ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಧ್ಯಾಯ ಒಂದು ಜಯ ವಿಬುಧನುತರ ಚರಣ ಜಯತು ನಾಗಾಭರಣ ಜಯ ಭಕ್ತ ಜನ ಶರಣ ಜಯ ದುಃಖಹರಣ 1 ಜಯತು ಖಳಕೃತಕದನ ಜಯಜಯತು ಜಿತಮದನ ಜಯ ಜಯತು ಸುಖಸದನ ಜಯ ಪಂಚವದನ2 ಜಯತು ಶ್ರೀಶಕೈಲಾಸ ಜಯ ಭಜಕವಿಶ್ವಾಸ ಜಯ ಅನಂತಾದ್ರೀಶ ಪ್ರಿಯಪಾರ್ವತೀಶ 3 ಪದ ಮುಂಚೆ ನುತಿಸುವೆ ಭಕುತಿಯಿಂದಲಿ ಪಂಚವದನನ ಪಾದಪಂಕಜ ಚಂಚಲಾಗದಲಿರಲಿ ಮನ ಮತಿ ಮುಂಚೆ ಕೊಡುಯೆಂದು ಹಿಂಚೆ ಕುಲ ದೇವಾದಿ ಪದಯುಗ ವಂಚನೆಯು ಇಲ್ಲದಲೆ ನುತಿಸುವೆ ಹಂಚಿಕಿಂದಲಿ ಕುಶಲಬುದ್ಧಿ ಪ್ರಪಂಚ ಕೊಡುಯೆಂದು 1 ಮನಸಿಜನ ಗೆದ್ದವರು ಮೇದಿನಿಯ ಹುಡಿಕಿದರಿಲ್ಲಾ ಮತ್ತೀಮನಸು ಗೆದ್ದವರುಂಟೆಯೆಲ್ಲರಿ ಗನುಭವಾಗಿಹುದು ಮನಸಿಜನ ಗೆದ್ದಂಥ ರುದ್ರನು ಮನಕೆ ತಾ ಅಭಿಮಾನಯಾಗಿಹ ನೆನುತ ಮೊದಲಾತನನ ನುತಿಸಿದೆ ಮನಸಿನೊಳಗಿಟ್ಟು 2 ಸಾರಲಿಂಗ ಪುರಾಣದರ್ಥದ ಸಾರಿ ತಿಳುವುತ ಮತ್ತೆ ಗ್ರಂಥ ವಿ ಚಾರ ಮಾಡುತ ಅದರ ಅರ್ಥವ ಪೂರ್ಣ ತಿಳಕೊಂಡು 'ಶ್ರೀರತಾನಂತಾದ್ರಿ' ರಮಣನ ಸಾರ ಕೃಪೆಯಿಂದಲೆಯೆ ಪೇಳುವೆ ಪಾರ್ವತೀಶಗೆ ಪ್ರೀತಿಕರ ಶಿವ ಪಾರಿಜಾತವನು 3 ಪದ ಪೂರ್ವದಲ್ಲಿ ಪಾರ್ವತಿಯು ಪರ್ವತಶ್ರೇಷ್ಠ ಹಿಮ ಪರ್ವತದ ಮಧ್ಯದಲ್ಲಿ ಸರ್ವಗುರು ಕೈಲಾಸ ಪಾರ್ವತೀಶನ ಮನ:ಪೂರ್ವಕದಿ ಬಯಸುತಲ ಪೂರ್ವ ತಪ ಮಾಡುತಿರುವಳಲ್ಲೆ ಪಾರ್ವತಿಯ ಕಷ್ಟ ಹಿಮಪರ್ವತನು ತಾ ನೋಡಿ ಸರ್ವ ಕಾರ್ಯವ ಬಿಟ್ಟು ಇರುವ ಬಲು ಚಿಂತೆಯಲಿ ಸರ್ವಸಂಪನ್ನಳಾಗಿರುವಳೆನ್ನ ಮಗಳು ಈ ಪಾರ್ವತಿಗೆ ತಕ್ಕ ವರನಿರುವನಾರೆಂದು 1 ಬಂದನಾಗಲ್ಲವನ ಮಂದಿರಕೆ ನಾರದನು ಮುಂದೆ ಗಿರಿರಾಜ ಅಲ್ಲಿಂದ ಆತನಕಂಡು ಇಂದು ಇಲ್ಲಿಗೆ ನೀವು ಬಂದು ಕಾರಣವೇನುಯೆಂದು ಕೇಳಿದನು ಅಂದ ಮಾತನ್ನು