ಮಾತಾನ್ನಪೂರ್ಣೆ ಮಾಮಮಾಪರ್ಣೆ ಪ
ಪಾತಕವನು ಕಳೆದು ಪಾದಸೇವೆಯ ನೀಯೆ ಅ.ಪ
ಮಾನಸವನು ನಿರ್ಮಲ ಮಾಡಿ ಕೈಪಿಡಿಯೇ 1
ಧನ್ಯನ ಮಾಡೇ ಕರುಣದಿ ನೋಡೇ
ಅನ್ಯರಿಗೀಪರಿ ಬನ್ನಪಡಲಾರೆನು 2
ರಾಯ ಶಂಕರನು ಭವಜಲಧಿಯೊ
ಳಾಯಾಸಪಡುತಲಿ ನೋಯುತಲಿರುವೆನು 3
ಭೂಸುರವಿನುತೆ ದೇವಾಸುರ ಪೂಜಿತೆ 4
ಪ್ರೇಮದಿ ಭಿಕ್ಷ ನಿನ್ನಿಂದ ಪಡೆದು
ತಾಮರಸಾಕ್ಷ ಬಲಿಯ ಗೆದ್ದವಾಮನ ಶ್ರೀ ಗುರುರಾಮ ವಿಠಲ ಸ್ವಾಮಿ 5