ಪುರಂಜನೋಪಾಖ್ಯಾನ ಲಾವಣಿ
ಗೆರಗಿ ಮಹೇಶ್ವರನಾ
ಶಾರದೆಯ ಸರಸಿಜಸಂಭವನಾ | ಇಂದಿರೆ
ಪರಮಭಕ್ತಿಯಲಿ ಪ್ರಾರ್ಥಿಸಿ ಸತ್ಕವಿ
ಕರುಣಿಪುದು ಜ್ಞಾನ |
ಚರಣಗಳಿಗೆ ಬಿನ್ನೈಸುವೆನಾ 1
ಯತಿಗಣಪ್ರಾಸೊಂದಾದರು ತಿಳಿಯದು
ಮತಿಹೀನನು ನಾನು | ನಾನಾಚಮ-
ತ್ಕøತಿಗಳರಿಯದವನು | ಆದರೀ
ಕೃತಿಯಲಿ ತಪ್ಪೇನು |
ಮತಿವಂತರಾಲಿಸುವುದು ನೀವಿದನು 2
ಒಂದರೊಳಗೆ ಎರಡಾಗಿ ಎರಡರೊಳು
ಹೊಂದಿ ಮೂರ್ನಾಲ್ಕೈದಾಗಿ
ಆರೇಳೆಂಟೊಂಬತ್ತುಗಳಾಗಿ | ಸಕಲದೊಳು
ಹೊಂದಿರುವುದುತಾಗಿ
ಕುಂದಿಲ್ಲದೆ ಇರುತಿರುವ ಮಹಾತ್ಮನ
ರಂದವ ಚನ್ನಾಗಿ | ತಿಳಿದು ಸುಖ
ತಂದವನೇಯೋಗಿ 3
ಮೊದಲು ಮಹತ್ ಸೃಷ್ಟಿಯಲಿ ಎಲ್ಲತ-
ತ್ವದಲಿ ತೋರುತಿಹುದು
ಬೇರೆಬೇರಾಗಿ ಕಾಣಿಸುವುದು
ಅದುಭುತವಾಗಿಹ ಅನಾದಿ ಕರ್ಮತ್ರಿ-
ವಿಧದಿ ಭಾದಿಸುವುದು | ಅದರೊಳು ಬಿ-
ಡದೆ ತಾ ಮುತ್ತುವುದು
ಎಂದಿಗು ನಿಜವತಿ ರಹಸ್ಯವಿದು 4
ಮೊಟ್ಟೆವೊಂದು ದಶಸಾವಿರವರುಷಗ
ಳಿಟ್ಟು ಜಲದಿತಾನು | ಅದಕೆ ಕೈ-
ಗೊಟ್ಟು ಎಬ್ಬಿಸಿದನು | ನಾನಾ ವಿಧ
ವೆಷ್ಟಿ ಸಮಷ್ಟಿಗಳೆರಡೆಂದದರೊಳು
ಗುಟ್ಟಂಗಡಿಸಿದನು | ಗುರಿಯಮಾ
ಡಿಟ್ಟು ಚೇತನಗಳನು | ಅನೇಕವು
ಪಟ್ಟಣ ರಚಿಸಿದನು 5
ಈ ಪಟ್ಟಣಕಾರ್ ಮಂದಿ ಇರುವರತಿ
ಕಾಪಾಡುವರದರೊಳು
ವ್ಯಾಪಾರಗಳನು | ಬಹುವಿಧಮಾಡುವ-
ರಾಪುರ ಜನರುಗಳು | ಇವರುನಡೆ
ಕೋಪಿಸೆ ಹಗಲಿರುಳು 6
ಎರಡು ಮಾರ್ಗದೊಳಿರುತಿಹರೆಲ್ಲರು
ಹುರುಡಿಲ್ಲವುನೋಡೆ | ಗಜಿಬಿಜಿಯು
ತರತರದಲಿಮಾಡೆ | ನಮಗಿದೆ
ಸ್ಥಿರವೆನ್ನುತ ಕೂಡೆ |
ಪರಿಪರಿ ಬಗೆಯಲಿ ಭೇದ ಪುಟ್ಟುವುದು
ಕರೆಕರೆಯಂದುಡೆ | ವಳಗೆಕೆಲ
ಬರುಹರುಷದಿ ನೋಡೆ | ಯುವಶೃಂ-
ಗರುವು ಇದಕೆ ಈಡೆ 7
ಇದೆತನ್ನದೆನುತೋರ್ವಳು ಮಾನಿನಿ
ಚದುರತನದಿ ಬಂದು | ಊರ
ಮುಂದಿರುವ ವನದಿ ನಿಂದು | ಅವಳಿಗಿರು
ವುದು ಜನ ಹನ್ನೊಂದು
ಚದುರೆಯೈದುತಲೆ ಸರ್ಪವಾಡಿಸುತ
ಜಾಣೆಯಿರುವಳಂದು | ತಾನೊಬ್ಬನ
ಇಂದು | ಸುಖದೊಳಾ-
ಳ್ಬೇಕುರಾಜ್ಯವೆಂದು 8
ಅರಸನೊಬ್ಬ ವಿಜ್ಞಾತನೆಂಬ ಭೂ-
ಸುರನಸಹಿತನಾನಾ | ದೇಶಗಳ
ತಿರುಗುತ ಉದ್ಯಾನ | ವನದಿಕಂ-
ಡನು ಆತರುಣಿಯನ
ಪರಮ ಮಿತ್ರನಹ ಬ್ರಾಹ್ಮಣನ ಮರೆತು
ಹರುಷದಿ ಪೊಕ್ಕುವನ | ಸ್ಮರಶರಕೆ
ತರಹರಿಸುತಲಿರೆ ಮನ | ಕೇಳಿದನು
ನಗುತಲಿ ನಾರಿಯನ 9
ಯಾರೆ ಹುಡುಗಿ ನೀನ್ಯಾರೆ ನಿನ್ನ ಪೆಸ-
ರೇನು ಪೇಳೆ ಹೆಣ್ಣೆ | ಮಾತನಾ-
ಡೆಲೆ ತಾವರೆಗಣ್ಣೆ | ನಿನ್ನ ಮೈ-
ಸುಲಿದ ಬಾಳೆಯ ಹಣ್ಣೆ
ಯಾರದು ಈ ಜನ ಉರಗವೇನು ವನ-
ವಾರದು ಶಶಿವದನೆ | ಈ ಪುರವ-
ನಾಳುವನಾವವನೆ | ಒರ್ವಳಿ-
ಲ್ಲಿರುವುದಕೇನ್ಹದನೆ 10
ಎನಲು ನಸುನಗುತವನಿತೆನುಡಿದಳೀ
ಜನಗಳು ನನ್ನವರು | ಇಲ್ಲಿಕಾ-
ಣುವ ಪುರ ನನ್ನೂರು | ಸರ್ಪನ-
ನ್ನದು ಇದಕಿನ್ನಾರು |
ಅರಸರಿಲ್ಲ ನಾನೊಬ್ಬಳಿರುವೆನೀ
ವನದೊಳು ನೀನ್ಯಾರು | ನಿನ್ನಕಥೆ
ವಿವರಿಸೆನಗೆ ತೋರು | ಯನ್ನ ಬಳಿ-
ಗಿಷ್ಟವಿರಲುಸಾರು 11
ಎಲ್ಲಿ ನೋಡೆ ಸ್ಥಳವಿಲ್ಲವೆನಗೆ ನಿ-
ನೆನ್ನ ಪುಷ್ಪಶರನು | ನೀನುಪೇ-
ಪರಿ ವಲ್ಲಭನನು ಮಾಡಿಕೊ ಎನ್ನನು ಬಹು
ಬಲ್ಲಿಯಳೆ ನೀನು | ನಿನ್ನಸರಿ
ಚಲ್ವೆಯರಾರಿನ್ನು | ಇಬ್ಬ-
ರಾಳ್ವೆಯೀವೂರನ್ನು 12
ಎನಲು ಹರುಷಗೊಂಡಾಕೆ ಸಮ್ಮತಿಸಿ
ಜನವೆರಗಿತಂದು | ನುಡಿದಳಾಮೊಗದ-
ಲಿನಗೆತಂದು | ನಿನ್ನಮೇಲ್
ಮನಸಾಯಿತುಯಿಂದು
ನಿನ್ನನು ಮಾನವೇತಕಿಂದು | ಆಳು
ಜನಸಹಿತ ಪುರವ ಮುಂದು ನೀನು
ನಾನಿರುವೆವಾಗಿವಂದು 13
ಸರ್ವವನ್ನು ಭವದಿ
ಆದರಿಸುತತತ್ಪುರ ಮಧ್ಯ | ದೊ
ಳುಪ್ಪರಿಗೆಯೇರಿ ತ್ವರದಿ | ಸರ
ಸಗಳನಾಡಿ | ಬಹುತರದಿ
ಮುಳುಗಿ ಸಂಸಾರವೆಂಬಶರಧಿ 14
ಅನ್ನಪಾನಾಭರಣ ಕುಸುಮ