ಕೇಳಿ ಮುಂದೆ ಮುನಿರಾಜ ತಾ ಮಂದಹಾಸದಿ ನಗುತವೊಂದೊಂದು ಕಥೆ ಪೇಳಿ ಛಂದದಲಿ ಮನಸಿಗಾನಂದ ಬಡಿಸುತ ನುಡಿದ ಬಂದ ಕಾರ್ಯವ ಅವನ ಮುಂದೆ ವಿಸ್ತರದಿ 2 ಪದ ತಿಳಿಯೋ ನೀ ಗಿರಿರಾಜ ನಾ ಬಂದ ಕಾರ್ಯವ ತಿಳಿಯೋ ನೀ ಗಿರಿರಾಜ ಭೋರಾಜರಾಜಾ ತಿಳಿಯೋ ನಿನಗೊಬ್ಬಳಿಯ ಬಂದಿಹ ನಳಿಯನಾಗಿ ಮುಖಕಳೆಯು ಉಳ್ಳವ ಇಳೆಯೊಳಿಂಥಾ ಅಳಿಯನ ಸಮ ಅಳಿಯನಿಲ್ಲ ಕಾಲ್ಗಳೆಯುದಲೆ ಇರು ಪ ಹರಿಯಿರುವ ಪ್ರಖ್ಯಾತಾ ಸರ್ವರಿಗೆ ಆತನೆ ದೊರೆಯೆನಿಸಿಕೊಂಬಾತಾ ಕರಿರಾಜ ಕೂಗುತ ಕರೆಯಲೊದಗಿದನಾತಾ ತನ್ನ ಸ್ಮರಿಸಿದವರನು ಮರೆಯದಲೆ ಪೊರೆವಾತಾ ಅನಾಥಾನಾಥ ಧರೆಯೊಳಗೆ ಶ್ರೀಹರಿಯ ಮೂರ್ತಿಯ ಸರಿಯುಯಿಲ್ಲವು ಮರೆಯದಲೆ ಆ ಸಿರಿಯ ರಮಣನ ಕರೆಯ ಕಳಿಸುತ ಹಿರಿಯ ಮಗಳನು ಹರಿಗೆ ಅರ್ಪಿಸು1 ಬಡವನಲ್ಲವು ಆತಾ ಬಹುಬಡವ ಭಕ್ತರ ದೃಢವ ನೋಡುವನಾತಾ ತಾ ಬಿಡದೆ ಕರವನು ಪಿಡಿವ ಸ್ನೇಹ ಸಮೇತಾ ಬೇಡಿದ್ದು ತ್ವರದಲಿ ಕೊಡುವನವ ಬಹು ದಾತಾ ಲಕ್ಷ್ಮಿಯಸತ್ತಾ ದೃಢವಿರಲಿ ಮನ ಪೊಡವಿರಲಿ ಉಂಬುಡುವ ಮಗಳನು ತಡವು ಮಾಡದೆ2 ಕೊಡುವದುಚಿತವು ಒಡವೆಗಳು ಬಹಳಿಡುವುತಲೆ ಸುಖಪಡುವಳಾಕೆಯು ಎಂಥವನು ಅವ ತಾನು ಎಂಬಂಥ ಮನಸಿನ ಭ್ರಾಂತಿ ಬಿಡು ಎಲೋ ನೀನು ಅತ್ಯಂತವಾಗಿಹ ಶಾಂತ ಮೂರುತಿ ತಾನು ಎಂತೆಂಥವರಿಗವ ನಂತ ತಿಳಿಯದು ಇನ್ನು ಮತ್ಹೇಳಲೇನು ಇಂಥ ಶ್ರೀಮದನಂತಾದ್ರೀಶನು ಕಾಂತಿಯಿಂದಿರುವಂಥ ಮಗಳಿಗೆ ನಿಶ್ಚಿಂತೆಯಿಂದಿರು 3 ಪದ ಮುನಿಯ ಮಾತನು ಕೇಳಿ ಮನಸಿನೊಳು ಹಿಗ್ಗುತಲೆ ಮನದ ಚಿಂತೆಯ ಬಿಟ್ಟು ಮನಸಿಜಪಿತನು ಎನ್ನ ಮನಿ ಅಳಿಯನಾದ ಎನ್ನ ಜನುಮ ಸಾರ್ಥಕವಾಯಿ ತೆನುತ ತಿಳಿದನು ತಾನು ಘನ ಹಿಮಾಚಲನು ಅನುದಿನವು ತನ್ನಲ್ಲಿ ಅನು ಕೂಲವಾಗುತಲೆ ತನಗೆ ಹಿತಮಾಡುತಿಹ ಜನರೊಳಗೆ ಮ- ತ್ತಾಪ್ತ ಜನರನ್ನು ಕೇಳದಲೆ ಅನುಮಾನ ಬಿಟ್ಟು ಹೀಗೆನುತ ಮಾತಾಡಿದನು ಮುನಿಯ ಮುಂದೆ ಪದ ಕೊಡುವೆನು ಆ ವಿಷ್ಣುವಿಗೆ ಮಗಳನ್ನು ಕೊಡುವೆನು ಕೊಡುವೆನು ಸಂತೋಷ ಬಡುವೆನಾತನ ಪಾದಾ ಹಿಡಿವೆನು ಚಿಂತೆಯ ಬಿಡುವೆನು ಮಗಳನ್ನು ಪ ನಾರದ ನಿನಮಾತು ಇನ್ನು ಸರಿ ಬಾರದು ಆರಿಗೆ ಮುನ್ನ ನೀರದ ವರ್ಣನ ತೋರಿದ ಬುದ್ಧಿ ವಿ ಶಾರದ ನಿನ್ನ ಮಾತು ಮೀರದೆ ಮಗಳನ್ನು ಕೊ....1 ನಿನ್ನ ಮಹಿಮೆ ಬಲ್ಲೆ ನಾಲ್ಕುಲೋಕ ಮಾನ್ಯರಿಗತಿಮಾನ್ಯ ನೀನು ನಿನ್ನ ಚಿತ್ತಕೆ ಬಂದರಿನ್ನೇಕೆ ತಡಬಹು ಚೆನ್ನಾತ ಆತಗೆ ಮನ್ನಿಸಿ ಮಗಳನ್ನು ಕೊ....... 2 ಭಾಷೆಯು ಅದು ಸುಳ್ಳಲ್ಲ ಲೇಸಾಗಿ ನಾನಿನ್ನ ಭಾಷೆಗೆ ಮೆಚ್ಚಿ ಉಲ್ಲಾಸದಿ `ಅನಂತಾದ್ರೀಶಗೆ ' ಮಗಳನ್ನು ಕೊಡುವೆನು3 ಪದ ಬ್ರಹ್ಮಪುತ್ರ ಕೇಳಿ ಸಂಭ್ರಮ ಬಡವುತ ನಮ್ಮ ಕಾರ್ಯ ಆಯಿತೆಂದು ಸುಮ್ಮನಿರುವುತ 1 ಒಮ್ಮಿಂದೊಮ್ಮೆಲೆದ್ದು ಮತ್ತೊಮ್ಮೆ ಹೇಳುತ ರಮಿಸದಲೆ ನಡೆದ ತನ್ನ ಜಿವ್ಹೆ ತೋರುತ 2 ಹೋಳು ತಂಬೂರಿ ತಂತಿಗಳನು ಮೀಟುತ ಚೆಲುವ ಮುನಿಯ ನಡೆದ ಬಾಗಿಲವ ದಾಟುತ 3 ಚೆಂದವಾಗಾನಂದ ಭಾರದಿಂದ ಮಣಿವುತ ಮುದೆ ಪಾರ್ವತಿಯ ಬಳಿಗೆ ಬಂದು ಕುಣಿಯುತ 4 ಮುನ್ನ ನುಡಿದ ಮದುವೆಯ ಸುದ್ದಿಯನು ನಗವುತ ಚೆನ್ನಿಗ`ನಂತಾದ್ರೀಶ'ನನ್ನು ಸ್ಮರಿಸುತ 5 ಪದ ಕೇಳಮ್ಮ ಹೊಸಸುದ್ದಿ ಪಾರ್ವತಿ ನಿನಗೆ ಹೇಳಬಂದೆನು ಎನಗಿದು ಪ್ರೀತಿಪ ಪಂಕಜನಾಭ ಬರುವನಂತೆ ನಿನ್ನ ಕಂಕಣಕಯ್ಯ ಪಿಡಿವನಂತೆ ಪಂಕಜಮುಖಿಯೆ ನಿಶ್ಚಯವಂತೆ ನಿ ಶ್ಯಂಕೆಯಿಂದಿರು ಯಾತಕೆ ಚಿಂತೆ 1 ನಕ್ಕು ಆಡುವನಲ್ಲವು ನಾನು ಎ ನ್ನಕ್ಕಯ್ಯ ನಿನಗೆ ಹಿತ ಪೇಳುವೆನು ಮಿಕ್ಕ ಮಾತುಗಳಿಂದ ಫಲವೇನು ನಿನ್ನ ತಕ್ಕ ಪುರುಷ ಅವ ತಿಳಿ ನೀನು 2 ಶ್ರೀಮದನಾಂತಾದ್ರಿವಾಸಗೆ ನಿನ್ನ ನೇಮಿಸಿದ ಹಿಮವಂತನು ಈಗ ಕೋಮಲಾಂಗಿಯೇ ಎನ್ನ ಮನಸಿಗೆ ಬಂತು ಈ ಮಾತು ಸತ್ಯವಾಗಲಿ ಬೇಗ 3 ಪದ ಪರಿ ಸುದ್ದಿಯುಂಟೆಂದು ಪೇಳುತಲೆ ಟಣ್‍ಟಣನೆ ಜಿಗಿವುತು ತ್ಕಂಠzಲ್ಲಿ ಅಲ್ಲಿಂದ ಹೊರಟು ಮುನಿಬಂದು ವೈ ಕುಂಠದಲಿ ತಾ ನುಡಿದ ಉಂಟಾದ ಸುದ್ದಿ ವೈಕುಂಠಪತಿಗೆ ಎಂಟೆಂಟು ಕಳೆಯಿಂದ ಉಂಟಾದ ಪಾರ್ವತಿಯ ಗಂಟು ಹಾಕಿದೆಯೆನಲು ತಂಟಕನೋ ನೀ ಕಲಹಗಂಟಕನೋ ಸರಿಯಿನ್ನು ಭಂಟನಹುದೆಂದು ವೈಕುಂಠಪತಿನಕ್ಕ 1 ನಾರದನ ಮಾತು ಸರಿಬಾರದೆ ಪಾರ್ವತಿಯು ತೀರದಂಥಾ ದು:ಖವಾರಿಧಿಯಲಿ ಮುಳುಗಿ ಸಾರಿದಳು ತನ್ನೊಳಗೆ ಘೋರಾದ ಚಿಂತೆ ಬಂತಾರಿದನು ಬಿಡಿಸುವರು ತೋರದೆನಗೆ ತೋರದಿರಬೇಕು ನಾ ದೂರದಲಿ ಇಲ್ಲೆ ಇರಬಾರದೆಂತೆಂದು ಸುಖ ತೋರದಲೆ ತನ್ನ ಮಾತು ಮೀರದಲೆ ಇರುವ ಸುವಿ ಶಾರದಳು ಸಖಿಯೊಡನೆ ಘೋರಾದರಣ್ಯವನು ಸೇರಿದಳು ತಾನು ಮುಂದೆ ಮತ್ತಾಕೆಯ ಮುಂದೆ ಮಾತಾಡದಲೆ ನೊಂದು ತನ್ನೊಳಗೆ ತಾ ತಂದು ಆ ವನದಲ್ಲಿ ಮುಂದೇನು ಮಾಡಲೆಂತೆಂದು ತಿಳಿಯದೆ ಮರುಗಿ ಮಂದಗಮನೆಯು ಚಿಂತೆಯಿಂದ ಮಲಗಿದಳು ಮುಂದೆ ಆ ಸಖಿ ನೋಡಿ ಸಂದೇಹ ಬಡುತ ತ್ವರ ದಿಂದ ಬದಿಯಲಿ ತಾನು ಬಂದು ಹಾ ಇದುಯೇನು ಇಂದು ಮುಖಿ ಹೀಗೆಯೆಂದೆಂದು ಮಲಗುವಳಲ್ಲ ಇಂದೇನು ಬಂತು ಇಂತೆಂದು ಚಿಂತಿಸುತ ಹೀಗೆಂದಳಾಗ 2 ಪದ ಇಲ್ಲೇಕೆ ಮಲಗಿದೆ ಹೇಳಮ್ಮ ನೀ ಇಲ್ಲೇಕೆ ಎಲ್ಲಾನು ಬಿಟ್ಟು ವನದಲ್ಲಿಯೆ ಪಾರ್ವತಿ ಮಂದಿರ ಪ ಬಿಟ್ಟು ಇಲ್ಲಿ ಮಲಗುವರೆ ನಿನಗೆ ಬಂದಿಹದೇನು ಹೇಳದಿರುವರೆ ನಿನ್ನ ತಂದೆ ತಾಯಿಗಳೆಷ್ಟು ಮರಗುವರೆ ಇಂದು ಮುಖಿಯಳೆ ಯಾರೇನಂದರೇನೆ ಗೆಳತಿ ನಿನಗೆ 1 ನಿನ್ನ ಪ್ರಾಣದ ಸಖಿನಾನಲ್ಲೆ ನಿನ ಗಿನ್ನಾರಿರುವರು ಹಿತವರು ಇಲ್ಲೆ ನಾ ನಿನ್ನ ಕಾರ್ಯವ ಮಾಡುವಳಲ್ಲೆ ಚಿನ್ನದಂಥವಳೆ ನೀ ಘನ್ನಾರಣ್ಯಕೆ ಬಂದು 2 ನಿದ್ರೆ ಬಂದಿಹುದೇನೆ ನಿನಗಿಂದು ಅಥವಾ ಬುದ್ಧಿ ಹೋಯಿತೆ ಮತ್ತೆ ನಿನ್ನದು ಇಂದು ತಿಳಿಯದು ಬುದ್ಧಿವಂತಿಯೆ ಅನಂತಾದ್ರೀಶನಾಣೆ ನಿನಗೆ 3 ಪದ ಇಂದು ಮುಖಿ ಪಾರ್ವ ತಿಯು ಹಿತದಿಂದ ಆಡಿದ ಮಾತು ಒಂದೊಂದು ಸ್ಮರಿಸುತಲೆ ಛಂದಾಗಿ ಮನಸಿಗೆ ತಂದು ನೋಡಿದಳು ಇಂದು ಯೆನ್ನ ಭಾಗ್ಯಕ್ಕೆ ತಂದೆ ತಾಯಿಗಳಿಲ್ಲ ಬಂಧು ಬಾಂಧವರಿನ್ನು ಮುಂದೆಲ್ಲಿ ಬರುವವರು ಸಂದೇಹವೇಕೆ ಸಖಿ ಯಿಂದಧಿಕ ಮತ್ತಿಲ್ಲ ವೆಂದು ದು:ಖವ ಸಖಿಯ ಮುಂದ ಹೇಳಿದಳು 1 ಪದ ಏನು ಹೇಳಲಿಸಖಿ ಇನ್ನೇನು ಹೇಳಲಿ ನಾನು ಖೂನದಿ ತಂದೆಯು ಹರಿಗೆಯೆನ್ನನು ನೇಮಿಸಿದಾ ಪ ಮೃತ್ಯುಂಜಯ ಮೃಡನೆ ಎನ್ನ ಚಿತ್ತಕೊಪ್ಪುವ ಪತಿಯು ಸತ್ಯದಿ ಆಗಲಿಯೆಂದು ಚಿತ್ತದಿ ಬಯಸುತಲೆ ನಿತ್ಯದಿ ಬಹುದಿನ ಬಿಡದಲೆ ಅರ್ಥಿಲೆ ಮಾಡಿರುವಂಥ ಪಾರ್ಥೇಶ್ವರನಾ ಪೂಜೆಯು ವ್ಯರ್ಥಾಯಿತಲ್ಲೆ 1 ನಾರದ ಮುನಿಯಿ ಮಾತು ಸಾರಿದ ನನ್ನಲಿ ಬರಿದು ಬಾರದೆನ್ನ ಮನಸಿಗೆ ಅದು ತಾರದೆ ನಾ ಬಂದೆ ಮೀರಿದ ಕೆಲಸವು ತೀರಲಾರದು ಅದು ಎಂದು ಸೇರಿದೆ ವನವನು ನಾಕಾಲೂರದೆ ಮನೆಯಲ್ಲೆ2 ಹೃದ್ರೋಗದಿ ಬಳಲುವಳಿಗೆ ನಿದ್ರೆಯೆಂಬುವದೆಲ್ಲೆ ಭದ್ರಾಂಗಿಯು ಸತಿ ನಾನು ಉದ್ರೇಕದಿ ಮೈಮರೆತು, ಹಿಮಾದ್ರಿಯು ಎನ್ನನು ಕೈಲಾ ಸಾದ್ರೀಶನ ಬಿಟ್ಟು ಅನಂತಾದ್ರೀಶಗೆ ಕೊಡುವ3 ಪದ ಪರಿ ಮಾತುನು ಕೇಳಿ ಆ ಪ್ರಾಣದ ಸಖಿ ತಾನು ಪರಿ ಮಾತಾಡಿದಳು ಆ ಪಾರ್ವತಿಯ ಮುಂದೆ ಏ ಪಾರ್ವತಿಯೇ ಬಿಡುಸಂತಾಪವ ನಿನಗೊಂದು ಹೇಳುವೆ ಆ ಪಿತಗರಿಯದೆ ನಡೆ ನೀ ತಾಪಸವನದಲ್ಲೆ 1 ಈ ರೀತಿಯ ನುಡಿ ಕೇಳಿ ಹಾರೈಸುತ ಸಖಿಕೂಡಿ ಪಾರ್ವತಿ ತಾ ನಡೆದಳು ಘೋರಾರಣ್ಯದಲಿ ಇರ್ವಳು ಆಳುPದೆÀಲಿಂಗಾಕಾರವು ಪೂಜಿಸುತಲ್ಲೆ ಚಾರ್ವಾಂಗಿಯು ತಾ ನಿದ್ರಾಹಾರವು