ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹೇಗೆ ಕಳಕೋಬೇಕೋ ಹರಿಹರಿ ನೀನೆ ಕಳೆಯಬೇಕೊ ಪ ಹ್ಯಾಗೆ ತೊಳಕೋ ಬೇಕು ತಿಳಿಯದು ಎನಗಿದು ನೀಗದಂಥ ಈ ಅಗಾಧ ರಿಣಮುಟ್ಟು ಅ.ಪ ಹೆತ್ತಮುಟ್ಟು ಅಲ್ಲ ತೊಳಕೊಳ್ಳ ಲ್ಸತ್ತ ಸೂತಕಲ್ಲ ಭವ ಸುತ್ತಿಸುತ್ತಿ ಬೆ ನ್ನ್ಹತ್ತಿ ಬಿಡದೆ ಕಾಡುತ್ತ ನೋಯಿಪ ರಿಣ1 ನಿಶ್ಚಲಯಿರಗೊಡದು ಜಗದೊಳು ತುಚ್ಛನ ಮಾಡುವುದು ಮುಚ್ಚು ಮರಿಯಾದೆಯ ಬಿಚ್ಚಿಟ್ಟು ಬಯಲಿಗೆ ಹಚ್ಚಿ ಮಾರುವಂಥ ಉಚ್ಚಿಷ್ಠ ರಿಣಮುಟ್ಟು 2 ಭಕ್ತವತ್ಸಲರಾಮ ನೀನೆ ಮುಕ್ತಿಪಥಕೆ ಸೋಮ ನಿತ್ಯ ನಿರ್ಮಲಮನ ಭಕ್ತನಿಗಿತ್ತು ರಿಣ ಮುಕ್ತನ ಮಾಡಿ ಬೇಗಂತಃಕರಣ ನೀಡೊ 3
--------------
ರಾಮದಾಸರು