ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೃಪೆಯಿರಲಿ ಸ್ವಾಮಿ ಕೃಪೆಯಿರಲಿ ಅಪರಿಗಣ್ಯ ಸುಗುಣಾಂಬುಧಿ ಹರಿ ನಿನ್ನ ಪ. ಬೇರಿಗೆ ದಿವ್ಯ ಕಾವೇರಿ ನದಿಯ ಜಲ ಧಾರೆಯಿರಲು ಕೊಂಬೆಗಳುಬ್ಬಿ ಸಾರಭರಿತ ಫಲದೋರುವ ತರುವಂತೆ ಧಾರುಣಿಪರು ಕೈ ಸೇರುವರು 1 ಶತ್ರುಗಳಂಜಿ ಬಗ್ಗುವರು ಕಾಳ ಕೂಟ ಪಥ್ಯವಾಗುವುದು ನಿನ್ನಣುಗರಿಗೆ ನಿತ್ಯ ಮಾಡುವಾ ದುಷ್ಕøತವೆಲ್ಲವು ಪರ- ಮೋತ್ತಮ ಧರ್ಮಕರ್ಮಗಳಾಹಲೂ 2 ಕನಸು ಮನಸಿನಲ್ಲಿ ನೆನೆಸುವ ಕಾರ್ಯಗ- ಳನುಕೂಲವಾಗುವದನುದಿನವು ಮನಸಿಜನಯ್ಯ ನೀನನುವಾಗಿರೆ ಸರ್ವ ಜನರೆಲ್ಲರು ಬಹು ಮನ್ನಿಸುವರು 3 ಋಗ್ಯಜುಸ್ಸಾಮಾಥರ್ವಣಗಳೆಂಬ ವೇದ ಸ- ಮಗ್ರ ನೀ ಕರುಣಿಸಿ ಒಲಿದಿರಲು ಸುಜ್ಞಾನ ಭಕ್ತಿ ವೈರಾಗ್ಯ ಸಹಿತವಾಗಿ ಭಾಗ್ಯದೇವತೆ ಕೈ ಸೇರುವಳು 4 ಈ ಕಾರಣದಿಂದನೇಕರ ಬಯಸದೆ ಶ್ರೀಕರ ನೀ ಕರುಣಿಸಿದರಿಂದು ಸಾಕೆಂದೊದರುವೆನೇಕಮನದಲಿ ದ- ಯಾಕರ ವೆಂಕಟರಮಣನಿಂದು 5
--------------
ತುಪಾಕಿ ವೆಂಕಟರಮಣಾಚಾರ್ಯ