ಇಲ್ಲದಲೆ2 ದೀನೋದ್ಧಾರಕ ಶಿವನು ತಾನೆ ಅಲ್ಲಿಗೆ ಬಂದು ಏನು ಬೇಡುವೆ ಪಾರ್ವತಿ ನೀನು ಬೇಡೆಂದ ಏನು ಧೇನಿಸುವೇ ಬಿಡು ಮಾನಿನಿಯೆ ಭಕ್ತಾ ಧೀ ನಾನಂತಾದ್ರೀಶನ ಆಣೆ ನಿನಗುಂಟು 3 ಪದ ಹರನ ಮಾತನು ಕೇಳಿ ಹರಿಣಾಕ್ಷಿ ಪಾರ್ವತಿಯು ತ್ವರದಿಂದ ಎದ್ದು ಪರಮ ನಾಚಿಕೆಯಿಂದ
--------------
ಅನಂತಾದ್ರೀಶ - ಕಥನಕಾವ್ಯಗಳು
ಏನು ಕರ್ಮವ ಮಾಡಿ ನಾ ನಿನ್ನ ಒಲಿಸಲಿ ಶ್ರೀನಿವಾಸ ಧ್ಯಾನಕೆ ನಿಲುಕದ ಜ್ಞಾನಿಗಳರಸ ನೀನು ಶ್ರೀನಿವಾಸ ಪ ಗಂಗೆಯ ತಂದು ಮಂಗಳಸ್ನಾನ ಮಾಡಿಸೆ ಶ್ರೀನಿವಾಸ ಗಂಗೆಯು ನಿನ್ನಂಗುಷ್ಟದಲ್ಲಿಹಳಲ್ಲೊ ಶ್ರೀನಿವಾಸ 1 ಮನಮೆಚ್ಚುವಂತೆ ನಿನ್ನ ಸುಮಗಳಿಂದರ್ಚಿಪೆನೆ ಶ್ರೀನಿವಾಸ ವನಜ ಪುಷÀ್ಪವು ನಿನ್ನ ನಾಭಿಯೊಳಿಹುದಲ್ಲೋ ಶ್ರೀನಿವಾಸ 2 ಅಂಗಿವಸ್ತ್ರಗಳಿಂದ ಶೃಂಗರಿಸುವೆನೆಂದರೆ ಶ್ರೀನಿವಾಸ ಅಂಗನೆ ಲಕುಮಿ ಸಕಲಾಭರಣಂಗಳಾಗಿರುವಳಲ್ಲೊ ಶ್ರೀನಿವಾಸ 3 ಅನ್ನ ಪಾನಗಳಿತ್ತು ಧನ್ಯನಾಗುವೆನೆ ಶ್ರೀನಿವಾಸ ಅನ್ನಪೂರ್ಣಿ ಷಡುರಸದನ್ನವ ಮಾಳ್ಪಳಲ್ಲೊ ಶ್ರೀನಿವಾಸ 4 ಕಡುಭಕ್ತಿಯಿಂದ ನಿನ್ನಡಿ ಸೇವೆ ಮಾಳ್ಪೆನೆ ಶ್ರೀನಿವಾಸ ಎಡಬಿಡÀದೆ ಹನುಮ ನಿನ್ನಡಿಯ ಪಿಡಿದಿಹನಲ್ಲೊ ಶ್ರೀನಿವಾಸ 5 ಜಗದುದರ ನಿನ್ನ ಬಗೆ ಬಗೆ ನಾಮಗಳ ಸ್ತುತಿಸೆ ಶ್ರೀನಿವಾಸ ಅಗಣಿತವಾಗಿಹುದು ಮುಗಿಯದಂತಿಹುದಲ್ಲೊ ಶ್ರೀನಿವಾಸ6 ಶ್ರಿಷ್ಟಿಕರ್ತ ಶ್ರೀ ರಂಗೇಶವಿಠಲನೆ ಎಂಬೆ ಶ್ರೀನಿವಾಸ ಇಷ್ಟೆಂದ ಮಾತ್ರಕೆ ಒಲಿದಿಷ್ಟವ ಸಲಿಸೈಯ್ಯಾ ಶ್ರೀನಿವಾಸ 7
--------------
ರಂಗೇಶವಿಠಲದಾಸರು
