ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಂಡು ನಮಿಸಿದೆ ನಿನ್ನ | ಕಡಗೋಲ ಪಿಡಿ- ದುದ್ದಂಡ ದೇವವರೇಣ್ಯ ತಾಪತ್ರಯಗಳಘ ಹಿಂಡು ಓಡಿಸು ರನ್ನ ಪೊರೆ ಸುಪ್ರಸನ್ನ ಪ. ಕಂಡೆ ನಿನ್ನಯ ಬಾಲರೂಪವ ಪುಂಡರೀಕದಳಾಯತಾಕ್ಷನೆ ಕುಂಡಲೀಶಯ ನಿನ್ನ ಚರಣದಿ ದಂಡವಿಕ್ಕುವೆ ಗೋಪಿಬಾಲ ಅ.ಪ. ಜನನ ಮರಣದಿ ನೊಂದೆ | ಶ್ರೀ ಜಾನಕೀಪತೆ ಪ್ರಣತ ಜನರಿಗೆ ತಂದೆ | ನೀ ಕಾಯದಿದ್ದರೆ ಘನವೆ ನಿನಗಿದು ಎಂದೆ | ಪಾಲಿಪುದು ಮುಂದೆ ಜನಮ ಜನುಮದ ಕರ್ಮಗಳ ನಾ ಅನುಭವಿಸಿ ಪೂರೈಸಲಾಪೆನೆ ಘನಮಹಿಮ ದಯ ಮಾಡಿದಲ್ಲದೆ ಕೊನೆಯ ಕಾಣೆನು ವಿಷಯ ವಾಸನೆ ವನಜ ಸಂಭವ ಪವನ ರುದ್ರಾ ದ್ಯನಿಮಿಷಿರಿಗಿನಿತಿಲ್ಲ ಮಹಿಮೆಯು ನಿನಗೆ ವಿೂರಿದರುಂಟೆ ದನುಜದಲ್ಲಣ ದಯದಿ ಸಲಹೊ 1 ಕಾಮಪಿತ ಮಧ್ವೇಶ | ಸೌಂದರ್ಯ ಸಾರ ತಾಮಸರ ವಿಧ್ವಂಸ | ಸಜ್ಜನರ ಕಾಯುವ ಕೋಮಲಾಂಗನೆ ಶ್ರೀಶ | ಲಕ್ಷ್ಮೀ ನಿವಾಸ ಹೋಮಕುಂಡದಿ ಪುಟ್ಟಿದಾ ಸತಿ ಕಾಮಿಗಳ ಉಪಟಳಕೆ ಸಹಿಸದೆ ಶ್ರೀ ಮನೋಹರ ಕಾಯೊ ದ್ವಾರಕೆ ಧಾಮ ನೀ ಗತಿ ಎನುತವರಲೆ ಪ್ರೇಮದಿಂದಕ್ಷಯವನಿತ್ತ ನಾಮ ಮಂಗಳ ನಿರ್ಮಲಾತ್ಮಕ ಸೋಮಶತಪ್ರಭ ಸೌಮ್ಯರೂಪ ತ್ರಿ- ಧಾಮ ಭಕ್ತರ ಕಾಮಿತಾರ್ಥನೆ 2 ಆದಿಮಧ್ಯವಿದೂರ | ಆನಂದ ಪೂರ್ಣ ಸಾಧು ಮನದಿ ವಿಹಾರ | ಸರ್ವಜ್ಞರಾಯರ ಹಾದಿ ತೋರಿಸೊ ಧೀರ | ಸುಜ್ಞಾನಸಾರ ವೇದ ಶಾಸ್ತ್ರಗಳರ್ಥವರಿಯೆನು ಮಾಧವನೆ ಮಮಕಾರದಲಿ ನಾ ಹಾದಿ ತಿಳಿಯದೆ ನೊಂದೆ ಅಜ್ಞತೆ ಹೋದಡಲ್ಲದೆ ನಿನ್ನ ಕಾಣುವ ಮೋದ ಬರುವುದೆ ಮಧ್ವವಲ್ಲಭ ಭೇದ ಮತಿ ಕೊಡು ತಾರತಮ್ಯದಿ ನೀ ದಯದಿ ಒಲಿದೆನ್ನ ಮನದಲಿ ಆದರದಿ ನೆಲೆಸಿನ್ನು ಪೊಳೆಯೊ 3 ಕಡಲಶಯನನೆ ಶ್ರೀಶ | ಕಡಗೋಲ ಕೈ ಪಡುಗಡಲ ತೀರದಿ ವಾಸ | ಕಮಲೇಶ ನಾ ನಿ- ನ್ನಡಿಯ ಕಂಡೆನು ನಾಶ | ರಹಿತನೆ ಪ್ರಕಾಶ ಎಡೆಬಿಡದೆ ನಿನ್ನಸ್ಮರಿಪ ಧ್ಯಾನವ ಕೊಡುತ ಮಧ್ಯದಿ ತಡೆವ ಸಂಸೃತಿ ತಡೆದು ಸಂತ ಚಿಂತನೆಯ ದೃಢ ಒಡಲೊಳಗೆ ನೆಲೆಸಯ್ಯ ಬಿಡದೆ ಪತಿ ಸತಿ ಪಿತ ಕಡಲವಾಸನೆ ಕಡಲ ಬಂಧನ ಕಡಲ ಮಧ್ಯದಿ ಪುರವ ರಚಿಸಿದೆ ಕಡು ದಯಾಂಬಯಧೆ ಕಾಯೊ ಸತತ 4 ಅಷ್ಟಯತಿ ನುತಪಾದ | ಸುಖ ತೀರ್ಥ ಹೃದಯ ದೀಷ್ಟಿತನೆ ಸನ್ಮೋದ | ಸಜ್ಜನರ ಮನದಾ ಭೀಷ್ಟವೀವ ಪ್ರಮೋದ | ಕರುಣಿ ಸುಪ್ರಸೀದ ಕೊಟ್ಟೆ ಮನು ಮುನಿಗಳಿಗೆ ಜ್ಞಾನವ ತುಷ್ಟಿಪಡಿಸುತÀ ಸುರರ ಸುಧೆಯಲಿ ಕುಟ್ಟಿ ಅಸುರನ ಕೋರೆದಾಡಿಲಿ ಕುಟ್ಟಿ ಅರಸರ ಕಟ್ಟಿ ಜಟೆಯನು ಮಟ್ಟಿ ಕಂಸನ ಬಿಟ್ಟು ವಸನವ ದಿಟ್ಟ ಕಲ್ಕಿ ಗೋಪಾಲಕೃಷ್ಣ ವಿಠ್ಠಲನೆÀ ಶ್ರೀ ಉಡುಪಿಲೋಲ5
--------------
ಅಂಬಾಬಾಯಿ
ಕಂಡೆ ಕಂಡೆನು ಸ್ವಾಮಿಯ ಸುಪ್ರೇಮಿಯಾ ಪ ಕಂಡೆ ಕಂಡೆನು ಕೃಷ್ಣರಾಯನ ಪುಂಡರೀಕ ದಳಾಯತಾಕ್ಷನ ಪಾಂಡವಪ್ರಿಯ ಪಾರ್ಥಸಖನ ಉ ದ್ದಂಡ ಮಹಿಮ ಸುರೇಂದ್ರವಂದ್ಯನ ಅ.ಪ. ಕನಕ ನವಮಣಿ ಖಚಿತ | ವಾಗಿಹ ಸಿಂಹಾ ಸನದೊಳು ಸಲೆ ಶೋಭಿತ | ಸುರುಚಿರ ದಿವ್ಯ ಘನನೀಲನಿಭರಂಜಿತ | ನಿರ್ಮಲಗಾತ್ರ ಕುಂಡಲ ಮಣಿ ಗಣದ ಹಾರಾದಿ ಬಹು ಭೂ ಷಣಗಳನುಪಮ ಕಾಂತಿಯಿಂದಲಿ ಮಿನುಗುವತಿ ಲಾವಣ್ಯ ಮೂರ್ತಿಯ 1 ಕೋಟಿ ಮನ್ಮಥರೂಪನ | ಶ್ರೀಕೃಷ್ಣನ ಹಾಟಕಾಂಬರಧಾರನ | ಕರುಣಾಮಯ ಕಂಬು ಕಂಠನ ಆಟಮಾತ್ರದಿ ಪ್ರಬಲ ದೈತ್ಯ ಮ ಹಾಟವಿಯ ನಿರ್ಧೂಮಗೈದನ ಖೇಟವಾಹನನೆನಿಪ ತ್ರಿಜಗದಿ ಸಾಟಿಯಿಲ್ಲದ ದೇವದೇವನ 2 ಮೆರೆವ ದ್ವಾರಕಾಧೀಶನ | ದ್ರೌಪದಿದೇವಿ ಮೊರೆ ಕೇಳಿ ಸಲಹಿದನ | ಭಜಿಪರ ಅವ ಸರಕೊದಗುವ ದೇವನ | ಶ್ರೀ ಕೃಷ್ಣನ ತರಳತನದಲಿ ಗೋಕುಲದಿ ತಾ ಪರಿಪರಿಯ ಲೀಲೆಗಳ ತೋರಿದ ಪರಮ ಪುರುಷನ ಕರಿಗಿರೀಶನ ಸರಿಯಧಕರಿಲ್ಲದ ಸುರೇಶನ 3
--------------
ವರಾವಾಣಿರಾಮರಾಯದಾಸರು
ಕಂಡೆ ನನ್ನನು ಕಾಯ್ವನೆಂಬುದ ಕಂಡೆ ಪಾವನನಾದುದಪುಂಡರೀಕದಳಾಯತಾಕ್ಷನೆ ಗಂಡುಮಾಡುವ ಗೂಢವ ಕಂಡೆಕಂಡೆ ಪ.ಮಲಿನವೆಂಬುದು ಮನಕೆ ತೋರಲು ಮಲಿನ ಹೇತುವು ಮೂಡಲುಮಲಿನಕಳುಕುತಲಿದ್ದ ಸಮಯಕೆ ಬಲುಹಿನರಿಕೆಯ ಬೀರಲುಮಲಿನವೇ ಹುಸಿಯೆಂಬ ನಿಶ್ಚಯ ಬಲಿದು ಬಲು ಹುರಿಯಾಗಲುಕಲಕಿ ಸಂಶಯ ಕಡೆಗೆ ಜಾರಲು ನಿಲುಕಿ ನೀನಿದಿರಾಗಲು 1ಶುದ್ಧವೆಂಬುದಶುದ್ಧವೆಂಬುದು ಬುದ್ಧಿಕಲ್ಪಿತಮಾತ್ರವುಇದ್ದು ಸುತ್ತಲು ಈಶನಂತಿರೆ ಹೊದ್ದುವನ್ಯವದಾವದುಶುದ್ಧ ಶ್ರೀಹರಿ ಪೂರ್ಣ ಮಿಕ್ಕಿನ ಬದ್ಧನೆಂಬುದೆ ಭ್ರಾಂತಿಯುಅದ್ವಯಾನಂದಾಬ್ಧಿ ಯೆಂಬೀ ನಿರ್ಧರವ ನೆರೆ ತೋರಲು 2ಅಳುಕದಿರು ನಾ ವಿಶ್ವವಾಗಿಯೆ ಹೊಳೆದು ತೋರಿದೆನೊಬ್ಬನೇಬಳಸಬೇಡತಿಭೀತಿಯೆಂಬುದ ತಿಳಿದು ನೋಡೆಂದರುಹಿದೆಹುಳುಕು ತಾನದು ಹೊಂದದೆಂದಿಗು ಸುಳಿದು ಶುದ್ಧನ ಮಾಡಿದೆಒಳಗೆ ನೀನಿಹೆ ನಲಿದು ತಿರುಪತಿ ನಿಳಯ ವೆಂಕಟನಾಥನೆ 3ಕಂ||ಇಂತೀ ಭಾವನೆಗೈಯುವುದೆಂತೊದಗಿದುದೆನಲು ಸದ್ಗುರುವ ಕರುಣವು ತಾಬಂತೆನಗೆ ತಿರುಪತೀಶನೆಸಂತೋಷದಿ ವಾಸುದೇವ ಯತಿಯಾರ್ಗೀಯಲ್‍ಓಂ ದಯಾನಿಧಯೇ ನಮಃ
--------------
ತಿಮ್ಮಪ್ಪದಾಸರು
ನೊಂದು ಬಂದೆನೊ ಕಾಂತೇಶ | ಕೈಯನೆ ಪಿಡಿಯೊ ಮಂದಭಾಗ್ಯಳ ಜೀವೇಶ ಪ. ಅಂದು ಶ್ರೀ ರಾಮರ ಸಂದೇಶವನ್ನೆ ಭೂ- ನಿಂದನೆಗೆ ಅರುಹುತಲಿ ಬಹು ಆನಂದಪಡಿಸಿದ ವಾನರೇಶ ಅ.ಪ. ಶೌರಿ | ಭಕ್ತರ ಕಾಯ್ವ ದುರಿತದೂರನೆ ಉದಾರಿ ಚರಣಕ್ಕೆ ನಮಿಸುವೆ ಹರಿಗೆ ಪರಮಾಪ್ತನೆ ದುರಿತ ತರಿಯುತ ಪೊರೆಯೊ ಗುರುವರ ರಾಮಕಿಂಕರ 1 ಗುರುಕರುಣದ ಬಲದಿ | ಅರಿತೆನೊ ನಿನ್ನ ಚರಣ ನಂಬಿದೆ ಮನದಿ ಪರಿ ಭವಕ್ಲೇಶ ಪರಿಯ ಬಣ್ಣಿಸಲಾರೆ ಹರಿವರನೆ ದಯಮಾಡು ಶ್ರೀ ಹರಿ ದರುಶನವನನವರವಿತ್ತು 2 ಕಾಂತನ ಅಗಲಿರಲು | ಚಿಂತೆಯಲಿ ಭೂ ಕಾಂತೆ ವನದೊಳಗಿರಲು ಸಂತೋಷದಿಂ ರಾಮನಂತರಂಗವನರುಹಿ ಸಂತಸವಪಡಿಸುತಲವನಿಸುತೆಯ ನಿಂತೆ ರಾಮರಿಗ್ಹರುಷ ತೋರಿ 3 ದ್ರುಪದ ಸುತೆಯಳ ಕೀಚಕ | ದುರ್ಮನದಲಿ ಅಪಮಾನಪಡಿಸೆ ದುಃಖ ತಪಿಸಿ ನಿನ್ನನು ಬೇಡೆ ಆ ಪತಿವ್ರತೆ ಸತಿ ಕುಪಿತದಿಂದಲಿ ಖಳನ ಕೊಂದೆ ಅಪರಿಮಿತ ಬಲಭೀಮ ಪ್ರೇಮ 4 ಮಿಥ್ಯಾವಾದದ ಭಾಷ್ಯಕೆ | ಸುಜ್ಞಾನಿಗಳ್ ಅತ್ಯಂತ ತಪಿಸುತಿರೆ ವಾತಜನಕನಾಜ್ಞೆ ಪ್ರೀತಿಯಿಂದಲಿ ತಾಳಿ ಘಾತುಕರ ಮತ ಮುರಿದ ಮಧ್ವನೆ ಖ್ಯಾತಿ ಪಡೆದೆÀ ಸಿದ್ಧಾಂತ ಸ್ಥಾಪಿಸಿ 5 ಪ್ರಾಣಪಾನವ್ಯಾನ | ಉದಾನ ಸ ಮಾನ ಭಾರತಿ ಕಾಂತನೆ ಜ್ಞಾನಿಗಳಿಗೆ ಪ್ರೀತ ಜ್ಞಾನ ಭಕ್ತಿಪ್ರದಾತ ದೀನಜನ ಮಂದಾರ ಕಾಯೊ ದೀನಳಾಗಿಹೆ ಕೈಯ ಮುಗಿವೆ 6 ನೋಯಲಾರೆನೊ ಭವದಿ | ಬೇಗನೆ ತೋರೊ ಧ್ಯೇಯ ವಸ್ತುವ ದಯದಿ ವಾಯುನಂದನ ನಿನ್ನ ಪ್ರಿಯದಿಂ ನಂಬಿದೆ ಕಮಲ ದ- ಳಾಯತಾಕ್ಷನ ಮನದಿ ತೋರಿ7 ಹರಣ ನಿನಗೊಪ್ಪಿಸಿದೆ | ಸುರವಂದಿತ ಕರೆದು ಮನ್ನಿಸಿ ಕಾಪಾಡೊ ಸಿರಿವರನನು ಹೃತ್ಸರಸಿಜದಲಿ ತೋರೊ ಧರೆಯ ವಸ್ತುಗಳ್ ಮಮತೆ ತೊರೆಸು ಹರಿಯ ನಾಮಾಮೃತವನುಣಿಸು 8 ಈ ಪರಿಬಂದೆ ಅನಿಲ | ನಿನ್ನೊಳು ವಾಸ ಗೋಪಾಲಕೃಷ್ಣವಿಠ್ಠಲ ಶ್ರೀಪತಿ ಕೃಪೆಯಿಂದ ನೀ ಪ್ರೀತನಾಗುತ ಕೈಪಿಡಿದು ಸಂತೈಸು ಕರುಣದಿ ಭಾಪುರೇ ಕದರುಂಡಲೀಶ 9
--------------
ಅಂಬಾಬಾಯಿ
ಶ್ರೀಹರಿಸ್ತುತಿ ಅಪ್ಪವೆಂಕೋಬನ ನೇತ್ರದಲಿ ನೋಡಿ ಪವಿತ್ರಳಾದೆನೋ ಇಂದಿಗೆ ತಪ್ಪುಗಳೆಲ್ಲ ನಿನಗರ್ಪಿಸುವೆ ನಾನೀಗ ಒಪ್ಪಿಕೋಬೇಕೋ ತಿಮ್ಮಪ್ಪ ಕರುಣಾನಿಧಿಯೆ ಹೆದÀರದೆ ಭೃಗುಋಷಿಯು ಒದೆಯೆ ಪಾದಗಳಿಂದ ಎದೆಯ ಮೇಲಿರುವ ಲಕ್ಷ್ಮಿ ಕದನಮಾಡುತವೆ ಕೊಲ್ಲಾಪುರಕೆ ನಡೆತರಲು ಒದಗಿ ವೈಕುಂಠ ಬಿಟ್ಟು ಯದುನಾಥ ಯಾರಿಲ್ಲದಂತೆ ಗುಡ್ಡವ ಸೇರೆ ಇದು ನಿನಗೆ ಸದನಾಯಿತೊ ದೇವ 1 ಹುತ್ತಿನೊಳಗಡಗಿ ನೀ ಗುಪ್ತದಿಂದಿರುತಿರಲು ಉತ್ತಮ ಗೋವು ಬಂದು ನಿತ್ಯದಲ್ಲಿ ಕ್ಷೀರವನು ಕರೆಯೆ ಗೋವಳನಿಂದೆ ನೆತ್ತಿಯನೊಡೆದುಕೊಂಡು ಸಿಟ್ಟಿನಿಂದಲಿ ಚೋಳರಾಯಗೆ ಶಾಪವನು ಕೊಟ್ಟು ಕಿರೀಟವನು ಇಟ್ಟು ಮೆರೆಯುವ ದೇವ 2 ಮಾಯಾರಮಣನೆ ನಿನ್ನ ಗಾಯದೌಷಧಕ್ಹೋಗಿ ಭೂರಮಣನ್ವರಾಹನಿಂದ ನೂರುಪಾದ ಭೂಮಿಕೊಟ್ಟರೆ ಸಾಕೆಂದು- ಪಾಯದಿಂದದನ್ವ್ಯಾಪಿಸಿ ತಾಯಿ ಬಕುಳಾದೇವಿಯಿಂದ ಪೂ ಜೆಯಗೊಂಬೊ ಶ್ರೀಯರಸು ನಿನಗೆ ಸರಿಯೆ ದೇವ 3 ನಾಟಕಧಾರಿ ಕಿರಾತರೂಪವ ಧರಿಸಿ ಬೇಟೆಗೆನುತಲಿ ಪೋಗಲು ತೋಟದಲಿ ಚೆಲ್ವೆ ಪದ್ಮಾವತಿಯ ಕಡೆಗಣ್ಣ ನೋಟದಲಿ ಮನಸೋಲಿಸಿ ಬೂಟಕತನದಿ ಜಗಳಾಟವನ್ನೆ ಮಾಡಿ ಪಾಟುಬಟ್ಟು ಕಲ್ಲಲೇಟುತಿಂದೆಯೋ ದೇವ 4 ಗದಗದನೆ ನಡುಗುತಲಿ ಕುದುರೆಯನು ಕಳಕೊಂಡು ಪದ್ಮಾವತಿ ವಾರ್ತೆಯನ್ನು ಬಳಿಯ ಲಿದ್ದ ಬಕುಳಮಾಲಿಕೆಗೆ ಬೋಧಿಸಿ ಕಳಿ ಸಿದಾಕಾಶನಲ್ಲಿ ಚದುರಮಾತಿನ ಚಪಲ ಕೊರವಂಜಿ ನೀನಾಗಿ ಕಣಿಯ ಹೇಳಲು ಎಲ್ಲಿ ಕಲಿತೆಯೊ ಮಹದೇವ5 ಬಂಧುಬಳಗವ ಕೂಡಿ ಭಾರಿ ಸಾಲವ ಮಾಡಿ ಕರ ವೀರದಿಂದೆ ಅಂಡಲೆದು ಕರೆಸಿ ಕಾಣುತಲಿ ಲಕ್ಷ್ಮಿಯನಪ್ಪಿ ಕೊಂಡು ಪರಮ್ಹರುಷದಿಂದ ಮಂದಗಮನೆಯೆ ನಿನ್ನ ಮಾತುಲಾಲಿಸಿ ಮಾಡಿ ಕೊಂಡೆ ಪದ್ಮಾವತಿಯ ಅಂದೆಯೊ ಎಲೆ ದೇವ 6 ಆಕಾಶರಾಜ ಅನೇಕ ಹರುಷದಿ ಮಾಡೆ ತಾ ಕನ್ಯಾದಾನವನ್ನು ಹಾಕಿದ ರತ್ನಮಾಣಿಕ್ಯದ ಕಿರೀಟವನು ಬೇಕಾದಾಭರಣ ಭಾಗ್ಯ ಸಾಕಾಗದೇನೊ ಬಡವರ ಕಾಡಿ ಬೇಡುವುದು ಶ್ರೀಕಾಂತ ನಿನಗೆ ಸರಿಯೆ ದೇವ 7 ಹೇಮಗೋಪುರದಿ ವಿಮಾನ ಶ್ರೀನಿವಾಸ ದೇವರನು ನೋಡಿ ನಮಿಸಿ ಕಾಮಿಸಿ ಕಂಡೆ ಹೊನ್ನ್ಹೊಸ್ತಿಲು ಗರುಡ ಗಂಬದ ಸುತ್ತ ಪ್ರಾಕಾರವೊ ಸ್ವಾಮಿಪುಷ್ಕರಣಿಯಲಿ ಸ್ನಾನ ಪಾನವ ಮಾಡಿ ನೋಡಿದೆನು ನಿನ್ನ ಭಕುತರ ದೇವ 8 ಪÀನ್ನಗಾದ್ರಿ ವೆಂಕಟನ್ನ ರಥ ಶೃಂಗಾರ ವರ್ಣಿಸಲಳವೆ ನಮಗೆ ಕಣ್ಣಾರೆಕಂಡೆ ಗರುಡೋತ್ಸವದಲಂಕಾರ ಇನ್ನೆಲ್ಲು ಕಾಣೆ ಜಗದಿ ಎನ್ನ ಕಿವಿಗಾನಂದವೊ ದೇವ 9 ಪಾದದಲ್ಲೊಪ್ಪೋ ಪಾಗಡ ರುಳಿ ಕಿರುಗೆಜ್ಜೆ ಮೇಲಲೆವೊ ಪೀತಾಂಬರ ಮಾಲೆ ಶ್ರೀವತ್ಸದ್ಹಾರ ಮೇಲಾದ ಸರಿಗೆ ಸರ ಪದಕವೊ ಕಮಲ- ದಳಾಯತಾಕ್ಷನ ನೋಡಿದೆ ದೇವ 10 ಕರಗಳಲ್ಲಿಟ್ಟು ಕಂಕಣ ಕಡಗ ಭುಜಕೀರ್ತಿ ವರ ಶಂಖ ಚಕ್ರಧಾರಿ ಗಿರಿಯ ಭೂವೈಕುಂಠವೆಂದು ತೋರುತ ನಿಂತ ಶಿರದಿ ಕಿರೀಟ ಧರಿಸಿ ಬಿಳಿಯ ತ್ರಿನಾಮ ಭೀಮೇಶಕೃಷ್ಣನ ಮುಖದಿ ಹೊಳೆವ ಮೂರ್ತಿಯ ನೋಡಿ ಹೇ ದೇವ11
--------------
ಹರಪನಹಳ್ಳಿಭೀಮವ್ವ