ಶ್ರೀ ಪ್ರಹ್ಲಾದ ಚರಿತ್ರೆ
ಅಧ್ಯಾಯ ಒಂದು
ಪದ
ಆದಿಯಲಿ ಲಕ್ಷ್ಮೀಸಹಿತ ಪ್ರಹ್ಲಾದವರದನ ಪಾದಕೊಂದಿಸಿ
ಬೋಧನಿಧಿ ಮಧ್ವಾದಿ ಗುರುಗಳ ಪಾದಕೊಂದಿಸುತಾ
ಕೇಳುವರ ಮನಕಾ
ಲ್ಹಾದ ಕೊಡುತಿರುವಂಥ ಶ್ರೀ ಪಹ್ಲಾದ ಚರಿತವನು 1
ಸಹಿತಾಗಿ ಪರಮಾ
ನಂದದಿಂದ ವಿಹಾರ ಮಾಡುತ ಚಂದದಿಂದಿರಲು
ಬಂದರಾ ಕಾಲದಲಿ ಸನಕ ಸನಂದನಾದಿಗಳಲ್ಲೆ ಬೇಡೆಂ
ತೆಂದು ಆ ಜಯವಿಜಯರವನು ಹಿಂದುಕೊತ್ತಿದರು 2
ಮೂರುಜನ್ಮದೊ
ಳಸುರರಾಗಿರಿ ನೀವು ಹೀಗೆಂತೆಂದು ಶಾಪಿಸಲು
ಅಸುರರಾಘ್ಯುಟ್ಟಿದರು ಶಾಪದಿ
ಹುಸಿಯದಾಗದು ದೊಡ್ಡವರು ಕೋಪಿಸುತ ನುಡಿದದ್ದು 3
ದಿತಿಯ ಸುತರಾಗ್ಯವರು ಮುಂದಕೆ ಪ್ರಥಿತರಾದರು
ದ್ವಿತೀಯ ಹಿರಣ್ಯಾಕ್ಷಾ ಪೃಥಿವಿಯನು ಮುಣುಗಿಸಿದ ಕಾರಣ
ಅತಿರಭಸದಲೆ ಕೊಂದು
ಮತ್ತಾ ಪೃಥಿವಿಯನು ತಂದಾ 4
ತನ್ನ ಅನುಜನ
ನಾಶವನು ಕೇಳುತಲೆ ಮನದಲಿ ಕ್ಲೇಶವನು ಪಟ್ಟು
ಶ್ರೀಸುರೇಶನ ಮೇಲೆ ಬಹಳಾಕ್ರೋಶದಿಂದಲೆ ನಡೆದ ತಪಸಿಗೆ
ದೋಷ ರಹಿತಾನಂತಾದ್ರೀ±ನÀ ದ್ವೇಷಿತಾನಾಗಿ5
ವಚನ
ಸುರರು ಆ ಸಂಧಾನ
ಯುದ್ಧವ ಮಾಡಿ
ಕೊಂದುಹಾಕಿದರು
ಆ ಇಂದ್ರನಾ ಕಂಡು
ಒಂದು ನೋಡದೆ
ಪ್ರಾಣ ಒಂದು ಉಳಿದರೆ ಸಾಕು ಯೆಂದು ಓಡಿದರು 1
ಅಡಗಿರಲು ದೇವೇಂದ್ರ
ಬಂದು ನಡತೆ ಕಂಡವನ
ಬಿಡು ಬೇಗ ಈಕೆಯ
ನಿಮಗೆ ಕೆಡಕು
ಕೊಡುತೆಲ್ಲರ ಮುಂದೆ
ನುಡಿದನಾ ರಾಜನ ಮಡದಿಗೀಪರಿಯು 2
ರಾಗ
ಅಂಜಿಕೆಯ ಬಿಡಿಸುವೆನಮ್ಮಾ ಪ
ಪುಟ್ಟುವನಮ್ಮಾ
