ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಾಸದಾಸ್ಯವ ದಯಮಾಡಿ ಸಲಹೋ ಕರುಣಾ ಸಮುದ್ರ ಹರಿಯೆ ಸುಳಿ ಘಾಸಿಮಾಡದ ಮುನ್ನ ಪ. ಅಂತಪಾರಗಳಿಲ್ಲವಿದಕಿನ್ನು ಪ್ರತಿ ಕ್ಷಣ ಚಿಂತನೆಯಿಂದಲಿ ಬಾಧೆಗೊಳಿಸುವುದು ಕಂತುಜನಕ ನೀನಿತ್ತದನುಂಡು ಸುಖಿಸದೆ ಭ್ರಾಂತಿ ಬಡಿಸುವದನೆಂತು ವರ್ಣಿಸಲಿನ್ನು 1 ತನ್ನಿಂದಧಿಕ ಕಷ್ಟ ಪಡುವ ಜನರ ಕಂಡು ಭಂಡಾಗಿರದಿ ಪರರ ಹೊನ್ನು ಹೆಣ್ಣುಗಳಲಿ ಕಣ್ಣಿಟ್ಟು ಹಗಲಿರು- ಳುಂಣಲೀಯದು ನಿದ್ರೆ ಕಣ್ಣಿಗೆ ಬಾರದಿನ್ನು 2 ಭವರೋಗ ವೈದ್ಯ ನೀನೆಂದು ಸಕಲ ಶ್ರುತಿ ನಿವಹವು ನಿನ್ನ ಕೊಂಡಾಡುವುದು ನವವಿಧ ಭಕುತಿ ಮಧ್ವ ತವಕದೊಳೆನಗಿತ್ತು ಭುವನ ಪಾವನ ಶೇಷಗಿರೀಶಾ ನೀ ದಯದೋರು 3
--------------
ತುಪಾಕಿ ವೆಂಕಟರಮಣಾಚಾರ್ಯ
ನಿನ್ನ ನಂಬಿದೆ ಶಾರದೇ | ಭಕ್ತಿಗೆ ಮತಿ- | ಯನ್ನು ಪಾಲಿಸ ಬಾರದೇ ಪ ನಿನ್ನ ನಂಬಿದೆ ನಾನು | ಎನ್ನ ಜಿಹ್ವೆಯೊಳ್ ನೀನು | ಖಿನ್ನತ್ವಗೊಳ್ಳದೆ | ಸನ್ನುತೆ ನೆಲಸವ್ವ ಅ.ಪ ಜಡಮತಿಯನು ತ್ಯಜಿಸಿ | ನೀ ದಯದಿಂದ | ದೃಢಮತಿಯನು ಪಾಲಿಸಿ || ಕಡಲ ಶಯನ ಸೊಸೆ | ಪೊಡವಿಗಧಿಕವಾದ | ಮೃಡನ ಸ್ಮರಿಪ ಜ್ಞಾನ | ತಡೆಯದೆ ಕರುಣಿಸು 1 ತ್ವತ್ಸಂಗವನು ಪಾಲಿಸಿ | ನೀ ದಯದಿಂದ | ದುಸ್ಸಂಗವನು ಛೇದಿಸಿ || ಸತ್ಸಂಗವೆನಗಿತ್ತು | ಮತ್ಸಂಗ ನೀನಾಂತು | ತ್ವತ್ಸುಗುಣ ನುಡಿಗಳ | ಹೃತ್ಸರೋಜದೊಳಿರಿಸೆ 2 ಸನುಮತ ಪಥಗಾಣಿಸಿ | ಕಏತೆಗಳ | ಮನದಲ್ಲಿ ಸ್ಥಿರಗೊಳಿಸಿ || ಜನನ ಮರಣವೆಂಬ | (ವನ) ದೊಳಗೆನ್ನನು | ವಿನಯದಿ (ಂದಲಿ) ಪಾರ | ಗಾಣಿಸೆ ಶಾರದೆ 3 ದಾಸನೆಂದೆನಿಸೆಯೆನ್ನ | ಕೀತಿ9ಗಹಿತ | ದೋಷವ ತ್ಯಜಿಸೆ ಮುನ್ನ || ಕ್ಲೇಶಗೈವರ ಮನ | ಲೇಸಿನೊಳ್ ವಂಚಿಸಿ | ವಾಸವ ಕರುಣಿಸೆ 4 ಚಿನುಮಯಾತ್ಮಕನಿರುವ | ವೈಕುಂಠದ | ಘನತರ (ಸತ್) ಪದವಿಯ || ಪತಿ | ಪಿತ ಶ್ರೀನಿವಾಸನ | (ಅನುಯಾಯಿ) ಸೇವೆಗ | ಳೆನಗಿತ್ತು ಪಾಲಿಸೆ 5
--------------
ಸದಾನಂದರು