ಒಟ್ಟು 10 ಕಡೆಗಳಲ್ಲಿ , 7 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅನುದಿನ ಮರೆಯದೆ ಮರೆಯದೆ ಪ ಗಾತ್ರವೆ ಮಂದಿರ ಹೃದಯವೆ ಮಂಟಪನೇತ್ರವೆ ಮಹದೀಪ ಹಸ್ತ ಚಾಮರವುಯಾತ್ರೆ ಪ್ರದಕ್ಷಿಣೆ ಶಯನ ನಮಸ್ಕಾರಶಾಸ್ತ್ರ ಮಾತುಗಳೆಲ್ಲ ಮಂತ್ರಂಗಳು 1 ನುಡಿವ ಶಬ್ದಗಳೆಲ್ಲ ಹೂವುಗಳಾಯಿತುನಡೆವುದೆಲ್ಲವು ಬಹು ನಾಟ್ಯಂಗಳುಉಡುವ ಹೊದಿಕೆಯೆಲ್ಲ ಉಚಿತವಾದ ವಸ್ತ್ರಕೊಡುವ ಭೂಷಣವೆಲ್ಲ ದಿವ್ಯಾಭರಣ2 ಧರಿಸಿದ ಗಂಧವೆ ಚರಣಕ್ಕೆ ಗಂಧವುಶಿರದಲ್ಲಿ ಮುಡಿಯುವ ಪುಷ್ಪವೆ ಮಾಲೆಸ್ಥಿರವಾಗಿ ಕೂಡಿದ ಬುದ್ಧಿಯೆ ಆರುತಿಅರಿತೊಡಲಿಗೆ ಉಂಬನ್ನವೆ ನೈವೇದ್ಯ3 ಎನ್ನ ಸ್ವರೂಪವೆಂಬುದೆ ರನ್ನಗನ್ನಡಿಎನ್ನ ಮನೋವೃತ್ತಿ ಎಂಬುದೆ ಛತ್ರಇನ್ನು ನುಡಿವ ಹರಿ ನಾಮಾಮೃತವೇ ತೀರ್ಥಎನ್ನ ಮನವೆಂಬುದೆ ದಿವ್ಯ ಸಿಂಹಾಸನ 4 ಅನ್ಯ ದೇವತೆ ಯಾಕೆ ಅನ್ಯ ಪ್ರತಿಮೆಯು ಯಾಕೆಅನ್ಯವಾದ ಮಂತ್ರ ತಂತ್ರವ್ಯಾಕೆಎನ್ನಲ್ಲಿ ಭರಿತ ಸಾಧನ್ನಂಗಳಿರುತಿರೆಚೆನ್ನಾಗಿ ಶ್ರೀಕೃಷ್ಣ ಸ್ವಾಮಿಯ ಪೂಜಿಪೆ 5
--------------
ವ್ಯಾಸರಾಯರು
ಅರ್ಥಿಲೊಂದು ಹೇಳುವೆನಮ್ಮಅಲ್ಲಿವಾರ್ತೆಯಚಿತ್ತಗೊಟ್ಟು ಕೇಳ ತಾಯಿಅವರ ಕೀರ್ತಿಯ ಪ. ಹೋಗಿ ನಾನು ನಾಗವೇಣಿಯರ ಬಾಗಿಲು ಹೊಕ್ಕೆನುಸಾಗರಶಯನ ಮಂಚವೇರಲು ಧಕ್ಕನೆ ನಿಂತೆನು 1 ಮರ್ಯಾದಿಲೆ ಹರಿಯ ಮನೆ ಬಾಗಿಲು ಮರೆಯಲಿ ನಿಂತೆನುಸಿರಿಯರಸು ಸತಿಯರಿಂದ ಬೆರೆದು ಕುಳಿತೆ2 ಫುಲ್ಲನಾಭನು ಮಲ್ಲಿಗೆ ಮಂಚದೊಳಿರುತಿರೆವಲ್ಲಭೆಯರಿಬ್ಬರು ಗಂಧಪೂಸಿ ಅಲ್ಲೆ ಕುಳಿತಿಹರು3 ಪುನಗು ಜಾಜಿ ವನಿತೆಯರು