ಸರಿ ಸರಿ ಬಿಡು ಬಿಡು ನಿನ್ನಯ ಲೀಲೆಗ
ಳರಿಯಲು ಸಾಧ್ಯವೆ ಮುರಹರನೇ ಪ
ಸರಸ ನಿನಗೆ ಇದನರಿಯದ ಜನಗಳು
ಮರೆತನು ಹರಿ ಭಕುತರನೆಂದು
ಸುರಿವರು ಕಂಬನಿ ತರತರಿಸುವರು
ದುರಾತ್ಮರಿಗೆ ಪರಾಜಯವೆ ಕಾಣದೆ 1
ಸಿಡಿಲಿನ ಬಡಿತಕೆ ಗುರಿಯಾದವು ಜಗ
ನುಡಿದ ವಚನಗಳ ನಡೆಸುವುದಾದರೆ
ತಡೆ ತಡೆ ಕಡುಘಾತಕರುಗಳನು 2
ಸೆಳೆಯುತಿಹನು ತನ್ನ ಬಲೆಗೆ
ಗೆಳೆಯ ಪ್ರಸನ್ನನೇ ಕುಳಿತೆಡೆಯಲಿ ಜಗ
ವಳಿಯುತಿರಲು ಕಿಲಿ ಕಿಲಿ ನಗುತಿಹೆಯ 3