ಬಂದೆನೊ ರಂಗ ಬಂದೆನೊ
ಹಿಂದಿನ ಸುಕೃತದಿ ತಂದೆ ನಿನ್ನ್ಹುಡುಕುತ ಪ
ಹಲವು ಜನುಮಜನುಮಗಳಲಿ ತಿರುತಿರುಗಿ ತೊ
ಳಲಿತೊಳಲಿ ಬಂದು ಬಳಲಿ ಮರುಗಿ
ಹೊಲಸಿನ ಮಲಮೂತ್ರ ಕುಣಿಲಿ ಕೊರಗಿ
ಎಲುವೊಂದು ಗಿರಿಯೋಪಾದಿಯಲಿ ಆಹ
ಇಳೆಯೊಳು ಬಿದ್ದಿಹ್ಯವು ಬಲು ಬಲು ಹೊಲೆಬವಣೆ
ಯಲಿ ನೋಯಲಾರದೆ ಕಳವಳಗೊಳುತ 1
ಜಡÀಸದೃಸ ಶರೀರಗಳ್ಹೊತ್ತು ಬಿಡದೆ
ಎಡರು ತೊಡರಿನೊಳಗೆ ಬೆರೆತು
ಕೆಡುವ ಪೊಡವಿಸುಖಕೆ ಮನವಿತ್ತು
ದೃಢವನ್ಹಿಡಿಯದೆ ಮರೆವಿನಿಂ ಸಂಪತ್ತು ಆಹ
ಒಡನೊಡನ್ಹುಟ್ಟ್ಹುಟ್ಟ ಕಡುಕಷ್ಟಬಡುವಂಥ
ಸುಡಗಿಯ ತಡಿಯದೆ ಗಡಗಡ ನಡುಗತ್ತ 2
ನೋಡೆಲೊ ಕರುಣಾಂತರಂಗ ದಯವ
ಮಾಡೆಲೊ ಸುಗುಣ ಶುಭಾಂಗ ಅಭಯ
ನೀಡೆಲೊ ನಿರುತ ನೀಲಾಂಗ ದುರ್ಭವ
ಕಡಿಯೆಲೊ ಭವಭಯಭಂಗ ಆಹ
ತೊಡರು ಕಡೆಮಾಡಿ ಎನಗೆ ಮುಕ್ತಿ
ನೀಡಿ ಸಲಹು ಎಂದು ಬೇಡುತ ಶ್ರೀರಾಮ 3