ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೋಡಿದೆ ಮನದಣಿಯೆ ಶ್ರೀನಿವಾಸನನೋಡಿದೆ ಮನದಣಿಯೆ ಪ.ನೋಡಿದೆನು ಶೇಷಾದ್ರಿಯಿಂದೊಡ-ಗೂಡಿ ಭಕ್ತರ ಬೀಡಿನೊಳು ನಲಿದಾಡಿ ಮೆರೆವ ಸಗಾಢ ದೈತ್ಯವಿಭಾಡ ಶ್ರೀಹರಿ ರೂಢಿಗೊಡೆಯನ ಅ.ಪ.ಶರಣರಪೇಕ್ಷೆಯನು ಕೊಟ್ಟುಳುಹಲುಕರುಣಾಳು ನಿಜದಿ ತಾನುಸ್ಥಿರತೆಯೊಳು ಸ್ವಪ್ನದಲಿ ತಾ ಗೋಚರಿಸಿ ಭರವಸೆಯಿತ್ತು ವೆಂಕಟಗಿರಿಯವೋಲ್ ಸಾನ್ನಿಧ್ಯ ವದನಾಂ-ಬುರುಹದಲಿ ಮೆರೆದಿಹನ ಚರಣವ 1ಲಲನೆಲಕ್ಷ್ಮಿಯು ಬಲದಿ ಶೋಭಿಪ ವಾಮದೊಳಗೆ ಗಣಪ ಮುದದಿಒಲವಿನಿಂ ಗರುಡಾಂಕ ಮೃದುಪದನಳಿನದಾಶ್ರಯದಿಂದ ವಾಯುಜಬಳಗ ಚಾತುರ್ದೇವತೆಯರಿಂ-ದೊಳಗೆ ಪೂಜೆಯಗೊಂಬ ದೇವನ 2ಕುಂಡಿಲಕೊಳದೊಳಿಹ ಪ್ರಾಣೇಶ ಮುಂ-ಕೊಂಡು ಪಟ್ಟಣಕೆ ಬಹಕೆಂಡದಂದದೊಳುರಿವ ಶತಮಾ-ರ್ತಾಂಡದೀಪ್ತಾ ಮುಖಂಡ ಭೃತ್ಯನಕೊಂಡುಯಿದಿರಲಿ ಮಂಡಿಸಿದನಖಿಳಾಂಡಕೋಟಿ ಬ್ರಹ್ಮಾಂಡನಾಥನ 3ನೀಲಮೇಘಶ್ಯಾಮಲ ಕೌಸ್ತುಭವನಮಾಲಕಂಧರಶೋಭನನೀಲಮಾಣಿಕವಜ್ರಮುತ್ತಿಸಾಲ ಸರ ಪೂಮಾಲೆಗಳ ಸುಖಲೀಲೆಯಿಂದೊಪ್ಪಿರುವ ಭಕ್ತರಕೇಳಿಯಲಿ ನಲಿದಾಡುತಿಹನನು 4ಕಾಣೆನು ಪ್ರತಿನಿಧಿಯ ನಮ್ಮೊಡೆಯ ಲ-ಕ್ಷ್ಮೀನಾರಾಯಣ ಹರಿಯಕಾಣಿಕೆಯ ಕಪ್ಪಗಳ ತರಿಸುತಮಾನಿಸುತ ಭಕ್ತಾಭಿಮತವನುತಾನೆ ಪಾಲಿಸಿ ಮೆರೆವ ಕಾರ್ಕಳಶ್ರೀನಿವಾಸ ಮಹಾನುಭಾವನ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ವೆಂಕಟರಮಣ ವೇದಾಂತಕೋಟಿವಂದ್ಯಶಂಕರಪ್ರಿಯಪತಿಏಳೆನ್ನುತಪ.ಪಂಕಜಮುಖಿಪದ್ಮಾವತಿ ಸರ್ವಾ-ಲಂಕಾರದ ನಿದ್ದೆ ಸಾಕೆನ್ನುತ ಅ.ಪ.