ಶೋಭಾನೆ ಶೋಭಾನೆ ಶೋಭಾನೆ ಪ
ಶ್ರೀಗಣಾಧಿಪತಿಯ ಸಂಸೇವಿಸಿ ಶಂಕರನ ಭಜಿಸಿ
ವಾಗಾಭಿಮಾನಿಯೆನಿಪ ಸರಸ್ವತಿ ದೇವಿಗೆ ವÀಂದಿಸಿ
ಸಾಗರಸುತೆಯರಮಣ ನಿಂತು ಪೇಳಿಸಿದ ಪರಿಯೊ
ಳೀಗ ಗಂಡುಮಕ್ಕಳಾಶೀರ್ವಾದ ಪದವ ಪೇಳ್ವೆ
ಸುಜನರೆಲ್ಲಾಲಿಪುದು ಶೋಭಾನೆ 1
ಬಾಲನಾಗಿ ಪ್ರಹ್ಲಾದನವೋಲ್ ಬಹುಕ್ರೀಡೆಗಳಾಡುತಲಿ
ಮೇಲೆ ಪಂಚಾಬ್ದದಿ ಸದ್ ವಿದ್ಯಾಭ್ಯಾಸಗಳನೆ ಮಾಡಿ
ಶಾಸ್ತ್ರಾರ್ಥವೇತ್ತನಾಗುತಲಿ
ಶೀಲಾದಿ ಸದ್ಗುಣಗಳುಳ್ಳ ಬಾಲೆಯಳ ಮದುವೆಯಾಗಿ
ಕಾಲ ಕಾಲದಲ್ಲಿ ದೇವಋಷಿ ಪಿತೃಗಣಗಳ ಪೂಜೆ
ಅಗ್ಗಳ ನೀನಾಗು 2
ಕೆರೆಗಳ ಕಟ್ಟಿಸು ಸರೋವರಗಳನ್ನೆ ಮಾಡಿಸು ನಿ-
ನಿಖಿಳ ಯಜ್ಞಗಳಾಚರಿಸು
ಸತ್ಪಾತ್ರಕ್ಕೆಯಿತ್ತುದಾತನೆಂದೆನಿಸು
ನಿರತ ಬಂದವರಿಗನ್ನ ನೀಡುತ್ತ ಪ್ರಸನ್ನ ಮನದಿ
ಮರಗಳ ಹಾಕಿಸು ಸಪ್ತಸಂತಾನಗಳನ್ನೆಗಳಿಸು
ಮಾನ್ಯರೊಳು ವರ್ತಿಸಿಸುಖಿಸು 3
ಧರ್ಮಯುಕ್ತನಾಗುತ್ತ ಅಧರ್ಮಗಳ ಬಿಡುತ ಸ-
ತ್ಕರ್ಮಗಳಾಚರಿಸು ಫಲವ ಕಂಜಾಕ್ಷಗರ್ಪಿತಮಾಡು
ನಿತ್ಯ ಸಂತಸದಿ
ಮರ್ಮಜ್ಞರೆನಿಪ ಗುರುಹಿರಿಯರ ಸೇವಿಸುತ ಸ
ಮಾಡಿ ನಿತ್ಯಸುಖಿಯಾಗು 4
ಧೀರ್ಘಾಯುವಾಗಿರು ಬಂಧು ವರ್ಗವ ಪರಿಪೋಷಿಸು
ಭರ್ಗಾದಿ ದೇವತೆಗಳ ಭಕ್ತಿಯಿಂದಾ ಪೂಜಿಸಿತ್ರಿ-
ಅರ್ಥಿಯ ಪೊಂದು
ಸ್ವರ್ಗಸ್ಥಿತಿ ಲಯಕರ್ತ ಗುರುರಾಮವಿಠಲ
ನಘ್ರ್ಯ ಸಂಪದಗಳಿತ್ತು ಆದರಿಸಿ ತನ್ನ ಭಕ್ತಾ
ನಿತ್ಯ ಸತ್ಯಾಧನವ ಮಾಡಿಸುವಾ ಶೋಭಾನೆ 5