ಸಂದರ್ಭವನು ತಿಳಿಸುವೆನಮ್ಮಾ 1
ಸ್ಮರಿಸುವನು ಹರಿಗುಣಗಳಮ್ಮಾ
ಗಭಯ ಕಾಣಮ್ಮಾ 2
ಅಭಯದಾನಂತಾದ್ರೀಶನ ಭಕ್ತನಮ್ಮಾ
ನಿಶ್ಚಿಂತೆಯಿಂದಲಿ ನೀನಿರಮ್ಮಾ 3
ರಾಗ
ಕೇಳಿ ಅರ್ಭಾಟವು
ಗರ್ಭಿಣಿಯುದರದಲಿರುವಾ
ನಡೆದರು ಅರ್ಭಕನಾ ಸ್ಮರಿಸಿ 1
ಕೊಟ್ಟು ತಂದೆಯ ಪರಿ
ಮುಂದಾಕೆಯು ನಾರದನ
ಬೇಡಿದಳು ವಂದಿಸಿ ವರಗಳನ್ನು2
ಭೋ ಮಹಾ ಮುನಿಯೇ
ಮಾತನು ಕೇಳುತಲೆ ಆ
ಮಹಾ ಮುನಿ ನಾರದನು ಪ್ರೇಮದಿ ನುಡಿದನು
ಕೊಟ್ಟಕಾಮಿತ ವರಗಳನ್ನು 3
ನಿನಗಿನ್ನು ಪರತತ್ವವÀ
ನೀ ಕೇಳಮ್ಮಾ ಹರಿಮಹಿಮೆಯ
ಹರುಷವ ಕೊಡುತಿಹುದು 4
ಪರಿ ಗರ್ಭದಲಿ ಇರುವನೆ
ವರದಾನಂತಾದ್ರೀಶನ ಸ್ಮರಿಸುತ
ಪರಮೇಷ್ಠಿಯ ಸುತನು 5
ವಚನ
ತಪವನು ಮಾಡಿ
ಮನಸಿನೊಳಗಿಟ್ಟು
ಪಾದದುಂಗುಷ್ಠವನು
ನೆಟ್ಟನೆ ಮೇಲೆತ್ತಿ
ಘಟ್ಯಾಗಿ ನಿಂತಾ 1
ಸುಡತಲೆ ಸಕಲ
ಕಣವಿದು ಮುಚ್ಚಿತು
ಅವನ ಭಯದಲಿ
ತಮ್ಮ ಭವನ
ಅವನ ಮುಂದು ಸುರಿದರು
ಅವನ ಕಥೆಯಾ ಸಕಲ ಭುವನ ಪಾಲಕರೂ 2
ರಾಗ
ಮೊರೆಯ ಕೇಳೋ ನೀನುಪ
ಹಿರಣ್ಯ ಕಶಿಪು ಮೂಜಗ ಸಂಹರಿಸುವನಯ್ಯ ಅ.ಪ
ದಿಟ್ಟ ಕೇಳವನ ವಿಶಿಷ್ಟ ಕಥೆಯ ಪಾದಾಂಗುಷ್ಟದಿಂದಲಿ
ಭೂಮಿ ಮೆಟ್ಟಿನಿಂತಿ-
ಮಂದರಾದ್ರಿಯಲ್ಲಿರುವಾ 1
ಉಪವಾಸದಿಂದುಗ್ರ ತಪಸಿ
ಲೋಕಗಳನೆಲ್ಲ ಸುಡುವಾ 2
ರೋಷದಿ ಮಾಡುವಾ
ದ್ಷೇಷ ನಮ್ಮಲ್ಲೆ ನಿತ್ಯದಲ್ಲೆ ನಿತ್ಯದಲ್ಲೆ ಅನಂತಾದ್ರೀಶನಲ್ಲೆ 3
ವಚನ
ಮಾಡುವ ಚರ್ಯಾ
ಹತ್ತಿತಾ ಹಂಸವನು ಸತ್ವರದಿ
