ತಿಳಿದು ಕೊಳ್ಳಿರಿ ಜಾಣರೆಲ್ಲಾ ಅಹಂ
ಅಳಿದು ನಿಂತಿರುವಂತ ಸತ್ಯಾತ್ಮ ಬಲ್ಲಾ ಪ
ಆದ್ಯಂತ ವಿಸ್ತಾರಮೆಲ್ಲಾ ಇದನು ಕೇ
ಳೀದರ್ಜುನÀಗೇಳಿದ ಕಳ್ಳಗೊಲ್ಲ ಅ.ಪ
ಎಂಟಾರುಗಳ ನೀನು ಕಂಡೂ ಅಲ್ಲಿ
ಟಂಟಣಿಸುವದೇನನುಭವದಿ ನೀನುಂಡೂ
ತುಂಟರೈವರಕಡೆಗೊಂಡು ಜ್ಞಾನ
ಮಂಟಪದೊಳಗೆ ಆಡುವ ಬಾರೊ ಚೆಂಡೂ 1
ನಾರದಾದಿಗಳೆಲ್ಲ ಬಂದೂ ಆಹ
ಮೀರಿದ ಶ್ರೀರಂಗಧಾಮನೊಳು ನಿಂದೂ
ಸಾರಿದರು ನಿಜನಾಮವೆಂದೂ ಇದನು
ಯಾರಾದರು ಭಜಿಸಿ ಗೋಪ್ಯದೊಳಗೆಂದು 2
ಪರದೊಳಗೆ ನೀ ಬೆರೆದಾಡೊ ಸತ್ಯ
ಶರಣರಿಗೊಲಿವ ಹರಿಯಹುದಿದು ನೋಡೋ
ನರಹರಿ ಭಜನೆಯ ಮಾಡು ನನ್ನ
ಗುರುವೆ ತುಲಸಿ ನಿನ್ನೊಳಿಹುದೈನೆ ನೋಡೋ 3