ಅತಿಭಾಷಿಯೆನಿಸದೆ ಪ.
ದೂಷಿಸುವರಾಕ್ರೋಶದಿಂದಲಿ
ರೋಷಗೊಳ್ಳುವೆÀ ಗಾಸಿಯಾಗುವೆ
ಶೇಷಶಯನನ ದಾಸನೆÀನಿಪೊಡೆ 1
ಮೂಲಮಂತ್ರದ ಸಾರವಿದು
ಮೇಲನರಿತು ಸುಶೀಲನೆನ್ನಿಸು
ಕಾಲಪಾಶದಿ ಬೀಳದಂತಿರೆ 2
ಏಕೆ ಸೇರುವೆ ಜೋಕೆಯಿಂದಿರು
ಮೂಕನಂತಿರು ಲೋಕನಾಥ ನೊ
ಳೈಕ್ಯವಾಗಿ ವಿವೇಕಿಯೆನ್ನಿಸೆ 3
ಭೃತ್ಯರೆಲ್ಲರ ಸುತ್ತಿನೀಂ
ಮತ್ತನಾಗದೆ ನಿತ್ಯತೃಪ್ತನ
ಸತ್ಯಚರಿತನ ಸತ್ವವರಿವೊಡೆ 4
ಬಂದು ನುಡಿಯದಿರೆಂದೆ ಸುಮ್ಮನೆ
ತಂದೆ ಶೇಷಗಿರೀಶ ನಂಘ್ರಿಯೆ
ನಂಬಿ ನೀ ನಲವಿಂದ ಸುಖಿಪೊಡೆ 5