ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಾರನಲ್ಲೆ ಸಖಿ ಪರಿಪೂರ್ಣ ಕಾಮನು ಪ ತೋರನಲ್ಲೆ ಅವನ ಚರಣ ಕಮಲವನ್ನು ಅ.ಪ ಪತಿಸುತರ ಬಿಟ್ಟು ಕೃಷ್ಣನೆ ಗತಿಯೆಂದು ನಂಬಿದ ಸತಿಯರ ದಣಿಸುವುದು ಲಕ್ಷ್ಮೀಪತಿಗೆ ಸರಿಯೆ ನಲ್ಲೆ 1 ಸರಸಿಜಾಕ್ಷಿಯರ ಕೂಡ ಅವನೂ ಸರಸವಾಡುವ ತುರುಗಳಲ್ಲಿ ಗುಡುಗ್ಯಾಡಿ ಕರುಗಳನು ಬಿಚ್ಚುವ2 ಒರಳನೆಳೆದು ಮರವನ್ನು ಮುರಿದು ನಿಲ್ಲುವ ಅರಿಯದಬಲೆಯರ ಸೀರೆ ಮರಕೆ ಕಟ್ಟಿ ಪೋಗುವ 3 ವÀ್ರಜದ ನಾರೇರ ಬಿಟ್ಟು ಕುಬುಜೆ ಗಂಧವ ಬೇಡುವ ಭುಜಬಲವನ್ನು ತೋರಿ ನಿಜ ವೈರಿಯರ ಕೊಲ್ಲುವ 4 ಏಸು ಕಾಲದಿಂದ ಅವನ ಬಯಸಿ ನಾ ಬೇಡುವೆ ವಾಸುದೇವ ವಿಜಯ ರಾಮಚಂದ್ರವಿಠಲನ 5
--------------
ವಿಜಯ ರಾಮಚಂದ್ರವಿಠಲ