ವಿನ್ನು ಗಂಧಧೂಪ | ತಾಂಬೂಲಗಳ
ಮನ್ನಣೆಯಲಿ ಭೂಪ | ಪೊಂದಿದ ಸುಖ
ವನು ನಾನಾರೂಪ | ನನ್ನದು
ಎನ್ನುತಲಿ ಪ್ರತಾಪ | ಶಾಲಿತಾ-
ರಾಜ್ಯವಾಳಿದನಾಗುತಭೂಪ 15
ದ್ವಾರಗಳೊಂಭತ್ತಾಪುರಕಿರುವುದು
ಮೂರು ಪೂರ್ವದಲ್ಲಿ | ಮೇ-
ಲೆರಡು ಕಿಟಕಿಗಳಿಹವಲ್ಲಿ | ಬಿಗಿಸಿ
ಕಟ್ಟಿಹುದು ಕನ್ನಡಿಯಲಿ
ತೋರುವುದುತ್ತರದಕ್ಷಿಣದೊಳೆರಡು
ದ್ವಾರ ಪಶ್ಚಿಮದಲಿ
ಕಾರಣವದರಲ್ಲಿ 16
ಮತ್ತದರೊಳಗಾರ್ಸುತ್ತು ಕೋಟೆ ಒಂ-
ಬತ್ತು ಬಾಗಿಲ ಪುರದಿ | ಅನೇಕವು
ಗೊತ್ತನಾವವಿಧವಿ |
ಉತ್ತಮವಹಪುರದಿ | ಮುಖ್ಯವಾ-
ಗಿರುವದೆರಡು ಬೀದಿ | ದೊರೆಯಮನೆ-
ಯಿರುವುದು ವಿಸ್ತರದಿ17
ಇಂತರಮನೆಯಲಿ ದೊರೆ ಕಲಿಯಾಗುತ
ಕಾಂತೆಯೊಡನೆ ಸೇರಿ | ಸದಾಸು-
ಸ್ವಾಂತನಾಗಿಮೀರಿ | ಸೌಖ್ಯಹೊಂ-
ದುತಲಾವೈಯ್ಯಾರಿ
ನಿಂತರೆ ನಿಲುವನು ಕುಳಿತರೆ ಕೂಡುವ
ಮಲಗಿದರೆ ನಾರಿ | ತಾನು
ಮಲಗುವಯೇಕದಿ ಸೇರಿ | ಉಂಡ-
ರುಣ್ಣುವನು ಅವಳನುಸಾರಿ 18
ಮನದಿಯೋಚಿಸದನೂ | ಈಗಲೆ
ಮೃಗಯಾತ್ರೆಗೆತಾನೂ |
ಸೊಗಸಿಂದ ಸೈನ್ಯವ ಕೂಡುತ ಪುಂ-
ಚಪ್ರಸ್ಥವನವನು | ಪೊಕ್ಕು ಅ-
ಲ್ಲಿರುವಮೃಗಗಳನ್ನು | ಹೊಡೆದು ಸಂ-
ತೋಷದಿ ಸುಖಿಸುವೆನು 19
ಮೂರೆರಡು ಕುದುರೆಯೈದು ಮೇಲ್
ಮೂರು ಪತಾಕಿಗಳು | ಅ-
ಚ್ಚೆರಡು ಎರಡು ಕೂಬರಗಳು | ಚಕ್ರ
ವೆರಡುವರೂಥಗಳೇಳು
ಆರಥಕೊಪ್ಪುವದೇ-
ಕರಶ್ಮಿನಾಲ್ಕೊಂದು ವಿಕ್ರಮಗಳು | ಒಬ್ಬ
ಸಾರಥಿ ಎರಡು ಗತಿಗಳು | ಬಿಗಿಸಿಹುದು
ಕನಕಭೂಷಣಗಳು 20
ಪುರಂಜನ ಭೂ-
ಕಾಂತಕರದಿ ಧನುವ | ಪಿಡಿದುಸು-
ಸ್ವಾಮತದಿಂದಲನುವಾ | ಗಿಬಹ ಹನ್ನೊಂ-
ದು ತನ್ನ ಜನನ | ಸಂತಸದಲಿ ಕೂ-
ಡುತ ಹೊರಡುತ ತಾ ಪೊಕ್ಕನು
ಕಾನನವಾ | ಶರಗಳಿಂ-
ದ್ಹೊಡದು ಮೃಗನಿವಹವಾ | ಮೇರೆಯಿಲ್ಲ-
ದೆ ತಟ್ಟುತ ಭುಜವಾ 21
