ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದೇವಿ ನಿನ್ನಯ ಮುಡಿಮ್ಯಾಲಿದ್ದ ಮಲ್ಲಿಗೆ- ಹೂವ ಕೊಡೆ ನೀ ವರವ ಕೊಡೆ ಪ ಕಟ್ಟ್ಟುವೊ ತೊಟ್ಟ್ಟಿಲ್ಹುಟ್ಟುವೊ ಗಂಡು ಮಕ್ಕಳು ಮುತ್ತೈದೆತನವ ಮುದದಿ ಬೇಡುವೆ ಶ್ರೀ ಮಾಲಕ್ಷ್ಮಿಯೆ ನಮಗೆ ದಯಮಾಡೆ 1 ಅಂದಣ ರಥ ಬಂದ್ಹೋಗುವೋ ಹೆಣ್ಣು ಮಕ್ಕಳು ಬಂಧುಗಳಿಗೆಲ್ಲ ಬಲುಕ್ಷೇಮ ಬಂಧುಗಳಿಗೆಲ್ಲ ಬಲುಕ್ಷೇಮ ಇರುವಂತೆ ಇಂದಿರಾದೇವಿ ದಯಮಾಡೆ 2 ದಂಪತಿ ನಲಿಸುತ ಸಂಪತ್ತು ಸೌಭಾಗ್ಯ ಇಂಥ ಮಂದಿರಕೆ ಬಹುಮಾನ ಇಂಥ ಮಂದಿರಕೆ ಬಹುಮಾನಯಿರುವಂತೆ ಸಂತೋಷದಿ ವರವ ದಯಮಾಡೆ 3 ಅನ್ನ ಗೋವ್ಗಳು ದಿವ್ಯ ಕನ್ಯಾ ಭೂದಾನಹಿ- ರಣ್ಯದಾನಗಳ ಹಿತದಿಂದ ಹಿ- ರಣ್ಯದಾನಗಳ ಹಿತದಿಂದ ಮಾಡುವಂತೆ ಸಂ- ಪನ್ನ ನೀ ವರವ ದಯಮಾಡೆ 4 ಇಂದಿಗೆ ಮನೋಭೀಷ್ಟ ಎಂದೆಂದಿಗೆ ನಿನಪಾದ ಹೊಂದಿರಲೆಂದೂ ಮರೆಯದೆ ಹೊಂದಿರಲೆಂದೂ ಮರೆಯದೆ ಭೀಮೇಶಕೃಷ್ಣನ- ರ್ಧಾಂಗಿ ನೀ ವÀರವ ದಯಮಾಡೆ 5
--------------
ಹರಪನಹಳ್ಳಿಭೀಮವ್ವ