ಇಂದಿರಾದೇವಿ ಕಾಯೆ ಕರುಣಾಂಬುಧಿಯೆ ಪ
ಮಾಯೆ ನಾರಾಯಣನ್ನ ಜಾಯೆ ಸತತ ಜ್ಞಾನ |
ವೀಯೆ ಭಕ್ತರ ಪ್ರೀಯೇಅಪ
ಕನ್ನಾಮಣಿಯೆ ಕಾಮಿನಿ ಮಂಗಳವಾಣಿ |
ಸನ್ನುತೆ ಲೋಕ ಜನನಿ |
ನಿನ್ನ ಚರಣಯುಗ್ಮ |
ವನ್ನೆ ನಂಬಿದೆ ಸುಪ್ರಸನ್ನೆ ಸರ್ವಜೀವರ |
ಭಿನ್ನೆ ಭಾಗ್ಯಸಂಪನ್ನೆ ||
ಮನ್ನಿಸಿ ಮುದದಿಂದ |
ಬಿನ್ನಪ ಲಾಲಿಸು |
ಚನ್ನೆ ಚಕ್ರ ಪಾಂಚಜನ್ಯ ಧರಾದೇವಿ 1
ಅತಿದಯವಂತೆ ನೀನೆಂದು ಬೇಗದಿ ಬಂದು |
ನುತಿಸಿದೆ ದೀನನಾಗಿಂದೂ |
ಪತಿತರೊಳಿಡದಲೆ |
ಗತಿಗೆ ಸಮ್ಮೊಗಮಾಡು |
ತ್ಪತ್ತಿ ಸ್ಥಿತಿ ಲಯಕರ್ತೆ ಅತುಳ ಶೋಭನಮೂರ್ತೆ |
ಪತಿಯಲಿ ಜನಿಸಿದೆ|
ಪತಿಗೆ ಸತಿಯಾದೆ |
ಪತಿಯ ಸಂಗಡ ಜ | ನಿತಳಾದ ಚರಿತೆ2
ಕುಂಕುವರತ ರಾಜಿತೆ ಧವಳಗೀತೆ |
ಪಂಕಜಸದನೆ ಖ್ಯಾತೆ |
ಲೆಂಕಾ ವತ್ಸಲೆ ಸರ್ವಾಲಂಕಾರ ಮಾಯೆ ರವಿ |
ಸಂಕಾಸೆ ಬಹುಕಾಲ |
ಸಂಕಟವ ವಿನಾಶೆ |
ಕ | ಳಂಕವಾಗದಂತೆ3