ಕಂಡು ನೆತ್ತಿಯಾ ಮೇಲಗ್ನಿ
ಬೆಳದಿಹದಲ್ಲೆ ಸುತ್ತಲೆ
ನುಡಿದನು ಬ್ರಹ್ಮದೈತ್ಯ ಗೀಪರಿಯ 1
ರಾಗ
ಹಿರಣ್ಯ ಕಶಿಪು ಏಳು ಏಳು ಏಳು ಬೇಗನೇ ಪ
ಮಾತು ನಿನ್ನ ಭಾಳ ತಪಸಿಗಾಗಿ
ನಾನು ಭಾಳ ಮೆಚ್ಚಿದೆನೋ ಇನ್ನು ಅ.ಪ
ಹೋದುವಯ್ಯಾ ಮತ್ತು ತಪಸಿ
ನಲ್ಲಿ ನೀನು ಚಿತ್ತಮಾಡಬೇಡ ಬಿಟ್ಟು 1
ಕೊಡುವೆನು ವರಗಳನ್ನು ದಾನವೇಶ
ಎನ್ನ ನೋಡು ಮೌನಬಿಟ್ಟು ಮಾತನಾಡು 2
ಬಲ್ಲಿದವನೋ ನೀನು ಬೇಡಿ
ದ್ದೆಲ್ಲ ನಾನು ಕೊಡುವೆ ನಿನಗೆ 3
ವಚನ
ಮನ್ನಿಸಿದನಾ ದೇಹವನ್ನು
ಘನ್ನದಿವ್ಯೋದಕದಿ ಚೆನ್ನಾಗಿ
ಘನ್ನ ದೈತ್ಯನು ಎದ್ದು
ಮುನ್ನನತಿ ಸ್ತುತಿಮಾಡಿ
ಹಿರಣ್ಯ ಕಶಿಪಿಂತು 1
ರಾಗ
ಮರಣ ಬೇಡಾ ಧರೆಯೊಳು
ನಿನ್ನಿಂದ್ಹುಟ್ಟಿರುವ ಪ್ರಾಣಿಗಳಿಂದ ಮರಣಬೇಡಾ 1
ಮರಣ ಬೇಡ ಇಳೆ
ಯೊಳೆನಗಾಕಾಶದೊಳೆನಗೆ ಮತ್ತು ಮರಣ ಬೇಡಾ 2
ಮರಣ ಬೇಡಾ
ಮೃಗಗಳೊಗ್ಹೆಚ್ಚಿನ ಮೃಗಗಳಿಂದಾದದರು ಮರಣ ಬೇಡಾ 3
ಮರಣಬೇಡಾ ನರರಿಂದ
ವಿಷವುಳ್ಳ ಹರಿವ ಹಾವುಗಳಿಂದ ಮರಣ ಬೇಡಾ 4
ವಿಸ್ತಾರವಾದ ದೇ
ವಾಸ್ತ್ರಗಳಿಂದಲಿ ಮರಣಬೇಡಾ 5
ಮರಣಬೇಡಾ ಅಂತಕ
ನಾದ ಅನಂತಾದ್ರೀಶನ ಮುಂಚೆ ಸ್ಮರಣೆ ಬೇಡಾ 6
ರಾಗ
ಹಾಗೆ ಆಗಲಿ ಎಂದು ಸಾಗಿದತಾನು
ಆಗೆದ್ದು ಮದವೇರಿದ ನಾಗೇಂದ್ರನಂತೆ ಬೇಗ ಮನೆಯಲಿ
ಬಂದಸಾಗಿ ದೈತ್ಯೇಂದ್ರಾ 1
ತಂದು ಒಪ್ಪಿಸಿದಾತಗೆ
ಚಂದಾಗಿ ಮುನಿಯು ಹಿಂದಾದುದೆಲ್ಲಾತನ ಮುಂದೆ ತಿಳಿಸಿದನು
ಮುಂದಾ ಸ್ಥಳವನು ಬಿಟ್ಟು ಬಂದಾ ಸ್ವಸ್ಥಳಕೆ