ಇನಿತು ಬೇಟೆಯಾಡುವ ಕಾಲದಿ ತನ್ನ
ಮನದಿ ನೆನೆದು ಸತಿಯಾ | ತಕ್ಷಣವೇ
ಬಂದು ಸೇರಿ ಮನೆಯ | ಕಾಣದೆ
ಹುಡುಕಿದನು ಯುವತಿಯ
ಮಂಚದೊಳಿಹ ಸತಿಯ | ಕಂಡುಲಾ-
ಲಿಸುತ ಚಮತ್ಕøತಿಯಾ | ನುಡಿಯಲುಪ-
ಚರಿಸಿದನಾಕಾಂತೆಯ 22
ನೂರುವರುಷವೀರೀತಿಯವಳೊಡನೆ
ನೂರುಹನ್ನೊಂದು ಮಕ್ಕಳನ್ನು | ಪಡೆದು ಸಂ-
ಸಾರದಿ ಕಾಲವನು | ಯಾರೆ-
ಮೀರಿ ಹೋದುದಿನ್ನು | ಮೊಮ್ಮಕ್ಕಳ
ಪಡೆದನನೇಕರನು
ದೇಶತುಂಬಿಸಿದ ತನ್ನ | ವರನು 23
ಉತ್ತರ ದಕ್ಷಿಣ ಪಾಂಚಾಲಗಳಾ
ಳುತ್ತಲಿವನು ತನ್ನ | ಸುತರಬೆರೆ-
ಯುತ್ತಸದಾ ಚಿನ್ನ | ಬೆಳ್ಳಿ ನವ-
ರತ್ನರಾಶಿಗಳನಾ | ಮತ್ತೆ ಮತ್ತೆ ಕೂಡಿ-
ಸುತೈಶ್ವರ್ಯದಿ ಮತ್ತನಾ | ಗುತಲನ್ಯಾ
ಚಿಂತೆಯಿಲ್ಲದೆ ನಾ | ಬಲು
ಪುಣ್ಯವಂತನೆ |
ನ್ನುತ್ತತಿಳಿದಿರುವನಾ 24
ಚಂಡವೇಗವೆಂಬುವರಾ ತಮ್ಮತಮ್ಮ
ಹೆಂಡಿರುಗಳು ತಾವು | ಸೇರಿಮು-
ನ್ನೂರರವತ್ತು ಜನವು | ಗಂಧರ್ವರು
ಬಂಡೆಬ್ಬಿಸಿ ಪುರವು | ದಂಡು
ಮುಂದಾಗೆ ರಿಪುಬಲವು | ಕ್ಷೀಣಗತಿ
ಹೊಂದುತಲಿರೆ ಪುರವು 25
ಸ್ತ್ರೀಜಿತನಾಗಿಹಕಾರಣದಲಿಯಾ
ರಾಜಪುರಂಜನಗೆ | ಯತ್ನವಿ-
ಲ್ಲದೆ ತನ್ನಯಪುರಿಗೆ | ಕೇಡುಬಂ-
ದರು ತೋರದು ಕೊನೆಗೆ |
ಶೋಕದಿ ಮನದೊಳಗೆ | ಮಿ
ಡುಕುತಲಿರಲಾನೃಪತಿಮೇಗೆ | ಮತ್ತು
ಶತ್ರುಗಳುನೆರೆಯೆ ಹೀಗೆ 26
ಯವನೇಶ್ವರನೊಬ್ಬನುಭಯಪ್ರಜ್ವಾ
ರಾದಿ ಸೈನಿಕರನು | ಕಾಲಕನ್ಯಾಖ್ಯ
ಯುವತಿಯನ್ನು | ಕರೆದುಕೊಂ-
ಡೀಪುರವ ಸೇರಿದನು |
ಬವರದಿ ಗೆದ್ದನು ಭವಿಸಿದನಾ
ಕನ್ಯಾಮಣಿಪಟ್ಣವನು | ಭೋಗಿಸಿದ-
ಳಾಪ್ರಜ್ವಾರನನು | ಸುಡಲುಪುರಿ
ಕಂಡು ಪುರಂಜನನು 27
ಕಾಲಕನ್ಯೆ ತಾ ಲೀಲೆಯಿಂದಲಿ ನೃ-
ಪಾಲನ ಹತ್ತಿಗೆಯಾ | ಪಿಡಿಯೆ ಹಾ-
ಹಾಯೆನಲಾರಾಯಾ | ಅಬಲತೋ-
ರದು ಮುಂದೆ ಉಪಾಯ |
ಬಾಲಕರನು ಪತ್ನಿಯ | ನುಕೂಗಿಬಿಡು-