ದೇವ ಏನು ಬೇಡುವುದಿಲ್ಲ ನಾನು ನಿನ್ನ
ಬೇಡುವೆ ಭವಭವದಿದನೆ ಕೊಡು ನೀನು ಪ
ಶಿರ ನಿನ್ನ ಚರಣದಿ ಎರಗಲಿ ಕರ್ಣ
ಹರಿಕಥೆಕೀರ್ತನೆ ಶ್ರವಣ ಮಾಡಲಿ
ಪರಮಾತ್ಮಮೂರ್ತೆನ್ನ ನೇತ್ರ ನೋಡಲಿ
ನಾಸಿಕ ಘ್ರಾಣಿಸಲಿ 1
ವÀದನ ನಿನ್ನನು ಸ್ತುತಿಸಲಿ ನಿನ್ನ
ಜಿಹ್ವೆ ಕೊಂಡಾಡಲಿ
ಹೃದಯವು ತವನಾಮ ತುಂಬಿಕೊಳ್ಳಲಿ
ಮಧುಸೂದನನ ಪ್ರಸನ್ನತೆ ಮನವು ಬಯಸಲಿ 2
ಕರ ನಿನ್ನ ಚರಣಮಂ ನಿರುತ ಪೂಜಿಸಲಿ ದ್ವಯ
ಚರಣಗಳುನುದಿನ ಯಾತ್ರೆಗೈಯಲಿ
ಪರಿಪರಿ ತವಲೀಲೆಯೊಳು ಬುದ್ಧಿ ನಿಲ್ಲಲಿ ಎನ್ನ
ಶರೀರ ಶ್ರೀರಾಮನ ಚರಣಕೊಪ್ಪಲಿ 3