ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಷ್ಟು ಪುಣ್ಯ ಮಾಡೀ ಕಂಬ ವಿಠ್ಠಲನ್ನ ಗುಡಿ ಸೇರಿತೋ ಪ. ಪುರಂದರ ದಾಸರನ್ನು ಕಟ್ಟಿಸಿಕೊಂಡು ತಾ ಪೂಜೆಗೊಂಡಿತೊ ಅ. ಎಲ್ಲಾ ಕಂಬಗಳಿದ್ದರೂ ಇಂತು ಇಲ್ಲೀ ಇದಕೆ ಈ ಖ್ಯಾತಿಯು ಬಂತು ಸುಜನ ವಂದಿಪರಿ ಪುಲ್ಲನಾಭನ್ನ ಕೃಪೆಯ ಪಡೆದಿತು 1 ಮಾಯಾಕಾರನು ನೀರನು ತಂದು ಈಯಲು ಪುರಂದರದಾಸರಿಗಂದು ನೋಯಿಸೆ ತಿಳಿಯದೆ ಮನಕದ ತಂದು ನ್ಯಾಯದಿ ಕಟ್ಟಿಸಿ ಹೊಡೆಸಿದನಂದು 2 ದಾಸರಂತೆ ತಾನು ವೇಷವ ಧರಿಸಿ ವೇಶ್ಯೆಗೆ ತನ್ನ ಕಂಕಣವನ್ನೆ ಕೊಡಿಸಿ ತಾಸೊತ್ತಿನಾ ರಾತ್ರೆ ಹೊಡೆದದ್ದ ನೆನಸಿ ವಾಸುದೇವ ಬೈಲಿಗೆಳೆಸಿದ ಬಿಗಿಸಿ 3 ಜ್ಞಾನ ಪುಟ್ಟಲು ಹರಿಮಾಯವಿದೆಂದು ಶ್ರೀನಿವಾಸ ತಾ ವಲಿದನು ಅಂದು ಆನಂದದಿಂದೊಂದು ಕವನ ಗೈದು ಶ್ರೀನಿಧೆ ಮುಟ್ಟಿತು ಮುಯ್ಯವಿದೆಂದು4 ದಾಸರ ಅಂಗವು ಸೋಕಿದ್ದರಿಂದ ಶ್ರೀಶನು ಹಗ್ಗದಿ ಬಿಗಿಸಿದ್ದರಿಂದ ದಾಸರ ಪೆಸರಲಿ ಮೆರೆವುದರಿಂದ ಭವ ಬಂಧ5 ಹಿಂದೆ ಕಂಬದಿ ನರಹರಿ ಅವತರಿಸೆ ಅಂದಿನ ಕಂಬವೆ ಈಗಿಲ್ಲ್ಲಿ ಉದಿಸೆ ಸಿಂಧುಶಯನನ್ನ ದಾಸತ್ವ ವಹಿಸೆ ಬಂದಿತು ವಿಠಲನ್ನ ಗುಡಿಯನಾಶ್ರೈಸೆ6 ಕರ್ಮ ಕಳೆವುದು ದಾಸರ ವಾಕ್ಶ್ರವಣ ಜ್ಞಾನವೀಯುವುದು ದಾಸರ ಉಪದೇಶ ಹರಿಯ ತೋರುವುದು ದಾಸರ ಸ್ಪರ್ಶವು ಮುಕ್ತಿಗೊಯ್ಯವುದು7 ಕಂಭವೆ ಸಾಕ್ಷಿಯು ಈ ಕಲಿಯುಗದಿ ಡಾಂಭಿಕ ಜನರಿಗೆ ತಿಳಿಯದು ಹಾದಿ ಬೆಂಬಿಡದೆ ಹರಿ ಕಾಯುವ ಭರದಿ ಇಂಬುಗೊಟ್ಟು ತನ್ನ ನಿಜ ದಿವ್ಯ ಪುರದಿ 8 ದಾಸರ ಮಾರ್ಗವೆ ಸುಲಭವೆಂತೆಂದು ದಾಸರ ಕೃಪೆ ದ್ವಾರ ವಲಿಯುವೆನೆಂದು ದಾಸರ ದೂಷಿಸೆ ಗತಿ ಇಲ್ಲೆಂದು ಶ್ರೀಶ ತಾನಿಲ್ಲೀ ನಿಂತನು ಬಂದು 9 ಶ್ರೀ ರಮಾಪತಿ ಓಡಿ ಬಂದ ನಿಲ್ಲೆಂದೂ ದ್ವಾರಕ ಪುರದೊಂದು ಕಂಭವೆ ಬಂದು ಸೇರಿತೊ ವಿಠಲನ ಮಂದಿರವಂದು ಸೂರೆಗೈದರೊ ಖ್ಯಾತಿ ದಾಸರು ಬಂದು 10 ನಿಜದಾಸರಂಗಸಂಗದ ಫಲದಿ ರಜತದ ಕಟ್ಟಿನಿಂ ಮೆರೆದಿತು ಜಗದಿ ಸುಜನರ ಸಂಗದಿ ಮುಕುತಿಯ ಹಾದಿ ಭುಜಗಶಯನ ತೋರುವ ನಿರ್ಮಲದಿ 11 ತತ್ವವನಿದರಿಂದ ತಿಳಿವುದು ಒಂದು ಉತ್ತಮತ್ವ್ವವು ಜಡಕಾಯಿತು ಬಂದು ಪಾದ ಸೋಂಕಲು ಅಂದು ವ್ಯರ್ಥವಾಗದು ಹರಿಭಕ್ತರೆ ಬಂಧು12 ಪಾಪ ನಿರ್ಲೇಪವಾಗೋದು ವಿಠ್ಠಲನ್ನ ಆಪಾದ ಮೌಳಿಯ ರೂಪ ದರುಶನ್ನ ಪರಿ ಖ್ಯಾತಿ ಪೊಂದಿತು ಕಂಬ ಘನ್ನ ಗೋಪಾಲಕೃಷ್ಣವಿಠ್ಠಲ ಸುಪ್ರಸನ್ನ 13
--------------
ಅಂಬಾಬಾಯಿ
ದಾಸಗೆ ಭಯವೆಲ್ಲಿ ದಾಸಗೆ ಭಯವೆಲ್ಲಿ ಪ ದಾಸನಾಗದವಗೆ ಭಯವೆಂದಿಗು ತಪ್ಪದು ದಾಸನಾಗಿಹಗೆ ಭಯವೆಂದಿಗು ಬಾರದು 1 ತರಳ ಪ್ರಹ್ಲಾದಗೆ ಭಯವೆಂದಿಗು ಸೋಂಕಲಿಲ್ಲ ತರಳನ ಪಿತಗೆ ಭಯವೆಂದಿಗು ತಪ್ಪಲಿಲ್ಲ 2 ಲಂಕೆಯೊಳಿದ್ದರೂ ದಶಕಂಠನಿಗತಿ ಭಯ ಲಂಕೆಯ ಬಿಟ್ಟ ವಿಭೀಷಣನಿಗಭಯ 3 ಹರನ ಪೀಡಿಸಿದಾ ಭಸ್ಮಾಸುರಗೆ ಭಯ ಹರಿಯ ಸ್ತುತಿಸಿದ ಮಹಾದೇವನಿಗಭಯ 4 ರಾಜೇಶ ಹಯಮುಖನೊಲಿದವನಿಗಭಯ 5
--------------
ವಿಶ್ವೇಂದ್ರತೀರ್ಥ