ಸಾರಿದ ಡಂಗುರ ಯಮನು ಪ ಅಘ ನಾರೇರ ಎಳತಂದು ನರಕದಲ್ಲಿಡಿರೆಂದು ಅ.ಪ. ಹೊತ್ತಾರೆ ಎದ್ದು ಪತಿಗೆ ಎರಗದವಳ ಮೃತ್ತಿಕೆ ಶೌಚ ಮಾಡದೆ ಇಪ್ಪಳಾ ಬೆತ್ತಲೆ ಕುಳಿತು ಮೈದೊಳೆವಳ ನಾದಿನಿ ಅತ್ತೆ ಮಾವನ ಬೈವವಳೆಳೆದು ತನ್ನೀರೆಂದು 1 ತಿಲಕಾಯುಧವ ಬಿಟ್ಟು ಕುಂಕುಮವಿಡುವಳ ಬೆಳಗಾದ ಕಾಲಕ್ಕೂ ಮಲಗಿಪ್ಪಳ ಮಲಿನ ವಸ್ತ್ರದಲಿ ಪತಿಯ ಬಳಿಗೆ ಪೋಗುವಳ ಕಲಹಕಾರಿಯ ಹಿಡಿದೆಳೆದು ತನ್ನಿರಿಯೆಂದು 2 ಉತ್ತಮ ಗುರುಹಿರಿಯರನು ನಿಂದಿಸುವಳ ಪೆತ್ತ ಮಕ್ಕಳ ಮಾರಿ ಬದುಕುವಳ ಪ್ರತ್ಯೇಕ ಶಯ್ಯದಿ ಮಲಗಿ ಇಪ್ಪಳ ಪಿಡಿ ದೆತ್ತ ಎಳೆದು ತಂದು ನರಕದಲ್ಲಿಡಿರೆಂದು 3 ಜಲ ಜಕ್ಕಿ ಸಾಳಿ ಕಂಬಳಿ ಬೋಳಿ ಬಕ್ಕಿ ಗೊಂ ಡಳಿ ಮೊದಲಾದವು ದೈವವೆಂದು ತಿಳಿದು ಪಿಶಾಚಿ ಎಂಜಲ ಉಂಡು ಹಿಗ್ಗುವ ಲಲನೇರಾ ಸೆಳೆದು ತನ್ನಿರೋ ಎಂದು 4 ನಾಗೇಂದ್ರ ಶಯನನ ದಿನದುಪವಾಸದ ಜಾಗರ ಮಾಡದೆ ಮಲಗಿಪ್ಪಳಾ ಭಾಗವತ ಸಚ್ಛಾಸ್ತ್ರ ಕೇಳದೆ ಉನ್ಮತ್ತ ಳಾಗಿರುವಳ ಎಳೆದು ತನ್ನಿರೆಂದು 5 ಗಂಡ ನಿರ್ಧನಿಕನೆಂದಪಮಾನ ಮಾಳ್ಪಳ ಉಂಡ ಶೇಷಾನ್ನುವನುಣಿಸುವಳಾ ಕೊಂಡೆ ಮಾತುಗಳಾಡಿ ಕಳವಳಗೊಳಿಪಳ ಮಂಡೆಗೊದಲು ಹಿಡಿದು ಎಳೆದು ತನ್ನಿರಿ ಎಂದು6 ಉಡಲಿಲ್ಲ ಉಣಲಿಲ್ಲ ಇಡಲಿಲ್ಲ ತೊಡಲಿಲ್ಲ ಸುಡಲಿಗಂಡನ ಒಗೆತನವೆನ್ನುತಾ ಹಡೆದವರನು ನುಡಿನುಡಿಗೆ ಬಯ್ಯುತಿಪ್ಪಂಥ ಕಡು ಪಾಪಿಗಳ ಹೆಡ ಮುಡಿಗಟ್ಟಿ ತನ್ನಿರಿ ಎಂದು7 ಸಾಲೆಡೆಯಲಿ ಭೇದ ಮಾಡಿ ಬಡಿಸುವಳ ನೀಲಾಂಬರವನುಟ್ಟು ಮಡಿಯೆಂಬಳ ಬಾಲಕರ ಬಡಿದಳಿಸುತಿಪ್ಪಳ ಹಿಂ ಗಾಲ ತೊಳೆಯದವಳ ಎಳೆದು ತನ್ನಿರೋ ಎಂದು8 ಪತಿಗೆ ಬೇಕಾದವರ ಅಪಮಾನ ಮಾಳ್ಪಳ ಮೃತವತ್ಸ ಗೋವಿನ ಪಾಲುಂಬಳಾ ಹುತವಾದ ಅಗ್ನಿ ತೊಳೆದು ನಂದಿಸುವಳ ಮತಿಗೇಡಿಯ ಬಿಡದೆಳೆದು ತನ್ನಿರೋ ಎಂದು 9 ಒಲಿವ ಔಷಧ ಮಾಡಿ ಪತಿಯ ಬಳಲಿಸುವಳ ಮಲಮಕ್ಕಳೊಳು ಮತ್ಸರಿಸುತಿಪ್ಪಳಾ ಕಳವಿಲಿ ಕಾಂತನ ಧನವ ವಂಚಿಸುವಳ ಗಳಕೆ ಪಾಶವ ಕಟ್ಟ ಎಳೆದು ತನ್ನಿರೋ ಎಂದು 10 