ನಾರಾಯಣನಿನ್ನಪಾರಾಯಣಗೈವ
ಧೀರತನವಪಾಲಿಸೋ ಪ
ತೀರಕೆನ್ನನು ಸೇರಿಸೋ ಅ.ಪ
ಜನ್ಮದಿ ತೊಳಲುತ ಖಿನ್ನನಾಗಿ
ವರ್ಣಶ್ರೇಷ್ಠಕುಲದಿ ಬಹುಪುಣ್ಯದಿ
ಘನ್ನ ಮಹಿಮನೆ ನಿನ್ನ ಸೇವೆಯೊ
ಳುನ್ನತದ ರತಿಯನ್ನು ಪಾಲಿಸಿ 1
ಅಷ್ಟಯೋನಿಗಳಲ್ಲಿ ಹುಟ್ಟಿ ಸಾಯುತ ಬಲು
ಕೆಟ್ಟಕರ್ಮವ ಮಾಡಿ ಕಷ್ಟಪಟ್ಟು
ಎಷ್ಟು ನಿನಗೆ ಮೊರೆಯಿಟ್ಟು ಬೇಡಲು ಎಳ್ಳಿ
ನಷ್ಟು ಕಾರುಣ್ಯವು ಪುಟ್ಟದೇನೋ
ಕಟ್ಟಕಡೆಯೊಳು ನಷ್ಟಪಡಿಸುವೆ
ದಿಟ್ಟರಾರೈ ಇಷ್ಟ ಮೂರುತಿ 2
ಪರಮೇಷ್ಟಿ ಪುರದೊಳಗಿರಲಾನೊಲ್ಲೆನು ನಿನ್ನ
ನಿರುತ ನಿನ್ನಯ ಚರಿತೆಯಲಿ ಮನ
ವಿರಲಿ ನಾನಾತೆರದ ಭಕ್ತಿಯೊಳು
ಪರಮ ಪುಲಿಗಿರಿ ವರದವಿಠಲ 3