ಆವ ನ್ಯಾಯವೋ ಭಾವಜರಿಪುವಿನುತ ನಿಂದು
ದಾವ ನ್ಯಾಯವೊ ಪ
ಆವ ನ್ಯಾಯವೋ ದೇವ ದೇವ
ಮಾವಕಂಸಜೀವಘಾತಕ ಅ.ಪ
ಕಪ್ಪು ವರ್ಣನು ಭಕ್ತಜನರ
ಲ್ಲಿರ್ಪೆ ಸದಾ ನೀನು ನಿ
ನ್ನ ಪಾದದಿ ತಪ್ಪು ಎಲ್ಲನು
ಒಪ್ಪಿಬಂದಿಹ್ಯ ಭಕ್ತಜನರ
ತಪ್ಪು ಒಪ್ಪಿ ಕ್ಷಮಿಸಿ ದಯದಿ
ದುರಿತ ನಿವೃತ್ತಿಗೈದು
ಅಪ್ಪಿಕೊಂಡು ಸಲಹದಿರುವಿ 1
ತಂದೆ ತಾಯಿ ನೀನು ಎಂದು ನಂಬಿ
ಬಂದು ಬಿದ್ದೆನು ನಿನ್ನ ಪಾದಕೆ
ಮಂದಭಾಗ್ಯನು ನೊಂದು
ಬೆಂದು ಸಂಸಾರವೆಂಬ
ಸಿಂಧುವಿನೊಳು ತಾಪಬಡುತ
ಬಂದು ಮೊರೆಯಬಿದ್ದ ಕಂದನ
ಮಂದರಮಂದಿರ ಸಲಹದಿರುವಿ 2
ನಿನ್ನನರಿಯದ ಅಜಮಿಳನು
ಬಿನುಗನೆನಿಸಿದ ಪಾಪಗೈದವ
ಗಣನೆಯಿಲ್ಲದ ಕನಿಕರದಿಂದ
ವನಿಗೊಲಿದು
ಘನಪದವನಿತ್ತು ಪೊರೆದೆ
ಚಿನುಮಯಾತ್ಮ ಸಿರಿಯರಾಮ 3