ಬಿದ್ದ ಹುಣ್ಣು ಮಾಯವಲ್ಲದವ್ವಾ
ಹ್ಯಾಂಗೆ ಸಹಿಸಲಸಾಧ್ಯ ಬೇನೆ
ನಿದ್ರೆ ಬರದವ್ವಾ ಪ
ಬಿದ್ದ ಹುಣ್ಣು ಮಾಯವಲ್ಲದು
ಮುದ್ದು ಮುಖ ನಿನ್ನಪಾದ ಪದ್ಮಕೆ
ಬಿದ್ದು ಬೇಡುವೆ ಸದ್ದು ಮಾಡದೆ
ಅಬ್ದಿಶಯನನೆಂಬ್ವೈದ್ಯನ್ನ್ಹಿಡಿತಾ ಅ.ಪ
ಮುತ್ಯ ಅಜ್ಜರನಳೀತು ಯೀ ಹುಣ್ಣು
ಮತ್ತು ಎನ್ನ ಹೆತ್ತ ತಾತ ಮಾತಾ ಪಿತರನು
ಹತ್ತಿಕೊಂಡು ಭ್ರಾತೃ ಬಂಧುವನು
ಗೊತ್ತಿಗ್ಹಚ್ಚಿತು ಎತ್ತಪೋದರೊ
ಪತ್ತೆಗಾಣೆನು ಅತ್ತು ಅತ್ತು ಇದರ ಬೇನೆಗೆ
ಸತ್ತು ಸತ್ತು ಹೋದರೆಲ್ಲರು ಪುತ್ರ ಮಿತ್ರ ಕÀ
ಳತ್ರರೆಲ್ಲರ ವ್ಯರ್ಥಕೊಲ್ಲಿ ಬೆನ್ಹತ್ತಿದೆನ್ನಗೆ 1
ಎಷ್ಟು ಬಂಧುಬಳಗವನೀ ಹುಣ್ಣು ನುಂಗಿಬಿಟ್ಟಿದೆ
ಇಷ್ಟು ಖೂನಕ್ಕುಳಿಸಿಲ್ಲೋರ್ವರನು
ಶಿಷ್ಟಜನರಿಗೆ ಮೃತ್ಯು ಕಾಣ್ಹುಣ್ಣು ಬಿಟ್ಟಿಲ್ಲಾರನು
ಎಷ್ಟು ಪೇಳಲಿ ನಷ್ಟಸುದ್ದಿಯನು
ದುಷ್ಟಶಿಷ್ಟರೆಂಬರೆಲ್ಲರ ಕಟ್ಟಿ ಮುರಿದು
ಮುಟ್ಟಿಗಿಯಮಾಡಿ ಮೊಟ್ಟೆಕಟ್ಟಿ
ಕೊಟ್ಟು ಮೃತ್ವಿಗೆ ಕಟ್ಟಕಡಿಗೆ ಬೆನ್ನಟ್ಟಿದೆನಗೆ 2
ಕುಂತೆನೆಂದರೆ ಕುಂದ್ರಗೊಡದಮ್ಮ ಸಂತಜನರೊಳು
ನಿಂತೆನೆಂದರೆ ನಿಂದ್ರ ಗೊಡದಮ್ಮ
ಸಂತಸೆಂಬುದು ಇನಿತು ಇಲ್ಲಮ್ಮ
ಅಂತರಂಗದಿ ನಿಂತು ಸುಡುವುದು ತಾಳಲೆಂತಮ್ಮ
ಅಂತ:ಕರಣದಿ ಪೋಗಿ ಎನ್ನಯ ಅಂತ್ಯಕ್ವೈದ್ಯನಾದಂಥ ಪ್ರಾಣದ
ಕಾಂತ ಶ್ರೀರಾಮನನ್ನು ಕರೆತಂದು
ಕಾಂತೆ ಈ ಹುಣ್ಣು ಮಾಯ್ಸೆ ಬೇಗನೆ 3