ಮಂಗಲಚರಿತ ಭುಜಂಗಶಯನ ನಿ-ನ್ನಂಗದಾಯಾಸವ ಪರಿಹರಿಸಿಪೊಂಗಲಶದಿ ಉಷ್ಣೋದಕ ಗಂಧ ತೈಲಾ-ಭ್ಯಂಗಮಾಡುವರೇಳು ಶೃಂಗಾರದ ಮೂರ್ತಿ 1ದಧಿಯ ಪೃಥುಕದಲಿ ಹದಗೈದು ಮಧುರದಿಮಧುಸೂದನ ನಿನ್ನ ಪದದ ಮುಂದೆಸದ್ ಹೃದಯರು ತಂದಿಹರು ಸಮರ್ಪಿಸೆಮದಜನಕ ನಿನ್ನ ಓಲೈಸುವರಯ್ಯ 2ಸಣ್ಣಕ್ಕಿಯನು ದಿವ್ಯಾನ್ನ ಪಾಕವ ಮಾಡಿಚೆನ್ನಾದ ಗೋಕ್ಷೀರವನ್ನು ತಂದುಉನ್ನತ ಮಹಿಮನೆ ಉಣ್ಣೆಂದು ಲಲಿತ ಸು-ವರ್ಣಪಾತ್ರೆಯೊಳು ತಂದಿಹರು ಶ್ರೀಹರಿಯೇ 3ವಿಧವಿಧ ಷಡುರಸಭರಿತ ಮನೋಹರಸುಧೆಗೆಯಿಮ್ಮಡಿ ಮಧುರತ್ವದಲಿಮೃದುವಾದ ಉದ್ದಿನ ದೋಸೆಯ ಸವಿಯೆಂದುಪದುಮನಾಭನೆ ನಿನ್ನ ಹಾರೈಸುವರಯ್ಯ 4ಸಕ್ಕರೆಕದಳಿಉತ್ತಮ ಫಲಗಳ ತಂದುರಕ್ಕಸವೈರಿಯೆ ನಿನ್ನ ಮುಂದೆಚೊಕ್ಕಟವಾಗಿಡೆ ಲೆಕ್ಕ ಲೇಖನಗಳಒಕ್ಕಣಿಪರುವಾಸುದೇವನೀನೇಳಯ್ಯ5ಸಾರಹೃದಯ ಗೌಡಸಾರಸ್ವತವಿಪ್ರಭೂರಿವೇದಾದಿ ಮಂತ್ರದ ಘೋಷದಿಶ್ರೀರಮಣನೆ ದಯೆದೋರೆಂದು ಕರ್ಪೂರ-ದಾರತಿಯನು ಪಿಡಿದಿಹರು ಶ್ರೀಹರಿಯೇ 6ಭಾಗವತರು ಬಂದು ಬಾಗಿಲೊಳಗೆನಿಂದುಭೋಗಿಶಯನಶರಣಾದೆನೆಂದುಜಾಗರದಲಿ ಮದ್ದಳ ತಾಳರಭಸದಿರೇಗುಪ್ತಿರಾಗ ಸಂಗೀತ ಪಾಡುವರಯ್ಯ 7ಕರುಣಾಸಾಗರ ನಿನ್ನ ಚರಣದ ಸೇವೆಯಕರುಣಿಸೆಂದೆನುತಾಶ್ರಿತ ಜನರುಕರವಮುಗಿದು ಕಮಲಾಕ್ಷ ನಿನ್ನಯ ಪಾದ-ಸ್ಮರಣೆಗೈಯುತ ನೋಳ್ಪಾತುರದಿಂದ ಹರುಷದಿ 8ನಾನಾ ಜನರು ಬಂದುಕಾಣಿಕೆಕಪ್ಪವಶ್ರೀನಿವಾಸನೆ ನಿನ್ನ ಪದಕೆ ಒಪ್ಪಿದಾನವಾಂತಕ ನಿನ್ನ ದಯವೊಂದೆ ಸಾಕೆಂದುಧ್ಯಾನಮಾಳ್ಪರು ದಯಮಾಡೆಂದು ಹರಿಯೇ 9ನೀನೆ ಗತಿಯೆಂದು ನಿನ್ನ ನಂಬಿಹರು ಲ-ಕ್ಷ್ಮೀನಾರಾಯಣ ಪುರುಷೋತ್ತಮನೆಮಾನದಿ ಭಕ್ತರ ಸಲಹಯ್ಯ ಸಂತತಶ್ರೀನಿವಾಸನೆ ಬೇಗ ಏಳು ಶ್ರೀಹರಿಯೆ 10
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