ಪ್ರಾಣಾ - ದೇವನೇ | ಸಕಲ ಜಗ | ತ್ರಾಣ ನಾದನೇ ಪ ರೇಣು ವಂತಿರಿಸೊ ಅ.ಪ. ಪಂಚ - ರೂಪನೇ | ಪ್ರಾಣಾದಿ | ಪಂಚ ಕಾರ್ಯನೇ |ವಂಚಿಸಿ ದೈತ್ಯರ | ಸಂಚುಗೊಳಿಸಿ - ನಿ-ಷ್ಕಿಂಚಿನ ಜನಪ್ರಿಯ ಸಂಚಿಂತನೆ ಕೊಡು 1 ಹಂಸ ನಾಮವಾ | ಪ್ರತಿದಿನ | ಶಂಸಿಪೆ ಪವನಾ |ಹಂಸ ಮಂತ್ರವೇಕ | ವಿಂಶತಿ ಸಾಸಿರ ಶಂಸಿಸಿ ಷಟ್ಯತ | ಹಂಸನಿಗೀವೆ 2 ವಿಧಿ | ಪೂರ್ವಕ ಸಾಧನನಿರ್ವಹಿಸುವ ತೆರ | ತೋರ್ದನು ನೀನೇ 3 ವಿಶ್ವ-ವ್ಯಾಪಕಾ | ಹರಿಗೆ ಸಾ | ದೃಶ್ಯ ರೂಪಕಾ |ಅಶ್ವರೂಪ ಹರಿ | ವಶ್ಯನೆನಿಸಿ ಬಹುವಿಶ್ವಕಾರ್ಯ ಸ | ರ್ವಸ್ವ ಮಾಳ್ಪೆಯೊ 4 ದೇವ-ಋಷೀ-ಪಿತ | ನೃಪರು-ನರ | ರೈವರೊಳಗಿರುತಾ |ಜೀವರುಗಳ ಸ್ವ | ಭಾವ ವ್ಯಕುತಿಗೈ ದೀವಿರಿಂಚಾಂಡವ | ನೀ ವಹಿಸಿದೆಯೋ 5 ಶುದ್ಧ-ಸತ್ವಾತ್ಮದ | ದೇಹದೊ | ಳಿದ್ದರೂ ಲಿಂಗದ |ಬದ್ಧ ವಿಹೀನನೆ | ದಗ್ದ ಪಟದ ಪರಿಸಿದ್ಧ ಸಾಧನ ಅನ | ವವ್ಯ ನೆನಿಸುವೇ 6 ಹೀನ-ಸತು ಕರ್ಮವಾ | ಪವಮಾನ | ತಾನೇ ಮಾಡುವಾ |ಜ್ಞಾನದಿಂದಲೇ | ನೇನು ಮಾಳ್ಪುದನುಪ್ರಾಣಪಗೊಂಡು ಕು | ಯೋನಿಯ ಕಳೆವ 7 ಕ | ವಾಟ ಅಹಿಪವಿಪ ಲ-ಲಾಟ ನೇತ್ರಗೆ | ಸಾಟಿ ಮೀರ್ದನೇ 8 ವಾಙ್ಮನೋ-ಮಾಯನೇ | ದೇವ | ಸ್ತೋಮ ದೊಳಗಿಹನೇ |ಶ್ರೀ ಮಹಿನುತ ಶ್ರೀ | ರಾಮಚಂದ್ರ ಗುಣಸ್ತೋಮ ಪೊಗಳ ನ | ಮ್ಮಾಮಯ ಹರ9 ಮೂಲೇಶ ಪದವ | ಪಿಡಿದಿಹ | ಪ್ರಾಣನ ಚರಣಾಕಿಲಾಲಜವನು | ಓಲೈಸುತಲಿಹಕಾಲ ಕರ್ಮದಿಹ | ಕೀಳು ಜೀವನ ಪೊರೆ 10 ಭಾವಿ ಬ್ರಹ್ಮನೇ | ಜೀವರ | ಸ್ವಭಾವ - ವರಿತನೇ ಕಾವ ಕಾಲ್ಪ ಗುರು | ಗೋವಿಂದ ವಿಠಲನಪಾವನ ಚರಣವ | ಭಾವದಿ ತೋರೈ 11
--------------
ಗುರುಗೋವಿಂದವಿಠಲರು