ಮಿಥ್ಯಾವಾದಿಯ ಕೂಡ ಸ್ನೇಹ ಮಾಳ್ಪಳಾ ವೃತ್ತಿಲಿ ಬದುಕುವಳೆಳೆದು ತನ್ನಿರೋ ಎಂದು 11 ಲಶನು ವೃಂತಕಾದಿಗಳನು ಭಕ್ಷಿಸುವಳಾ ಸೊಸೆಯರೊಡನೆ ಮತ್ಸರಿಸುತಿಪ್ಪಳಾ ಹಸಿದು ಬಂದವರಿಗೆ ಅಶನವಿಲ್ಲೆಂಬಳಾ ಉಸಿರು ಬಿಡದಂತೆ ಎಳೆದು ತನ್ನಿರೊ ಎಂದು 12 ತುಲಸಿ ವೃಂದಾವನಕಭಿನಮಿಸದವಳ ಜಲವ ಸೋಸದೆ ಪಾನವ ಮಾಳ್ಪಳಾ ಫಲ ಧಾನ್ಯಾದಿಗಳ ನೋಡದೆ ಪಾಕ ಮಾಳ್ಪಳ ಮಳೆ ಗಾಳಿ ನಿಂದಿಪಳ ಎಳೆದು ತನ್ನಿರೋ ಎಂದ 13 ಮೀಸಲು ಮಡಿ ಎನ್ನದೆ ಭಕ್ಷಿಸುವಳ ಕೇಶಿಯೊಡನೆ ಗೆಳೆತನ ಮಾಳ್ಪಳ ದಾಸೆರಿಂದಲಿ ಪಾಕ ಪಾತ್ರೆ ಮುಟ್ಟಿಸುವಳ ನಾಸಿಕ ಬಂಧಿಸಿ ಎಳೆ ತನ್ನಿರೋ 14 ಬಾಲಕರನು ತೊಟ್ಟ್ಟಿಲೊಳಿಟ್ಟು ತೂಗುತ ಪಾಲೆರೆವುತ ಬೀಸುತ ಕಟ್ಟುತಾ ಆಲಯದೊಳು ಕೆಲಸಗಳ ಮಾಡುತ ಲಕ್ಷ್ಮೀ ಲೋಲನ ಗುಣವ ಪಾಡುವರ ಮುಟ್ಟದಿರೆಂದು15 ಅರಿಷಣ ಕುಂಕುಮ ಪುಷ್ಟಾಂಜನ ವಸ್ತ್ರಾ ಸರಸವಾಡುತ ಸುಖ ಹರಿಗೆ ಅರ್ಪಿತವೆಂಬ ಹರಿದ್ದೇರಿದೆಡೆಗೆ ಕೈಮುಗಿದು ಬನ್ನಿರಿ ಎಂದು16 ಅಗಣಿತ ಮಹಿಮ ಶ್ರೀ ಜಗನ್ನಾಥ ವಿಠಲನ್ನ ಬಗೆಬಗೆಯಿಂದ ಪಾಡುತಲೀ ಹೊಗಳುವ ದಾಸರ ಬಗೆಯ ನೇಮಿಸಿ ಕಾಯ್ವ ಸುಗುಣೇರಿದ್ದೆಡೆಗೆ ಕೈಮುಗಿದು ಬನ್ನಿರೆಂದು 17
--------------
ಜಗನ್ನಾಥದಾಸರು
ಸಿಂಹ ರಮಾರಮಣ ಪ ಬ್ರಂಹ್ಮಾದ್ಯಮರವಿನುತ ಪಾದಪರ ಬ್ರಂಹ್ಮನಿನಗೆ ಮನ್ಮಾನಸವೆಂಬುವ ಅ.ಪ. ದಾರುಲೋಹಮಯ ಪೀಠಗಳೀವುದು ತರವೆ ನಿನಗೆ ಸ್ವಾಮಿ ವಾರಿಧಿತಾರಕನಾಮ ರತ್ನಮಯ 1 ಸಿರಿದೇವಿಯು ನಿನ್ನರ್ಚನೆಗೈವಡ ಶಕ್ತಳಾಗಿರುವಳು ಸ್ವರಮಣ ಸರ್ವಾಂತರ್ಯಾಮಿ ಪರಾ- ತ್ಪರ ಮುಕುಂದ ರತ್ನಮಯ ಮಣಿಖಚಿತ2 ಏಕಚಿತ್ತದಲಿ ನಿನ್ನ ಭಜಿಪರಿಗೆ ಅ- ನಾ ಕೇಶನುತ ಗುರುರಾಮ ವಿಠಲ ನಮೋ ಮಣಿ ಖಚಿತ 3
--------------
ಗುರುರಾಮವಿಠಲ