ಯಾತರಂಚಿಕೆ ಜಗದೊಳಗೆ ಜಗ
ನ್ನಾಥ ದಾಸರ ದಯಪಡೆದ ಸುಜನರಿಗೆ ಪ
ವಿಧಿ ಮದನಾರಿ ವಂದಿತ ಒ
ಪತಿ ಮಧುರಿಫು ಹರಿಕೃತಾ
ಪದ ಸರಸಿಜ ಪೊಂದಿದಸುಗುಣರಿಗೆ 1
ನಳಿನ ಜನಕನ ವÀಲಿಸಿ ಹರುಷದಿಂದಲಿ
ಥಳ ಥಳ ಪೊಲೆಯುವ ಸ್ತಂಭದಲಿ
ಕುಳಿತು ಸೇವಿಸುವರ ಸಲಹುವ ಶ್ರೀ ರಂಗ
ವಲಿದ ದಾಸಾರ್ಯರ ಒಲಿಮೆ ಉಳ್ಳವರಿಗೆ 2
ಸಿರಿವರ ಶಾಮಸುಂದರ ಸರ್ವೋತ್ತುಮ
ಮರುತಾತ್ಮಜ ಗುರುವರ್ಯಕಿಂದು
ಧರಿಯೊಳು ಸಾರಿದ ಸಲ್ಹಾದ ದಾಸರ
ಚರಣ ಸರೋರುಹ ನೆರೆನಂಬಿದವರಿಗೆ 3