ನಿಚ್ಚಳಾಗಲಿ ಬೇಕು ತಿಳಿದು ನಿಚ್ಚಳಾಗಲಿ ಬೇಕು ಪ
ನಿಚ್ಚಮಾಡುವ ದೋಷರಾಶಿಗಳಳಿದು ನಿಚ್ಚಳಾಗಲಿ ಬೇಕು ಅ.ಪ
ಪಾಪವೆಂಬುದು ಹೊರಗಿಹುದೆ ತನ್ನ
ಅಪವರ್ಗಕೆ ಮಾರ್ಗವಹುದೆ ಬಲು
ತಾಪಸಿಗಾದರು ಅದು ಸಾಧನವಹುದೆ 1
ಪುಣ್ಯವೆಂಬದು ಬೇರೆಯಿಲ್ಲಾ ನಾನಾ
ರಣ್ಯ ಚರಿಸಿದರು ದೊರಕುವದಲ್ಲಾ
ಮನ್ಯು ಬಿಡದೆ ಮತ್ತೊಂದಲ್ಲಾ ನಿರುತ
ಅನ್ಯರಾಶಿ ಬದಲು ಗತಿಗವಸಲ್ಲಾ 2
ವೈಕುಂಠವೆಂಬೋದು ಅಲ್ಲೆ ಬರಿದೆ
ಲೌಕೀಕ ತೊರದರೆ ಇಪ್ಪದು ಇಲ್ಲೆ
ಈ ಕಲಿಯೊಳಗೆ ಈ ಸೊಲ್ಲೆವೊಲಿಸ
ಬೇಕೆನೆ ಮಾರಿ ಓಡುವುದು ನಾ ಬಲ್ಲೆ 3
ಹರಿಸ್ಮರಣೆಗೆ ಪೋಪ ದೋಷ ಬಲು
ಪರಿ ಧರ್ಮವ ಮಾಡಲು ಲೇಶ
ಸರಿಯಾವು ತರುವಾಯ ಮೋಸದಿಂದ
ತಿರುಗಿ ತಿರುಗಿ ಪುಟ್ಟಿ ಬಡವನು ಕ್ಲೇಶಾ4
ಒಬ್ಬರ ಸರಿಗಟ್ಟದಿರೊ ನಿನ
ಕರ್ಮ ಸುಖವೆಂದು ಸಾರೊ
ಉಬ್ಬಲ ದಾಡಿಪರಾರೊ ಎಲೆ
ಲ್ಹಬ್ಬಿದ ವಿಜಯವಿಠ್ಠಲನೆಂದು ಸಾರೋ 5