ಹಚ್ಚುತಿಹರುಪುನಗು Pಸ್ತ್ತೂರಿ ಬೊಟ್ಟು ಮಾನಿನಿಯರು ಇಡುತಿಹರು4 ಚಾರು ಸೂರಿ ಸುಖಿಸುತ 5 ಕೃಷ್ಣರಾಯಗೆ ಕೊಟ್ಟು ಅಡಿಕೆ ತುಷ್ಟರಾಗಲಿಪಟ್ಟದ ರಾಣಿಯರಿಬ್ಬರು ಇಟ್ಟರು ತೊಡೆಮೇಲೆ 6 ಬಟ್ಟನೆ ವೀಳ್ಯ ರುಕ್ಮಿಣಿದೇವಿ ಕೊಟ್ಟೆನೆನುತಲಿಥಟ್ಟನೆ ಕೃಷ್ಣನವದನದಲ್ಲಿ ಇಟ್ಟಾಳು ಭಾವೆ ತಾ 7 ಭರದಿ ಕೋಪಿಸಿ ರುಕ್ಮಿಣಿದೇವಿ ತೆರೆದುಕಣ್ಣುತಾಹಿರಿಯಳೇನು ಮೊದಲು ಕೊಟ್ಟೆ ವೀಳ್ಯವೆನ್ನುತಲೆ 8 ಭೂಪÀ ರಾಮೇಶ ರುಕ್ಮಿಣಿದೇವಿಯ ತಾಪವ ಕಾಣುತಅಪಾರ ಕೋಪವ ಅರಘಳಿಗೆಯಲಿ ಇಳಿಸುವೆನೆಂದು ತಾ9
--------------
ಗಲಗಲಿಅವ್ವನವರು
ಚನ್ನಕೇಶವ ಇನ್ನೇನಿನ್ನೇನಿನ್ನು ಯನಗಿನ್ನೇನಿನ್ನೇನಿನ್ನು ಪ. ಚನ್ನಕೇಶವನಿವನನ್ನು ಹೃದಯದೊಳ್ ಚೆನ್ನಾಗಿ ನೆಲಸಿರಲಿನ್ನೇನ ಬೇಡುವೆ 1 ಭುವಿಜಾತೆಯೆನ್ನ ಮಾತೆ - ಭುವಿನಾಥನೆನ್ನ ತಾತ ಇವರೆನ್ನೊಳಿರುತಿರೆ ಭವಕ್ಲೇಶ ಪರಿದಿರೆ 2 ಅಂಡಜವಾಹನಾಖಂಡಲಾರ್ಚಿತನ ಪುಂಡರೀಕಾಕ್ಷನ ಕಂಡು ಕೊಂಡಾಡಿದೆ 3 ಧರೆಯೊಳಧಿಕ ಶೇಷಗಿರಿಯೊಳು ನೆಲಸಿರ್ಪ ವರದ ಶ್ರೀನರಹರಿ ವರದನೆನ್ನೊಳಿರೆ 4
--------------
ನಂಜನಗೂಡು ತಿರುಮಲಾಂಬಾ
ನಾರಾಯಣ ನಿನ್ನ ನಾಮವೊಂದಿರುತಿರೆಬೇರೊಂದು ನಾಮವಿನ್ನ್ಯಾಕಯ್ಯ ಪ ನೆಟ್ಟನೆ ದಾರಿಯು ಬಟ್ಟೆಯೊಳಿರುತಿರೆಬೆಟ್ಟವ ಬಳಸಲಿನ್ನ್ಯಾಕಯ್ಯಅಷ್ಟೈಶ್ವರ್ಯದ ಮೃಷ್ಟಾನ್ನವಿರುತಿರೆಬಿಟ್ಟಿ ಕೂಳನು ತಿನ್ನಲ್ಯಾಕಯ್ಯ 1 ಪರುಶದ ಪಾಳಗಳಿರುತಿರೆ ಬೀದಿಜರಿಗಲ್ಲ ತೊಳೆಯಲಿನ್ಯಾಕಯ್ಯಹರಿವಾಣದೊಳಗಮೃತಾನ್ನವಿರುತಿರೆತಿರಿಪೆ ಕೂಳನು ತಿನ್ನಲ್ಯಾಕಯ್ಯ 2 ಬೆಲ್ಲವು ಕರದೊಳಗಿರುತಿರೆ ಕಾಡಕಲ್ಲನು ಕಡಿಯಲಿನ್ಯಾಕಯ್ಯಬಲ್ಲಿದ ನೆಲೆಯಾದಿಕೇಶವನಿರುತಿರೆಚಿಲ್ಲರೆ ದೈವದ ಹಂಬಲ್ಯಾಕಯ್ಯ 3