ಮಟ್ಟುದೊರಿತು-ನಿನ್ನ ಗುಟ್ಟು ಹಾರಿತು ಪ ಸಿಟ್ಟುಗೊಳ್ಳಬೇಡವೆನ್ನ ದೃಷ್ಟಿಯಿಂದ ನೋಡಿ ಕಂಡೆ ಅಷ್ಟಸಿದ್ಧಿಗಳಿದ್ದರೂ ವೊಂದಿಷ್ಟುಕೊರತೆ ಕೃಷ್ಣನೆಂಬ 1 ಹೇಯ ಗುಣವಿಲ್ಲ ಮುನಿ-ಗೇಯ ನಿನ್ನೊಳೆಂಬ ಜನರ ಬಾಯ ಮುಚ್ಚಿಸುವೆನೆಂದತ್ಯಾಯಸಪಡುವನೆಂಬ ||ಮಟ್ಟು|| 2 ಸತ್ಯಕಾಮನಹುದು ನೀನು ಸತ್ಯಸಂಕಲ್ಪನು ನಿನಗೆ ದತ್ಯಧಿಕ-ಕೊರತೆಯೆಂಬ ||ಮಟ್ಟು|| 3 ಜ್ಞಾನವಂತನೆಂದು ಬಹುಮಾನವಂತನಾದರೂ ಅ ಜ್ಞಾನ ಶೂನ್ಯನೆಂಬ ದೊಡ್ಡ ಹಾನಿಯೊಂದಿರುವದೆಂಬ4 ಎಲ್ಲ ವಸ್ತುಗಳುಂಟು ನಿನಗೆ ಪುಲ್ಲನಾಭ ನಿನ್ನ ಬಳಿಯೋ ಳಿಲ್ಲವೆಂಬ ಶಬ್ದಮಾತ್ರವಿಲ್ಲವೆಂಬ ಮಾತು ಬಂದಿಹ5 ಪಾಪವೆಂಬ ಕತ್ತಲೆಗೆ ದೀಪನಾಗಿದ್ದರು ಜನರ ಪಾಪಗಳ ನಪಹರಿಪ ದೀಪನಾ ಬಿಡದು ಎಂಬ ||ಮಟ್ಟು||6 ಜ್ಯೋತಿಗಳಿಗೆಲ್ಲ ಪರಂಜ್ಯೋತಿಯಾಗಿರುವ ನಿನಗೆ ಆ ಜ್ಯೋತಿಗಳೆತ್ತಿದಾರತೀ ಪ್ರೀತಿಯೆಂದು ಜನರು ಪೇಳ್ವ ||ಮಟ್ಟು||7 ಹಾನಿವೃದ್ಧಿ ಶೋಕಮೋಹ ಜ್ಞಾನ ನಿನ್ನೊಳಿಲ್ಲವೆಂಬ ಹೀನವಾಕ್ಯವ ಪೇಳ್ವರೆಲ್ಲ ಮಾನನಿಧಿಗಳೆಂತೆಂಬ ||ಮಟ್ಟು||8 ನಿತ್ಯ ತೃಪ್ತನಾದರೂ ನಿಜ-ಭೃತ್ಯರನ್ನು ಪಾಲಿಸುವ ನಿತ್ಯ ಕರ್ಮದಲ್ಲಿ ಕೃತಕೃತ್ಯನು ನೀನಲ್ಲವೆಂಬ 9 ಕಷ್ಟಪಡಬೇಡವೆನ್ನೊ-ಳೆಷ್ಟು ದುರ್ಗುಣಂಗಳಿಹ ವಷ್ಟನು ವೊಪ್ಪಿಸಿ ನಿನಗಿಷ್ಟನಾಗಬೇಕೆಂಬ ||ಮಟ್ಟು|| 10 ಕ್ಷೀರದಧಿನವನೀತ-ಚೋರನಾಗಿರಲಿ ಗೋಪೀ ಜಾರನಾಗಿರಲಿ ಸಂಸಾರವೈರಿಯು ನೀನೆಂಬ ||ಮಟ್ಟು||11 ಕೊರತೆಯೆಂಬಾಜನರಿಗೆಲ್ಲ-ವರವನಿತ್ತು ಪೊರೆವೆನೆಂಬ ವರದವಿಠಲನೆಂಬ ||ಮಟ್ಟು|| 12
--------------
ಸರಗೂರು ವೆಂಕಟವರದಾರ್ಯರು
