ತರಸ್ತೋಮವು ಮುಕ್ತರಾಗಿ ವಾರಂವಾರ 4ಗಿರಿಯೊಳಮಲಂತರ್ಗಂಗೆ ಪಾಪಾಂತೆವರಪಾಂಡುತೀರ್ಥ ಬಿಲ್ವಾಂಬು ಕಚ್ಛಪತೀರ್ಥಸಿರಿವರಾಹ ಮಚ್ಛಸಲಿಲಪಾವನಲಕ್ಷ್ಮಿಸರ ನಾರದೀಯ ಸರಸ್ವತೀಯ ತೋಯಮೆರೆವ ತುಂಬುರ ಜಲ ಮೊದಲಾದ ಸ್ಥಳಗಳಸರವ ಸನ್ನಿಧಪೂರ್ಣ ಸ್ವಾಮಿ ಪುಷ್ಕರಿಣಿಯನೆರಕೊಂಡು ಪೂತಾಂಗರು ಹರಿಪಾದಸರಸಿಜರತ ಭೃಂಗರು ಜ್ಞಾನೋನ್ಮತ್ತಭರಿತಾಂಗ ಮತ್ತಾಂಗರು ವಾರಂವಾರ 5ನಳಿನಾಕ್ಷ ಪದವಾರಿನಿತ್ಯಸೇವಿಸಿಸಿರಿತುಲಸಿ ತುದಿಯ ಪೊನ್ನತಳಗಿಯದಧ್ಯನ್ನಬಲುರುಚಿ ಅನ್ನವಾಲು ಬಕುಳನ್ನ ಪೊಂಗಲುಸಲೆ ಮೃದು ಗಾರಿಗೆ ಸುಕಿನುಂಡೆ ಗುಳ್ಳರಿಗೆಪುಳಿ ತಿಕ್ತ ಮಧುಮಿಶ್ರ ಪಲಸು ಪಾಲಿನ ದೋಸೆಪಲವು ಪರಿಯ ಘೃತವು ಪಕ್ವ ಪಂಚಾಮೃತಪಾಲ ತೈಂತೊಳೆ ಮನೋಹರ ಪ್ರಸಾದುಂಡುಕಳೆಯೇರುವರು ಮನೋಹರ ಅಲ್ಲಿಗಲ್ಲಿನಲಿವ ದಾಸರ ಮೋಹರ ವಾರಂವಾರ 6ಪೂವಿನಂಗಿಯ ಚೆನ್ನ ಪುಳಕಾಪುಮಜ್ಜನನವ್ಯೋತ್ಸಾಹದಲ್ಲಿಹ ನರಮುನಿಸುರಸಹಸೇವ್ಯಾನಂದನಿಲಯ ಸಾಮಗಾಯನ ಪ್ರಿಯದಿವ್ಯ ರತ್ನಾಭರಣ ದೀಧಿತಿ ಸಂಕೀರ್ಣಹವ್ಯಾಸದನುದಿನ ಹನುಮಗರುಡಯಾನಸವ್ಯಾಪಸವ್ಯ ಭವಭೂಷಿತ ಸ್ಥಿತಸೂರ್ಯಾರೂಢನ ಮೂರ್ತಿಯ ಭೂವೈಕುಂಠಸುವ್ಯಕ್ತವಹ ವಾರ್ತಿಯ ಪ್ರಸನ್ವೆಂಕಟವ್ಯಾಕೃತನ ಕೀರ್ತಿಯ ವಾರಂವಾರ 7
--------------
ಪ್ರಸನ್ನವೆಂಕಟದಾಸರು