--------------
ಕನಕದಾಸ
ಮಾಡುವುದೆಲ್ಲ ವಿವಾದಕೆ ಕಾರಣ | ಸಾಧಿಸುವದೆ ಬ್ರಹ್ಮಾ ಪ ಸಾಧು ಜನರ ಸುಸಮಾಧಿಯ ಬೋಧವು ಬಾಜಾರವೇನೋ ತಮ್ಮಾ ಅ.ಪ ಮನದೊಳು ತನದೊಳು ನಯನಗಳಿರುತಿರೆ | ಮನ ಬಯಸಿದದೊಂದು | ಘನ ಜ್ಯೋತಿಯ ತಾ ತಾರದೆ ತೋರದು | ಸನ್ಮುಖದಲಿ ನಿಂದೂ 1 ಅರಿವುದು ಕರಣದಿ ಬೆರೆವುತ ನಿನ್ನ | ಅರಿಯದಲಿರುತಿಹುದೂ | ಪರಮ ಪುರುಷರಾಚರಿಸುವ ಪರಿಯಲಿ | ಗುರುಪದ ಸಾರುವದೋ2 ತಪ್ಪದೆ ನೆಲಕೆ ಭಗುರಿಯನೆ ಎಸೆವರೆ | ಜಪ್ಪಿಸುವರೆ ಹೇಳಾ | ದಪ್ಪನೆ ಗುರು ಭವತಾರಕ ತ್ರಯ ಜಗದಪ್ಪನ ನೀ ಕೇಳಾ 3
--------------
ಭಾವತರಕರು
ಯಂತ್ರೋದ್ಧಾರಕ ರಾಯರ ಸ್ಮರಣೆಯ ಮಾಡಿ ಅಂತರಾತ್ಮನ ದಾಸರ ಪ ಸಂತತ ಮನದಿ ನಿಶ್ಚಿಂತೆಯೊಳ್ ಸ್ಮರಿಸಲು ಸಂತಾಪಗಳ ಕಳೆದು ಚಿಂತಿತಾರ್ಥವನೀವ ಅ.ಪ ಶರಧಿಯ ನೆರೆದಾಟಿದ ಕಾಲುವೆಯಂತೆ ನಲಿದು ಲಂಕೆಯ ಸಾರಿದ ಬಲಶಾಲಿ ಲಂಕಿಣಿಯು ಪುರವ ಕಾಯುವ ಶ್ರಮ ಹರಿಸಿ ಸೂಕ್ಷ್ಮದ ರೂಪ ಧರಿಸಿ ಪುರವ ಪೊಕ್ಕು ಪರಿಪರಿ ಕೋಟೆಗಳಿರವನೆ ಕಾಣುತ ಕರಿ ಹಯ ರಥ ಶಾಲೆಗಳ ಪರಿಕಿಸುತ ಖಳನರಮನೆ ಪೊಕ್ಕರು ಫಲವಿಲ್ಲದೆ ಕಡೆಗೆ ಅಶೋಕ ವನದೊಳು ಚರಿಸಿದ1 ವನದ ಮಧ್ಯದೊಳಿರಲು ರಕ್ಕಸ ಬಹು ಘನತೆಯಿಂದಲಿ ಬರಲು ಬಣಗು ದೈತ್ಯನ ತೃಣಕೆಣೆಮಾಡಿ ನುಡಿಯಲು ಪವನ ತನಯ ನೋಡಿ ಮನದಿ ಸ್ತೋತ್ರವ ಮಾಡಿ ಮನದೊಳು ಶ್ರೀ ರಘುವರನನು ಧ್ಯಾನಿಸಿ ಘನ ಮುದ್ರಿಕೆ ಮುಂದಿಡಲಾ ಜಾನಕಿ ನಯನಂಗಳ ಕಂಬನಿಗರೆಯುತ ಮುಂದಿಹ ಹನುಮನೊಳಿಂತೆನೆ ಲಾಲಿಸಿದ 2 ಯಾವ ರಾಯರ ದೂತನೋ ಪೇಳಯ್ಯ ಬಲು ಸಾವಧಾನದಿ ಮಾತನು ಶ್ರೀರಾಮಚಂದ್ರ ನಿನ್ನ ಸೇರಿ ಮಿತ್ರತ್ವಮಾಡೆ ಕಾರಣವೇನುಂಟು ಸಾವಧಾನದಿ ಪೇಳು ಯಾರನುಮತಿಯಿಂದೀ ಪುರ ಪೊಕ್ಕೆಯೊ ಯಾರಿಗಾಗಿ ಈ ವಾನರ ರೂಪವು ಪೋರನಂತೆ ಕಾಣುವಿ ನಿನ್ನ ವಚನವು ಬಾರದು ಮನಕೆಂದೆನಲು ಮಾತಾಡಿದ 3 ಜನಕ ಜಾತೆಯೆ ಲಾಲಿಸು ದೈತ್ಯರ ಸದೆ ಬಡಿಯುವನೆಂದು ಭಾವಿಸು ಇನಕುಲ ತಿಲಕನ ಚರಣಸೇವೆಯು ಮಾಡೆ ಜಲಜಾಕ್ಷನಾಜ್ಞದಿಂದ ಭುವಿಯೊಳು ವಾನರ- ಕುಲದೊಳಗವತರಿಸುವ ಶತ ಸಂಖ್ಯೆಯೊಳಿರುತಿರೆ ಗಿರಿವನಚರಿಸುವ ಸಮಯದಿ ಜಲಜಾಕ್ಷಿಯನರಸುತ ರಾಘವಬರೆ ಚರಣಾಂಬುಜಗಳಿಗೆರಗಿದೆವೆಂದೆನಲು 4 ಜಲಜಾಕ್ಷಿ ನಿಮ್ಮ ಕಾಣದೆ ಮನದೊಳಗೊಂದು ಘನವಾದ ಚಿಂತೆ ತಾಳಿದೆ ಜನಕ ಜಾತೆಯ ಪಾದಾಂಬುಜವ ಕಾಣದೆ ಮರಳಿ ಪುರವ ಸಾರುವದೆಂತು ರವಿಸುತನಾಜ್ಞೆ ಮೀರ- ಲರಿಯದೆ ಈ ಉಪವನದೊಳಗರಸುವ ಸಮಯದಿ ಶ್ರೀವರನಿಯಮಿಸಿ ಪೇಳಿದ ಪರಿಯನು ತಿಳಿಯುತ ಪರಮಾನಂದದಿ ರಘುವರನ್ವಾರ್ತೆಯ ಲಗುಬಗೆ ಪೇಳಿದ 5 ಕುರುಹು ಕೊಡಮ್ಮ ಜಾನಕಿ ಮನಸಿನ ಚಿಂತೆ ಬಿಡುಬೇಗ ಭದ್ರದಾಯಕಿ ಕ್ಷಣದೊಳ್ ಶ್ರೀರಾಮನೊಳು ಇನಿತೆಲ್ಲವನು ಪೇಳಿ ಕ್ಷಣದಿ ರಕ್ಕಸರನೆಲ್ಲ ನೆಲಸಮ ಮಾಳ್ಪೆನೆಂಬೀ ಅಣುಗನಿಗಪ್ಪಣೆಯನು ಪಾಲಿಸೆನಲು ಅನುಮತಿನೀಡಿದ ಅವನಿಜೆಗೊಂದಿಸಿ ಕ್ಷಣದೊಳು ವನಭಂಗವ ಮಾಡಿದ ನುಡಿ ಕೇ- ಳಿದ ರಾವಣನ ಪುರವ ಅನಲನಿಗಾಹುತಿ ಇತ್ತ 6 ಜಯ ಜಯ ಜಯ ಹನುಮಂತ ಜಯ ಜಯ ಬಲವಂತ ಜಯ ಶ್ರೀರಾಮರ ಪ್ರಿಯದೂತ ಜಯ ಜಯ ಜಯವೆಂದು ಸನಕಾದಿಗಳು ಪೊಗಳೆ ಅನಲ ಸಖನ ಸೂನುವನು ಸ್ತೋತ್ರದಿಂದ ಪಾಡೆ ಕಮಲಜಾದಿ ಸುರಗಣ ತಲೆದೂಗೆ ಶ್ರೀ ಕಮಲನಾಭ ವಿಠ್ಠಲನನು ಪಾಡುತ ಅಮಿತ ಪರಾಕ್ರಮವಂತನ ಪೊಗಳುತ ನಮಿಸಿ ಶ್ರೀರಾಮರ ಗುಣಗಳ ಪೊಗಳುವ 7
