ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಕಾಣೂರು ಮಠದ ನರಸಿಂಹ) ನೋಡಿರಯ್ಯ ನರಸಿಂಹ ಮೂರ್ತಿಯ ಪಾಡಿರೋ ಕೀರ್ತಿಯನು ಪ. ಚಿಕ್ಕವನ ಗೋಳಿಕ್ಕಿಸುತಲತಿ ಸೊಕ್ಕಿದಸುರನನು ಧಿಕ್ಕರಿಸುತಿಹ ಕಕ್ಕುಲತೆಯಿಂದುಕ್ಕಿ ರೋಷವನು ಮಿಕ್ಕ ದೇವರ ಲೆಕ್ಕಿಸದವನ ತಿಕ್ಕಿ ತೊಡೆಯೊಳಗಿಕ್ಕಿ ನಖಗಳನಿಕ್ಕರಿಸಿ ಸಾಲಿಕ್ಕಿ ತರುವ ಕರುಳಕ್ಕರದಿ ತೆಗೆದ್ಹಕ್ಕಿಗಮನನ 1 ವೇದಮುಖ ಸುರರೆಲ್ಲ ದೂರದಿ ಕಾದುಕೊಂಡಿರಲು ಸಿರಿನಡು ಹಾದಿಯಲಿ ಚಿನ್ಮೋದನಿರಕಾಲ್ಹಾದ ಬಡುತಿರಲು ಪಾದಪದ್ಮಗಳನ್ನು ಭಕ್ತಿರಸಾರದರದಿ ಶಿರಕಿಕ್ಕಿರುವ ಪ್ರ- ಲ್ಹಾದನನು ಪಿಡಿದೆತ್ತಿ ಪರಮವಿನೋದಗೊಂಡ ಪರಾಪರೇಶನ 2 ಅರ್ಥಿಯಿಂದಲಿ ಬಂದಿರುವರು ಪೂರ್ಣಾರ್ಥದಾಯಕನಾ ವ್ಯರ್ಥವೈರದ ದ್ವ್ಯರ್ಧಿದೈತ್ಯರ ಮೂರ್ತಿದಹಿಸುವನಾ ಅರ್ತಿಹರ ಶೇಷಾದ್ರಿವರ ಪುರುಷಾರ್ಥ ಪಾಲಿಪೆನೆಂದು ವಾಮನ ತೀರ್ಥ ಕೃತ ಪೂಜಾರ್ಥವಿಲ್ಲಿಗೆ ಕೀರ್ತಿಕರ ನಿಲಯಾರ್ಥದಾತನ 3
--------------
ತುಪಾಕಿ ವೆಂಕಟರಮಣಾಚಾರ್ಯ
ನೀನಲ್ಲದಿನ್ನಾರು ಸಲಹುವರು ಹರಿಯೆ ಪ ನಾನನ್ಯರನು ಕಾಣೆನೆಲ್ಲಿಯೂ ಕೇಳ್ದರಿಯೆ ಅ.ಪ. ಪೋರ ಶಶಿಹಾಸನನು ತಂದೆ ತಾಯ್ಸಲುಹಿದರೆಧೀರ ಪ್ರಲ್ಹಾದನನು ತಂದೆ ತಾಯ್ ಸಲುಹಿದರೆವೀರ ಕರ್ಣನ ಹಡೆದ ತಾಯಿ ಸಲುಹಿದಳೆನಾರಿ ದ್ರೌಪದಿಯನ್ನು ಭರ್ತೃಗಳು ಸಲುಹಿದರೆ 1 ಕರ್ಣ ತಾ ಸಲುಹಿದನೆಕಡುಗಲಿಯ ವಾಲಿಯನು ಸುಗ್ರೀವ ಸಲುಹಿದನೆಗಡ ಬಬ್ರುವಾಹನನು ತಂದೆಯನು ಸಲುಹಿದನೆ 2 ಪುಸಿಯಲ್ಲದೆಲ್ಲವನು ಸಲಹುವಾತನೆ ನೀನುಪಿಸುಣರೈ ಸಲಹುವರು ತಾವೆಂದು ಗಳಹುವರುಉಸಿರು ಗದುಗಿನ ವೀರನಾರಾಯಣನೆ ನೀನು 3
--------------
ವೀರನಾರಾಯಣ