ಬೊಮ್ಮ ಮೃಡ ಮುಖ್ಯ ಸುರರಿಗೆಡೆಯನೆನಿಪ ಮುದ್ದು ಉಡುಪಿಯ ಕೃಷ್ಣನ ಪ.
ಪೊಡವಿಯೊಳಗೆ ತನ್ನ ಅಡಿಗಳ ಧೇನಿಪ-ರಡಿಗಡಿಗವರ ವಾಂಛಿತ ವÀಸ್ತುವಕಡೆದು ಕೊಡುವೆನೆಂದು ಕಡೆಗೋಲ ನೇಣನೆಪಿಡಿದಿಹ ಸಿರಿಯರಾ ದೃಢಕೆ ಮೆಚ್ಚಿದನ 1
ಹರಿಸರ್ವೋತ್ತಮನೆಂಬೊ ಪರಮಸಿದ್ಧಾಂತಕ್ಕೆ ಮ-ಚ್ಚರಿಸುವ ಕುಮತದ ಕುಜನರಭರದಿ ಬಂಧಿಸಿ ಬನ್ನಂಬಡಿದು ಶಿಕ್ಷಿಪೆನೆಂದುವರಪಾಶದಂಡಧಾರಿಯಾಗಿ ತೋರಿಪ್ಪನ 2
ಭಕ್ತವತ್ಸಲನೆಂಬೊ ಸುಲಭೋಕ್ತಿಯನು ಬಂದನಿಕರಕ್ಕೆ ಪೇಳಲು ದ್ವಾರಕಾಪುರಿಯಸುಖತೀರ್ಥಮುನಿಗೆ ಸುಖಕರನಾಗಿ ಬಂದಅಕುಟಿಲ ಕೃಷ್ಣ ಹಯವದನರಾಯನ 3