ಶ್ರೀಲಕ್ಷ್ಮೀದೇವಿ
ಶರಧಿ ಸಂಭೂತೆ ಕಾಯೆ | ಶಿರಬಾಗಿ ಬೇಡುವೆ ತಾಯೆ |
ಸುರಮುನಿಜನ ಸೇವಿತೆ | ಕರಪಿಡಿ ಸುಖದಾತೆ ಪ
ಸೀತೆ ಜಾನಕಿಯೆ | ಶೀತಾಂಶು ಬಿಂಬಾನಯೆ |
ಮಾತೆ ನೀ ಬಂದು ಪಾಲಿಸೆ | ಎನ್ನವಗುಣ ಬಿಡಿಸೆ 1
ಮಂದಜಾಸನ ಜನನಿ | ಕುಂದಕುಮ್ಮಲರ ದನಿ
ವಂದಿಪೆ ವÀಜಮಂದಿರೆ | ಗೋವಿಂದನ ತೋರೆ2
ಶಾಮಸುಂದರನ ರಾಣಿ | ಭೂಮಿನಭ ಸಂಚರಿಸಿ |
ಭಾಮೆ ನಂಬಿದೆ ಅಂಭ್ರಣಿ | ಘನ ಮಂಜಳವಾಣಿ 3