ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಯ ಮಂಗಳಂ ಸತ್ಯಧೀರತೀರ್ಥರಿಗೆ ಶುಭಮಂಗಳಂ ಯತೀ ಗುಣಮಣಿಗೆ ಪ ಜಗದುದರಧರನಾದ ಜಗವ ಸೃಷ್ಟಿಸಿದಂಥ ಜಗವ ಪಾಲಿಸುವ ಶ್ರೀ ಜಗದೀಶನಾ ತ್ರಿಗುಣಮಾನಿಯಳಿಂದ ಬಗೆ ಬಗೆಯ ಸ್ತುತಿಗೋಳ್ವ ರಘುವರನ ದಿವ್ಯ ಚರಣಗಳ ಸೇವಿಪಗೆ 1 ಜಗದೀಶನಾಜ್ಞೆಯಿಂ ಜಗಕೆ ಗುರುವೆನಿಸಿ ನಾ- ಲ್ಮೊಗನೈಯ್ಯ ಸರ್ವಪರಿಹಾರನೆನಿಸಿದವಗೆ ಜಗದೊಳಿರುವ ಅಜ್ಞ ಜನರುಗಳಿಗೆ ಪಂಚಮು- ದ್ರೆಗಳನೇ ಇತ್ತು ಪಾಪಗಳ ತರಿದವಗೆ 2 ಸತ್ಯವೀರರು ಕರಗಳೆತ್ತಿ ಉತ್ತಮಪದವ ಇತ್ತದ್ದೆ ಪುಸಿಯೆಂದು ನುಡಿದವರ ಮುಖಕೆ ಮೃತ್ತಿಕೆಯನು ಹಚ್ಚಿ ಹತ್ತುಯಂಟೋ ರೂಪ ಸ- ರ್ವೋತ್ತಮನ ಪೂಜಿಸಿದ ಸತ್ಯಧೀರರಿಗೆ 3 ಪುರಕಾಶಿಯಿಂದ ರಾಮೇಶ್ವರದ ಪರಿಯಂತ ಇರುವ ಕ್ಷೇತ್ರಗಳಲ್ಲಿಯ ಮಹಿಮೆಯಾ ದುರುಳ ಕಲಿಯಲಿ ಕಡಿಮೆಯಾಗಬಾರದು ಮನುಜ ಸಿರಿರಾಮನಾಶ್ರಯದಿ ಜನಿಸಿ ಬಂದವಗೆ 4 ಕರುಣಾಸಾಗರನಿಗೆ ಕರೆದಲ್ಲಿ ಬರುವಗೆ ಶರಣುಬಂದವರ ಪರಿಪಾಲಿಸುವಗೆ ವರಗುರು ಮಧ್ವರಾಯರ ಪೀಠಪಾತ್ರಗೆ ಧೀರ ಹನುಮೇಶವಿಠಲ 5
--------------
ಹನುಮೇಶವಿಠಲ
ಭವ ಭಯದಾ ಕೊಳೆ ತೊಳೆÉದಾನಂದವೀವ ಸಾರಂಸಂಸಾರ ಸಾರಂ ಪ. ಸುಳಿದು ಯಮಭಟರೆಳೆಯುವ ಕಾಲದಿ ಪರಿ ಸಾರ ಮನುಜರು ಅ.ಪ. ಅಳಿದವರಾರು ಝಳಝಳ ಮನದಿಂ ಕಳೆಗೊಟ್ಟಿಹ ಪುರುಷನಾರುಂ ಸಲೆ ನಾರದರಲ್ಲದೆ ಯಿದನಂ ಸೆಳೆದುರೆ ಭಕ್ತಿಯೊಳ್ ಹರಿಯಂ ಅಳವಲ್ಲದಾನಂದದಿಂ ಹರಿ ಸುಳಿವ ಪೊಳೆವ ಮನದೊಳಗಿಹನೆನುತಂ ಸಾರಿ ಹರಿದನಂ ಸಾರಂ ಸಂಸಾರಂ 1 ಅರ್ಣವದೊಳು ಭವಾರ್ಣ ನಿರ್ಮಾಣನ ಕರ್ನದೊಳಾಲಿಸಿ ಧ್ವನಿಮಾಡಿ ನಿರ್ಣಯದಲಿ ಸ್ವರ್ಣರೂಪನ ಜೀರ್ಣಿಪ ವೀಣಾನಾದದೀ ಸಾರಂ ಕರ್ಣಾನಂದದಿ ಹಾಡಿದನಾರುಂ ವರ್ಣಾಶ್ರಮ ಧರ್ಮ ಮರ್ಮವರಿತು ಚರ್ಮಸುಖವಳಿದು ಪೂರ್ಣಜ್ಞಾನದ ಪುರಂದರದಾಸರಲ್ಲಿದೆ ಈ ಸಾರಂ ಸಂಸಾರಂ 2 ತರಲಾನಂದದಿಂ ಸರಿಗಮ ಪದನಿಸ ಸನಿದಪ ಮಗರಿಸ ಶೋಡಷಕ್ಷರದಿಂ ತರಲಾ ಸಂಗೀತಕೆ ಸರಳಾಗಿಹ ಹರಿ ನಾಮಾಮೃತವಂ ಧರಿಶಿದ ಪುರಂದರರಂ ಶರಣ ಭರಣ ಕರುಣ ಪಡೆವುದು ನಿರುತ ಹರಿ ಶರಣರೆನುತ ಅರುಹಿದ ಸಂಗೀತವೀ ಸಾರಂ ಸಂಸಾರಂ 3 ಈ ತೆರ ಭಜಿಸಿದಗ್ಯಾತರ ಭಯ ಪಾತಕಹರ ಜಗದೀಶ ಮಾನಸ ದಾತುರದೊಳು ಹರಿ ದಾತನೆಂದರಿತು ನೀತಾಚಾರದಿ ಯಾವಾತ ಸ್ತುತಿಸಲು ಜ್ಯೋತಿ ಪ್ರಕಾಶದಿ ತನುಜಾತನಾಗಿ ಬಹ ಪ್ರೀತಿಗೊಡುತ ಖ್ಯಾತ ಭಕ್ತ ಪಾರಿಜಾತನೆಂದು ತಿಳಿದಾತಗೆ ಇದು ಸಾರಂ ಸಂಸಾರಂ 4 ಭಗವಂತನ ಧ್ಯಾನಿಪನ ಪುಡುಕುತ ಮಿಗೆ ಸಂಚರಿಸುತಲಿಹರೀಗಲು ಭಾಗವತರಿದು ಸತ್ಯಂ ಜಗಕೆ ಜಗದೀಶ ಶ್ರೀ ಶ್ರೀನಿವಾಸನೆಂದು ಮಿಗೆ ಜಗದಾನಂದ ಪುಳಕಿತ ತನುವಿನ ಜೀವರ ಸೊಗವಿಲಿ ನಾಲ್ಮೊಗನೈಯ್ಯನು ಸಿಗುವ ಪರಿಯಗೊಡುತಗಣಿತ ಮಹಿಮರು ಕರುಣಿಸಿದೀ ಸಾರಂ ಸಂಸಾರಂ 5
--------------
ಸರಸ್ವತಿ ಬಾಯಿ