ಮುಟ್ಟು ದೋರಿತು ನಿನ್ನ ಗುಟ್ಟು ಹಾರಿತು ಪ ಸಿಟ್ಟುಗೊಳ್ಳಬೇಡವೆನ್ನ ದೃಷ್ಟಿಯಿಂದ ನೋಡಿ ಕಂಡೆ ಅಷ್ಟಸಿದ್ಧಿಗಳಿದ್ದರೂ ಒಂದಿಷ್ಟು ಕೊರತೆ ಕೃಷ್ಣನೆಂಬ ಅ.ಪ ಹೇಯಗುಣವಿಲ್ಲ ಮುನಿಗೇಯ ನಿನ್ನೊಳೆಂಬ ಜನರ ಬಾಯ ಮುಚ್ಚಿಸುವೆನೆಂದತ್ಯಾಯಸಪಡುವನೆಂಬ 1 ಸತ್ಯಕಾಮನಹುದು ನೀನು ಸತ್ಯಸಂಕಲ್ಪನು ನಿನಗೆ ಮಿಥ್ಯಾವಚನಿಲ್ಲವೆಂಬೊಂದಿತ್ಯಧಿಕ ಕೊರತೆಯೆಂಬ 2 ಜ್ಷಾನವಂತನೆಯ ಬಹುಮಾನವಂತನಾದರೂ ಅ ಜ್ಞಾನಶೂನ್ಯನೆಂಬ ದೊಡ್ಡ ಹಾನಿಯೊಂದಿರುವುದೆಂಬ3 ಎಲ್ಲ ವಸ್ತುಗಳುಂಟು ನಿನಗೆ ಪುಲ್ಲನಾಭ ನಿನ್ನ ಬಳಿಯೋ ಳಿಲ್ಲವೆಂಬ ಶಬ್ದಮಾತ್ರವಿಲ್ಲವೆಂಬ ಮಾತು ಬಂದಿಹ 4 ಪಾಪವೆಂಬ ಕತ್ತಲೆಗೆ ದೀಪನಾಗಿದ್ದರು ಜನರ ಪಾಪಗಳನಪಹರಿಪ ದೀಪನಾ ಬಿಡದು ಎಂಬ 5 ಜ್ಯೋತಿಗಳಿಗೆಲ್ಲ ಪರಂಜ್ಯೋತಿಯಾಗಿರಿವ ನಿನಗೆ ಆ ಜ್ಯೋತಿಗಳೆತ್ತಿದಾರತೀ ಪ್ರೀತಿಯೆಂದು ಜನರು ಪೇಳ್ವ 6 ಹಾನಿವೃದ್ಧಿ ಶೋಕಮೋಹ ಜ್ಞಾನ ನಿನ್ನೊಳಿಲ್ಲವೆಂಬ ಹೀನವಾಕ್ಯವ ಪೇಳ್ವರೆಲ್ಲ ಮಾನನಿಧಿಗಳೆಂತೆಂಬ 7 ನಿತ್ಯತೃಪ್ತನಾದರೂ ನಿಜ ಭೃತ್ಯರನು ಪಾಲಿಸುವ ನಿತ್ಯ ಕರ್ಮದಲ್ಲಿ ಕೃತಕೃತ್ಯನುನೀನಲ್ಲವೆಂಬ 8 ಕಷ್ಟಪಡಬೇಡವೆನ್ನೊಳೆಷ್ಟು ದುರ್ಗುಣಂಗಳಿಹ ವಷ್ಟನು ಒಪ್ಪಿಸಿ ನಿನಗಿಷ್ಟ ನಾಗಬೇಕೆಂಬ 9 ಕ್ಷೀರದಧಿನವನೀತ ಚೋರನಾಗಿರಲಿ ಗೋಪೀ ಜಾರನಾಗಿರಲಿ ಸಂಸಾರವೈರಿಯು ನೀನೆಂಬ 10 ಕೊರತೆಯೆಂಬಾ ಜನರಿಗೆಲ್ಲಾ ವರವನಿತ್ತು ಪೊರೆವೆನೆಂಬ ಸ್ಥಿರವಾಗಿ ಶ್ರೀ ವ್ಯಾಘ್ರಗಿರಿಯೊಳಿರುವ ವರದ ವಿಠಲನೆಂಬ11
--------------
ವೆಂಕಟವರದಾರ್ಯರು