ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾದುಕೆಗಳ ದಯಪಾಲಿಸು ಪರಮ ಪಾವನ ಮಹಿಮ ಸುದೇವ ಲಲಾಮ ಪ ನೀ ದಯದಿಂ ತವಪಾದ ಪಯೋಜಗ ಳಾದರದಲಿ ಕೊಡು ಹೇ ದಯಧಾಮ ಅ.ಪ. ಅಜನವ್ಯಯನಪ್ರಾಕೃತ ಮಹಿಮನು ಅಜನಪಿತನು ತನ್ನಿಚ್ಛೆಯೊಳು ಅಜಸುತ ದಶರಥ ಸುತನೆಂದೆನಿಸಿದ ತ್ರಿಜಗ ನೋಡೆ ಆಶ್ಚರ್ಯದೊಳು 1 ತುಂಗಮಹಿಮ ತವ ಮಂಗಳಕರ ಚರ ಣಂಗಳು ಈ ತ್ರಿಜಗಂಗಳ ಪಾಲಿಪುವು ಅಂಗಜಕೋಟಿ ಶುಭಾಂಗನೆ ತವಪದ ಭೃಂಗನೆನಿಸಿ ಕೃಪಾಪಾಂಗದಿ ಈಕ್ಷಿಸೊ ಮಂಗಳಕರ ರಘುಪುಂಗವ ಕರಿಗಿರಿ ರಂಗ ನೃಸಿಂಹ ಸೀತಾಂಗನೆಯರಸ 2
--------------
ವರಾವಾಣಿರಾಮರಾಯದಾಸರು