ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಒಪ್ಪಿಸಿದೆ ಒರೆದು ದೂರ ಮುಂದೆನ್ನ ತಪ್ಪನೆಣಿಸದಿರು ಧೀರ ಅಪ್ಪಳಿಸು ಕಡು ಮೂರ್ಖರ ನಿನಗೆಂದು ತಪ್ಪುವುದೆ ಭಕ್ತಭಾರ ಪ. ದುರ್ಗಾಧಿಪತಿ ಲಾಲಿಸು ಮನಸಿಜನ ಮಾರ್ಗಣಕೆ ಸಿಲುಕಿ ಮನಸು ನಿರ್ಗಮಿಸದೊಳಸರಿದು ಮುಳುಗಿ ಸ- ನ್ಮಾರ್ಗಗಾಣದೆ ಕುಂದಿತು 1 ಪಂಚಾಂಗ ಪಲುಗುತಿರಲು ಮನೆಯ ಮ್ಯಾ- ಲ್ಹಂಚುಗಳಸ್ಥಿರವಾಗಲು ಚಂಚಲದಿ ಮನ ಕೆದರಲೂ ತದಧೀನ ಪಂಚಕರಣವು ಕೆಡುವವು 2 ಹೀಗಾದ ಬಳಿಕ ನಿನ್ನ ಸೇವೆ ಚೆ- ನ್ನಾಗುವದ ಕಾಣೆ ಮುನ್ನ ಶ್ರೀ ಗುರುವೆ ತ್ವರೆಯೊಳೆನನ ಮನವ ಪದ ರಾಗಿಯಾಗಿಸು ರನ್ನ 3 ಮೂರು ಋಣಬಾಧೆಯನು ಸಹಿಸುವದ- ಕಾರಿಂದ ಶಕ್ಯವಿನ್ನು ತೋರು ತ್ವಕ್ಕರುಣವನ್ನು ದಾಸನ್ನ ದೂರ ಬಿಡಲ್ಯಾತಕಿನ್ನು 4 ಸಂದಣಿಸಿಕೊಂಡು ಬರುವ ಸರ್ವ ಪ್ರತಿ ಬಂಧಕಗಳೆಲ್ಲ ತರಿವ ಕರವ ಶಿರದಿ ಭುಜ- ಗೇಂದ್ರ ಗಿರಿನಾಥ ದೇವ 5
--------------
ತುಪಾಕಿ ವೆಂಕಟರಮಣಾಚಾರ್ಯ