ಜಾನಕೀಶ ವಿಠಲ ನೀನಿವನ ಪೊರೆಯೋ ಪ
ಮೌನಿಕುಲ ಸನ್ಮಾನ್ಯ | ಆನತೇಷ್ಟಪ್ರದನೆಆನಮಿಸಿ ಪ್ರಾರ್ಥಿಸುವೆ | ಭಿನ್ನಪವ ಪಾಲಿಸೋ ಅ.ಪ.
ಸತಿ ಸ್ವಪ್ನದಲಿ | ಅವನಿಜೆಯ ವಲ್ಲಭನೆ ತವನಾಮ ಸೂಚಿಸಿಹೆ | ಎನ್ನ ರೂಪದಲೀಭವವನಧಿ ದಾಟಲ್ಕೆ | ತವನಾಮ ಸಂಸ್ಮರಣೆನವಪೋತವೆನಿಸಿಹುದು | ಪವನಾಂತರಾತ್ಮಾ 1
ನಿತ್ಯ ತವ ಪದದಲ್ಲಿ | ಭಕ್ತಿ ಕರುಣಿಸೋ 2
ಮಧ್ವಮತ | ಸಾಕಷ್ಟು ತಿಳಿಸುತ್ತಾಮಾಕಳತ್ರನೆ ಇವನಾ | ವ್ಯಾಕುಲದಲ್ಹರಿಸೀಲೌಕಿಕವೆಲ್ಲ ವೈ | ದೀಕ ವೆಂದೆನಿಸುತ್ತಪ್ರಾಕ್ಕು ಕರ್ಮವ ಕಳೆಯೊ | ಲೋಕ ಲೋಕೇಶಾ 3
ತಾರತಮ್ಯ ಜ್ಞಾನ | ಮೂರೆರಡು ಭೇದಗಳಸಾರತಮ ಹರಿಯು ನಿ | ಸ್ಸಾರ ಜಗವೆಂಬಾಚಾರುಮತಿಯನೆ ಇತ್ತು | ಪಾರಗಾಣಿಸು ಭವವಧೀರ ನೀನಲ್ಲದಲೆ | ಆರು ಕಾಯುವರೋ 4
ಜೀವ ಬಹು ಪರತಂತ್ರ ದೇವ ನಿಜ ಸ್ವತಂತ್ರಈ ವಿಧದ ಸುಜ್ಞಾನ | ಸಾರ್ವಕಾಲದಲೀದೇವ ನೀ ದಯದಿ ಈ | ಜೀವಂಗೆ ಕರುಣಿಸೇಭಾವದಲಿ ಬೇಡ್ವೆ ಗುರು | ಗೋವಿಂದ ವಿಠಲಾ 5