ಜಯ ಗೋಪಾಲ ವಿಠಲ | ದಯೆ ತೋರೋ ಇವಗೇ ಪ
ನಯ ವಿನಯದಿಂ | ನಿನ್ನ | ದಾಸ್ಯಕಾಂಕ್ಷಿಪಗೇ ಅ.ಪ.
ಜ್ಞಾನ ವಿರಹಿತನಾಗಿ | ಅನೇಕ ಜನುಮಗಳುಹೀನಯೋನಿಯ ಪೊಂದಿ | ಜನಿಸಿಹನು ಇವನೂಮಾನನಿಧಿ ಮೋಹನ್ನ | ದಾಸರರೊಲಿಮೆಯಲಿಂದಆನಂದ ಮುನಿ ಮತದಿ | ತನುವ ಪೊತ್ತಿಹನೊ1
ಲೇಸು ಮೋಹನರಾಯ | ದಾಸವಂಶದಿ ಬಂದುಆಶುಗಾಧ್ಯಾತ್ಮರಾ | ಹಸ್ಯ ವರಿಯದಲೇದಾಸ ದೀಕ್ಷೆಯ ನಡೆಯೆ ಆಶಿಸುತ್ತಿಹಗೆ ಉಪದೇಶವಿತ್ತೆ ನಿನ್ನಾ | ದೇಶ ಸುಸ್ತೀಶಾ 2
ಲೌಕಿಕದ ಬಹು ಮೋಹ | ನೀ ಕಳೆದು ಸುಜ್ಞಾನಭಕುತಿ ವೈರಾಗ್ಯಗಳ | ನೀ ಕೊಡುವುದ್ಹರಿಯೇಮಾಕಳತ್ರನೆ ತವಾ | ಲೌಕಿಕಸುಮಹಿಮೆಗಳಸಾಕಷ್ಟು ತಿಳಿಸುತ ಲೋಕದಲಿ ಮೆರೆಸೊ 3
ಸೊಲ್ಲು ಸೊಲ್ಲು ಸಲಿಸುವುದ್ಹರಿಯೆಖುಲ್ಲ ಜನದಲ್ಲಣನೆ | ಗೊಲ್ಲ ಗೋಪಾಲಾ 4
ಬೋವ ಶ್ರೀಹರಿ ಇವನಶೈವಲಾವರಣ ಕಳೆ | ದೀವುದೋಜ್ಞಾನಾಕೈವಲ್ಯದಾತ ಗುರು | ಗೋವಿಂದ ವಿಠ್ಠಲನೆನೀವೊಲಿಯದಿನ್ನಿಲ್ಲ | ದೇವ ದೇವೇಶಾ 5