--------------
ನಿಡಗುರುಕಿ ಜೀವೂಬಾಯಿ
ರಾಮಾ ನಿನ್ನ್ಹ್ಹೊರತನ್ಯರ ಕಾಣೆ ಪೊರೆ ನೀನೆನ್ನಾಣೇ ಶ್ರೀರಾಮಾ ಪ ಕಾಮಾಂತಕ ತನ್ನ ಭಾಮೆಗೊರೆದ ಶ್ರೀ ರಾಮತಾರಕಮಂತ್ರವೆ ಗತಿ ಲೋಕಕೆ ರಾಮಾಅ.ಪ ಮತಿವಂತ ದಶರಥ ಕೌಸಲ್ಯೆಯರ ಸುತನಾಗ್ಯವತರಿಸಿ ಅತಿ ಬಾಲ್ಯದಿ ಮುನಿಯೊಡನಡವಿಗೆ ನಡೆದು ಕಡು ದುರುಳೆಯಸದೆದು ಮತಿಹೀನ ರಕ್ಕಸರುಪಟಳವಳಿದು ಮುನಿಪತಿ ಮಖ ಬೆಳೆದು ಪತಿಸುತಸಖಹಿತ ಜನಪತಿ ಜೀವಿತ ಪಥದಾದರ್ಶವ ಜಗತಿಗೆ ತೋರಿದೆ1 ಮುನಿಗೌತಮಸತಿ ತಾ ಶಿಲೆಯಂತಿರಲು ಪದರಜದಿಂದುದ್ಧರಿಸಿ ಜಾಹ್ನವಿ ಚರಿತೆಯ ಕೇಳುತ ನಲಿದು ಅನುಜಾತನ ಬೆರೆದು ಜನನಾಥನ ಜನಕನ ಮಿಥಿಲೆಗೆ ನಡೆದು ಹರಧನುವನುಪಡೆದು ಅನುಪಮವೆನಿಪದ ನಡುವೊಳೆ ಖಂಡಿಸಿ ಜನಕಸುತೆಯ ಕರಕಮಲವ ಪಿಡಿದೆ 2 ಪರಶುಹಸ್ತರು ಮಾರ್ಗದಿ ಎದುರಾಗಿ ಅಂಜಿಸೆ ಬೆರಗಾಗಿ ಕರದಲ್ಲಾಟಿಕೆಯೊಲು ಧನುವದಗ್ರಹಿಸಿ ಕ್ಷಣದಲ್ಲುಪಹರಿಸಿ ಜನಕೆ ಹಿರಿಯರಿಗೆ ದಶರಥನಿಗೆ ಸುರನರರೆಲ್ಲರು ಪರಮಾನಂದದೊ ಳಿರುತಿರೆ ವಸಿದೆ ಸುದತಿಯೊಡನೆ ರಘುರಾಮ3 ಹಿಂದೆ ನಾ ಬಹುಜನ್ಮಗಳಲಿ ಬಂದು ನೊಂದೆನು ಈ ಭವದಿ ನಿನ್ನಲಿ ಬಂದು ನಿಂದೆ ಗತಿಯೆಂದು ಸಂದೇಹವಿಲ್ಲ ನೀನೇ ಗುಣಸಿಂಧು ಜಗಕಾಪದ್ಬಂಧು ತಂದೆ ನೀನಿಂದೆನ್ನ ಬಂಧನ ಬಿಡಿಸದೆ ಕೊಂದೆಯಾದರೆ ಕುಂದದು ನಿನಗಪಯಶ 4 ಆನಂದಮಯ ನೀನಾನಂದದಲ್ಲಿದ್ದೆ ಆಶ್ಚರ್ಯವದೇಳು ಆನಂದವನಂದು ಕುಂದದಲಿತ್ತೆ ಜಗಕತಿಶಯವೇಳು ಸಾನಂದದೊಳಿದ್ದರು ತವಸನ್ನಿಧಿಬಲದಿ ಅತಿಶಯಮತ್ತೇಳು ನ್ಹೊಂದಿಸಿ ಪೊರೆ ರಘುರಾಮವಿಠಲ 5
