ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹೇ ಪಾಪಿ ಮನಸೇ ನೀ ನಾರಾಯಣೆನೆಲೋ ಅಪಾರ ಮಹಿಮನ ಮಹಿಮೆ ತಿಳಿದು ನೋಡೋ ಪ ‘ನಾ’ ಎಂಬೋ ಮಹದಾದಿಬೀಜದಕ್ಷರ ತುದಿ ನಾಲಿಗೆಯಿಂದ್ಹೊರಡುವನಿತರೊ ಳ್ಹಿಂದಿನ ನಾನಾಜನುಮದ ಪಾಪ ಪರ್ವತವೆಲ್ಲವು ನಿವೃತ್ತಿಯಾಗಿ ಮಹ ಪಾವನನೆನಿಪುದು 1 ‘ರಾ’ ಎಂದು ಮುಖದಿಂದ ಹೊರಟ ಕೂಡಲೆ ಸರ್ವ ರವರವನರಕದ ಯಾತನಳಿದು ಭವ ರೋಗವೆಲ್ಲನು ನೀಗಿ ಕಾಯಕರ್ಮವ ಕಡಿದು ರಾಜಿಪ ಪರಲೋಕ ಸದರವೆನಿಸುವುದೆಲೊ 2 ‘ಯ’ ಎಂದು ನುಡಿಯುತಲೆ ಜನುಮ ಸಫಲವಾಗಿ ಎಷ್ಟೋ ಕೋಟ್ಯಜ್ಞದ ಪುಣ್ಯ ಫಲವು ದೊರಕಿ ಯಮನ ಭೀತಿಯ ಗೆಲಿಸಿ ದಾಸರೊಲುಮೆ ಲಭಿಸಿ ಎಸೆವ ತ್ರಿಕಾಲಜ್ಞಾನ ಸ್ಥಿರವಾಹುದೆಲೊ 3 ‘ಣ’ ಎಂದು ಸಂಪೂರ್ಣ ಉಚ್ಚರಿಸಿದ ಮಾತ್ರವೆ ಕರತಲ ಮಾಗಿ ನಿತ್ಯ ನಿರ್ಗುಣನಂಘ್ರಿ ಕಂಗಳೊಳ್ಹೊಳೆಯುತ ನಿತ್ಯಾನಂದದ ಪದವಿ ಕೈವಶವಹದೆಲೊ 4 ನಿರಾಮಯ ಶ್ರೀರಾಮ ನಿಗಮಗೋಚರ ನಿರಂಜನ ನಿಜಗುಣನನುಪಮಮಹಿಮೆ ನಿಜಮತಿಯಿಂದರಿತು ನಿರ್ಮಲ ಮನಸಿನಿಂ ನೆನೆಯಲು ಘನಮುಕ್ತಿ ಸಾಮ್ರಾಜ್ಯ ಪಡೆಯುವಿ 5
--------------
ರಾಮದಾಸರು