ನಿನ್ನ ತಂತ್ರಗಳೆಲ್ಲ ಬಯಲಾಯ್ತೊ ರಂಗ
ನಿನ್ನ ಕಥೆಯ ಕೇಳಿ ಭಯವಾಯ್ತೋ ಪ
ನಿನ್ನ ವಂಚನೆಗೇ ಜಯವಾಯ್ತೋ ಅ.ಪ
ಶರನಿಧಿಯ ಮಥನದಿ ಗರಳವು ಜನಿಸಲು
ಪರಶಿವನುಂಬುವ ಪರಿಗೈದೆಯೇನೋ
ತರುಣಿ ಸಂಜನಿಸಲು ಶರಗಳ ನೀಡಿ ದೈ
ಪರಿ ಸಟೆಯೇನೋ 1
ಧರಣಿಯನಿತ್ತನ ಶಿರವನು ತುಳಿದೆ
ಪರಿಗಣಿಸದೆ ತಾಯ ಕೊರಳನು ತರಿದೆ
ಪರಸತಿಯರ ಕೂಡ ನೆರೆ ನಲಿದಾಡಿದೆ
ಕರದಿ ಸನ್ನೆಯ ಮಾಡಿ ಕುರುಕುಲವಿರಿದೇ 2
ಮದನ ಸುಂದರಿಯಾಗಿ ಸುಧೆಯ ಕುಂಭವ ಕೊಂಡೆ
ಅದಿತಿಯ ಸುತರಿಗೆ ಅದ ನೀನುಣಿಸಿದೆ
ಮಧುರುಚಿಯರಿತನ ಚಕ್ರದಿ ತರಿದೆ
[ಎದುರಿಸದೆವಾಲಿಯ ಮರೆಯಲಿರಿದೆ] 3
ಪೊಡವಿಯೊಡೆಯನ ಕಡೆಗಣಿಸೀ ನಿನ್ನ
ಅಡಿಯಿಡೆ ಯಿದ್ದವನೊಡವೆರೆದೆ
ನುಡಿದು ಕರ್ಣನ ಕಂಗೆಡಿಸಿದೆ ಭೀಷ್ಮನ
ಕೆಡಹಿದೆ ಮಾಂಗಿರಿಯೊಡೆಯ ಗೋಪಾಲಾ 4