--------------
ರಘುರಾಮವಿಠಲದಾಸರು
ರುದ್ರದೇವರು ಪರಿ ವೈರಾಗ್ಯವು ವೀರ ವೈಷ್ಣವ ಭಕ್ತಾಗ್ರಣಿಯೆ ಪ ಮಾರಹರನೆ ಮನ್ಮಥನ ವೈರಿಯೆ ಮನ- ಸಾರ ಶ್ರೀರಾಮ ನಾಮವ ಜಪಿಸುವದಿದು ಅ,ಪ ಮುತ್ತು ಮಾಣಿಕ್ಯದ ಕಿರೀಟವು ಧರಿಸದೆ ನೆತ್ತಿಲಿ ಕೆಂಜೆಡೆ ಸುತ್ತಿಹುದು ಹಸ್ತದಿ ಶಂಖು ಚಕ್ರಗದೆ ಪದುಮವು ಬಿಟ್ಟು ಉತ್ತಮ ಡಮರು ತ್ರಿಶೂಲ ಪಿಡಿವುದಿದು 1 ನೊಸಲಲಿ ಕಸ್ತೂರಿ ತಿಲಕವನಿಡದಲೆ ಭಸುಮವ ಲೇಪಿಸುವುದು ತರವೆ ಕುಸುಮಲೋಚನೆ ಪ್ರಿಯ ಸಖನಾಗಿರುತಿರೆ ಎಸೆವ ಕಪಾಲ ಪಿಡಿದು ಬೇಡುವದಿದು 2 ದುಂಡು ಮುತ್ತಿನ ಹಾರ ಪದಕಗಳಿರುತಿರೆ ರುಂಡಮಾಲೆಯ ಕೊರಳೊಳು ತರವೆ ತಂಡ ತಂಡ ಪರಮಾನ್ನ ಭಕ್ಷಗಳಿರೆ ಉಂಡು ತೇಗದೇ ವಿಷಪಾನ ಮಾಡುವದಿದು3 ಭರ್ಜರಿ ಪೀತಾಂಬರ ಉಡುವುದು ಬಿಟ್ಟು ಕರಿಯ ಚರ್ಮನುಡುವುದು ತರವೆ ಪರಿ ರತ್ನಾಭರಣಗಳಿರುತಿರೆ ಉರಗಗಳಿಂದಲಂಕೃತನಾಗಿರುವದು 4 ಭೃತ್ಯರು ಸೇವೆಗೆ ಬೇಕಾದವರಿರೆ ಮತ್ತೆ ಪಿಶಾಚ ಗಣಗಳೇತಕೆ ಹಸ್ತಿ ತುರಗ ಪಲ್ಲಕ್ಕಿ ಪುಷ್ಪಕವಿರೆ ಎತ್ತನೇರಿ ಚರಿಸುವುದುಚಿತವೆ ಶಂಭೊ 5 ಸಿರದಲಿ ಗಂಗೆಯು ಸ್ಥಿರವಾಗಿರುತಿರೆ ಪರ್ವತರಾಜಕುವರಿಯೇತಕೆ ಅರಮನೆ ವಾಸಕೆ ಯೋಗ್ಯವಾಗಿರುತಿರೆ ಗಿರಿ ಕೈಲಾಸ ಪರ್ವತದಿ ವಾಸಿಸುವದು 6 ಭಕ್ತರು ಭಕುತಿಲಿ ಪಾಡಿ ಕೊಂಡಾಡಲು ನೃತ್ಯವ ಮಾಡುತ ಹರುಷದಲಿ ಕರ್ತೃ ಶ್ರೀ ಕಮಲನಾಭ ವಿಠ್ಠಲನೆಂದು ಪತ್ನಿಗೆ ಉಪದೇಶ ಮಾಡುವದಿದು 7
--------------
ನಿಡಗುರುಕಿ ಜೀವೂಬಾಯಿ