ನಾನು ಎಂಬೊದೆ ದೊಡ್ಡದು
ನೀನೆಲ್ಲಿಹೆಯೊ ನಾನೆಲ್ಲಿ ಕಾಣಲಿ ಪ.
ನಾನೆಂಬೊ ವ್ಯಾಪಾರ ನೀನೆ ಮಾಡಿಹೆ
ಗಾನಲೋಲ ಸರ್ವರಂಗಲಿ ನಾನೇ ಇಹೆನೆಂದು ಅ.ಪ.
ಸರ್ವರೊಳಗೆ ನಾನೆಂಬೊದೇ ಇರಲಾಗಿ
ಸಾರ್ವಜನಿಕ ನೀನೆಲ್ಲಿಹೆಯೊ
ಸರ್ವಧಿಕಾರಿ ನೀನೇ ಎಂಬ ವಿಬುಧರ
ಸರ್ವಕಾಲದಿ ಸರ್ವ ಸುರರ ಸಹಿತಿಹೆ ನಾನು 1
ಮಿಂಚಿದ ಪಾಪವ ಮಾಡುವ ಮನುಜರ
ವಂಚಕತನದಲಿ ದೇಹದೊಳಿಹೆ ನೀನು
ಸಂಚಿತಾರ್ಥದ ಪುಣ್ಯವ ಗಳಿಸಿದ ಭಕ್ತರ
ಮಿಂಚಿನ ಹುಳದಂತೆ ಕಂಚಿ ವರದ ಇಹೆ 2
ರಘುಪತೆ ರಾಘವನೆನುತ ಶ್ರೀ ಶ್ರೀನಿವಾಸನ
ಬಗೆ ಬಗೆ ಸ್ತುತಿಸದೆ ಅಧಮರಿಗಿಲ್ಲ
ಅಘಹರ ಗೋಪಿಗೆ ಮಿಗೆಯಾಟ ತೋರಿಹೆ
ನಗಧರ ಅಳಗಿರಿ ಸೊಗಸಿನ ಚೆನ್ನಿಗ ನಾನು 3